ಕೇರಳ ನಿಫಾ ಮುಕ್ತ; ಎಲ್ಲ ಸೋಂಕಿತರ ಪರೀಕ್ಷೆ ಫಲಿತಾಂಶ ನೆಗೆಟಿವ್ ಎಂದ ಆರೋಗ್ಯ ಸಚಿವೆ ವೀಣಾ ಜಾರ್ಜ್
Nipah Virus: ಸೆಪ್ಟೆಂಬರ್ 16 ರಿಂದ ಇಲ್ಲಿ ನಿಫಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಕಾರಣ ಕೇರಳ ಸರ್ಕಾರವು ಎಲ್ಲಾ ವಲಯಗಳಲ್ಲಿನ ನಿಯಂತ್ರಣವನ್ನು ಹಿಂಪಡೆದಿದೆ. ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಿಲ್ಲಾಧಿಕಾರಿ ಎ ಗೀತಾ ಅವರು ಕಂಟೈನ್‌ಮೆಂಟ್ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳನ್ನು ತೆರೆಯಲಾಗುವುದು ಮತ್ತು ಸಾಮಾನ್ಯ ತರಗತಿಗಳು ಬುಧವಾರ ಪ್ರಾರಂಭವಾಗುತ್ತವೆ ಎಂದು ಹೇಳಿದರು.
ಕೋಯಿಕ್ಕೋಡ್ ಸೆಪ್ಟೆಂಬರ್ 29: ಕೇರಳದ (Kerala) ಕೋಯಿಕ್ಕೋಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ನಿಫಾ(Nipah Virus) ಸೋಂಕಿತರ ಪರೀಕ್ಷಾ ಫಲಿತಾಂಶ ಶುಕ್ರವಾರ ನೆಗೆಟಿವ್ ಬಂದಿದ್ದು, ಎಲ್ಲರೂ ನಿಫಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಹೇಳಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 9 ವರ್ಷದ ಬಾಲಕ ಸೇರಿದಂತೆ ಎಲ್ಲಾ ರೋಗಿಗಳ ಪರೀಕ್ಷೆಯಲ್ಲಿ ಎರಡು ಬಾರಿ ನೆಗೆಟಿವ್ ಬಂದಿದೆ ಎಂದು ಕೇರಳ ಆರೋಗ್ಯ ಸಚಿವರು ತಿಳಿಸಿದ್ದಾರೆ. ಡಬಲ್ ನೆಗೆಟಿವ್ ಎಂದರೆ ನಿರ್ದಿಷ್ಟ ಸಮಯದ ಮಧ್ಯಂತರದ ನಂತರ ತೆಗೆದುಕೊಂಡ ಪ್ರತಿ ನಿಫಾ ರೋಗಿಯ ಎರಡು ಮಾದರಿಗಳು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಇದರೊಂದಿಗೆ ರೋಗಿಗಳು ಮಾರಣಾಂತಿಕ ವೈರಸ್‌ನಿಂದ ಸಂಪೂರ್ಣ ಮುಕ್ತರಾಗಿದ್ದಾರೆ.
2023 ರಲ್ಲಿ ಮೊದಲ ನಿಫಾಗೆ ಬಲಿಯಾದ ತನ್ನ ತಂದೆಯಿಂದ ಹುಡುಗನಿಗೆ ಸೋಂಕು ತಗುಲಿತು. ಅವನು ಸೆಪ್ಟೆಂಬರ್ 9 ರಿಂದ 16 ರವರೆಗೆ ಕೋಯಿಕ್ಕೋಡ್ ಮಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದ . ಇವರ ಸೋದರಮಾವ, ಕೋಯಿಕ್ಕೋಡ್ನ ಇಕ್ರಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತ ಮತ್ತು ಚೆರುವನ್ನೂರ್ ಮೂಲದ ಇತರ ಮೂವರು ರೋಗಿಗಳ ಪರೀಕ್ಷೆ ನೆಗೆಟಿವ್ ಆಗಿದೆ. ಸೆಪ್ಟೆಂಬರ್ 28 ರ ಹೊತ್ತಿಗೆ, ವೀಕ್ಷಣೆಯಲ್ಲಿರುವ ಜನರ ಸಂಖ್ಯೆ 649 ಆಗಿದೆ.
ಸೆಪ್ಟೆಂಬರ್ 16 ರಿಂದ ಇಲ್ಲಿ ನಿಫಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಕಾರಣ ಕೇರಳ ಸರ್ಕಾರವು ಎಲ್ಲಾ ವಲಯಗಳಲ್ಲಿನ ನಿಯಂತ್ರಣವನ್ನು ಹಿಂಪಡೆದಿದೆ. ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಿಲ್ಲಾಧಿಕಾರಿ ಎ ಗೀತಾ ಅವರು ಕಂಟೈನ್‌ಮೆಂಟ್ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳನ್ನು ತೆರೆಯಲಾಗುವುದು ಮತ್ತು ಸಾಮಾನ್ಯ ತರಗತಿಗಳು ಬುಧವಾರ ಪ್ರಾರಂಭವಾಗುತ್ತವೆ ಎಂದು ಹೇಳಿದರು.
ಆದಾಗ್ಯೂ, ಜನರು ವೈರಸ್ ಸೋಂಕಿನ ವಿರುದ್ಧ ತಮ್ಮ ಜಾಗರೂಕತೆಯನ್ನು ಮುಂದುವರೆಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಒತ್ತಾಯಿಸಿದರು. ಸೆಪ್ಟೆಂಬರ್ 14 ರಿಂದ ಜಿಲ್ಲೆಯ ಎಲ್ಲಾ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಸೆಪ್ಟೆಂಬರ್ 12 ರಂದು ರಾಜ್ಯದಲ್ಲಿ ವೈರಸ್ ಹರಡುವಿಕೆ ಘೋಷಿಸಿದ ನಂತರ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಇಲ್ಲಿಯವರೆಗೆ ಒಟ್ಟು ಆರು ಜನರಿಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಎರಡು ಸಾವುಗಳಲ್ಲಿ ಆಗಸ್ಟ್ 30 ರಂದು ನಿಧನರಾದ ಮೊದಲ ವ್ಯಕ್ತಿ ಸೋಂಕು ಮೊದಲು ತಗುಲಿದ ವ್ಯಕ್ತಿ ಎಂದು ಕಂಡುಬಂದಿದ್ದು, ಇವರಿಂದ ಇತರರು ಸೋಂಕಿಗೆ ಒಳಗಾಗಿದ್ದಾರೆ.
ಸೆಪ್ಟೆಂಬರ್ 24 ರ ಹೊತ್ತಿಗೆ, ನಿಗಾದಲ್ಲಿರುವ ಜನರ ಸಂಖ್ಯೆ 915, ಆದರೆ ಅವರಲ್ಲಿ ಯಾರೂ ಹೆಚ್ಚಿನ ಅಪಾಯದ ವರ್ಗದಲ್ಲಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಯವರೆಗೆ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 377 ಮತ್ತು ನಕಾರಾತ್ಮಕ ಫಲಿತಾಂಶಗಳ ಸಂಖ್ಯೆ 363 ಎಂದು ಅವರು ಹೇಳಿದರು.
ಇದನ್ನೂ ಓದಿ: Nipah Virus: ನಿಫಾ ವೈರಸ್ ಮಕ್ಕಳನ್ನೇ ಹೆಚ್ಚು ಕಾಡುವುದೇಕೆ?
2018 ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಕಂಡುಬಂದಿದ್ದು, ಮೊದಲ ಪ್ರಕರಣವು ಮೇ 19, 2018 ರಂದು ವರದಿಯಾಗಿದೆ. ಜೂನ್ 1, 2018 ರ ವೇಳೆಗೆ 18 ರೋಗಿಗಳು ವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದು, ಅವರಲ್ಲಿ 17 ಜನರು ಸಾವಿಗೀಡಾಗಿದ್ದರು. ಈ ಸೋಂಕು ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಸೀಮಿತವಾಗಿತ್ತು.
ವೈದ್ಯರು ಮರಣ ಪ್ರಮಾಣವನ್ನು 2018 ರಲ್ಲಿ 94% ರಿಂದ 33% ಕ್ಕೆ ಇಳಿಸಿದ್ದಾರೆ. ಈ ಬಾರಿ, ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ಎಲ್ಲಾ ನಾಲ್ಕು ರೋಗಿಗಳನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ವೈರಸ್‌ಗೆ ಬಲಿಯಾದ ಮೊಹಮ್ಮದ್ ಅಲಿ ಮತ್ತು ಮಂಗಳತ್ ಹ್ಯಾರಿಸ್ ಅವರು ನಿಫಾ ವೈರಸ್ ಸೋಂಕಿಗೆ ಒಳಗಾಗುವ ಮೊದಲು ಸಾವಿಗೀಡಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ