ಗೋ ಹತ್ಯೆ ಹೇಳಿಕೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

|

Updated on: Sep 29, 2023 | 2:59 PM

ಇಸ್ಕಾನ್ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎನ್ನುವ ಬಿಜೆಪಿ ಸಂಸದೆ ಮೇನಕಾ ಗಾಂಧಿ ಹೇಳಿಕೆಯ ವಿರುದ್ಧ ಇಸ್ಕಾನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ಇಸ್ಕಾನ್ ವಿರುದ್ಧ ಸಂಪೂರ್ಣ ಆಧಾರರಹಿತ ಆರೋಪಗಳನ್ನು ಹೊರಿಸಿದ್ದಕ್ಕಾಗಿ ನಾವು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇವೆ. ISKCON ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ನಿಂದನೆ ಹಾಗೂ ದುರುದ್ದೇಶಪೂರಿತ ಆರೋಪಗಳಿಂದ ತೀವ್ರ ನೋವುಂಟಾಗಿದೆ. ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ

ಗೋ ಹತ್ಯೆ ಹೇಳಿಕೆ: ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
ಮೇನಕಾ ಗಾಂಧಿ
Follow us on

ಇಸ್ಕಾನ್(ISKCON) ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎನ್ನುವ ಬಿಜೆಪಿ ಸಂಸದೆ ಮೇನಕಾ ಗಾಂಧಿ ಹೇಳಿಕೆಯ ವಿರುದ್ಧ ಇಸ್ಕಾನ್ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ಇಸ್ಕಾನ್ ವಿರುದ್ಧ ಸಂಪೂರ್ಣ ಆಧಾರರಹಿತ ಆರೋಪಗಳನ್ನು ಹೊರಿಸಿದ್ದಕ್ಕಾಗಿ ನಾವು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಿದ್ದೇವೆ. ISKCON ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ನಿಂದನೆ ಹಾಗೂ ದುರುದ್ದೇಶಪೂರಿತ ಆರೋಪಗಳಿಂದ ತೀವ್ರ ನೋವುಂಟಾಗಿದೆ. ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ.

ಜಾಗತಿಕವಾಗಿ ಅತ್ಯಂತ ಪ್ರಭಾವಶಾಲಿ ಕೃಷ್ಣ ಪಂಥವೆಂದು ಗುರುತಿಸಲ್ಪಟ್ಟಿರುವ ಇಸ್ಕಾನ್, ಈ ಆರೋಪಗಳನ್ನು ತಳ್ಳಿಹಾಕಿದೆ ಮತ್ತು ಸುಳ್ಳು ಎಂದು ಹೇಳಿದೆ. ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಮೇನಕಾ ಗಾಂಧಿ ಆಂಧ್ರಪ್ರದೇಶದ ಇಸ್ಕಾನ್‌ನ ಅನಂತಪುರ ಗೌಶಾಲಾಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ವಯಸ್ಸಾದ ಹಸುಗಳು, ಹೋರಿಗಳು ಅಥವಾ ಕರುಗಳಾಗಲಿ ಇಲ್ಲ ಅವುಗಳನ್ನು ಇಸ್ಕಾನ್ ಕಟುಕರಿಗೆ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ.

ಇಸ್ಕಾನ್ ಪ್ರತಿಕ್ರಿಯೆ ಮನೇಕಾ ಅವರ ಆರೋಪಗಳಿಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದ್ದು, ಅವುಗಳನ್ನು ಆಧಾರ ರಹಿತ ಎಂದು ಬಣ್ಣಿಸಿದೆ. ಇಸ್ಕಾನ್​ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್ ಮಾತನಾಡಿ, ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಗೂಳಿಗಳು ಇಸ್ಕಾನ್​ನ ಗೋಶಾಲೆಯಲ್ಲಿ ಬದುಕಿರುವವರೆಗೂ ಇರುತ್ತವೆ ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಟುಕರಿಗೆ ಮಾರುವುದಿಲ್ಲ.

ಮತ್ತಷ್ಟು ಓದಿ: ಇಸ್ಕಾನ್ ಕಟುಕರಿಗೆ ಹಸುಗಳನ್ನು ಮಾರುತ್ತಿದೆ ಎನ್ನುವ ಮೇನಕಾ ಗಾಂಧಿ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ

ಒಂದು ತಿಂಗಳ ಹಿಂದೆ ನಡೆದ ಸಂದರ್ಶನದ ಒಂದು ತುಣುಕು ಮೇನಕಾ ಗಾಂಧಿ ಒಂದು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಪ್ರಶಾಂತ್ ಕನೋಜಿಯಾ ತಮ್ಮ ಎಕ್ಸ್​ ಪೋಸ್ಟ್​ ಮಾಡಿದ್ದು, ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ಇದ್ದರೆ ಅದು ಇಸ್ಕಾನ್ ಎಂದು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಈಗ ಬಿಜೆಪಿಯ ಹಿರಿಯ ನಾಯಕಿ ಮೇನಕಾ ಗಾಂಧಿ ಕೂಡ ಅದೇ ಮಾತನಾಡಿದ್ದಾರೆ ಎಂದು ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ