ಜಗನ್ನಾಥನೇ ಡೊನಾಲ್ಡ್ ಟ್ರಂಪ್ ಪ್ರಾಣ ಉಳಿಸಿದ್ದು ಎಂದು ಇಸ್ಕಾನ್ ವಕ್ತಾರರೊಬ್ಬರು ಹೇಳಿದ್ದಾರೆ.
ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಭಾಷಣದ ಸಂದರ್ಭದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದಾಳಿಕೋರ ಗುಂಡು ಹಾರಿಸಿದ್ದ, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಜಿನ ಚೂರುಗಳು ಅವರ ಕಿವಿಗೆ ಹೊಕ್ಕಿರುವುದು ಬಿಟ್ಟರೆ ಯಾವುದೇ ಮಾರಣಾಂತಿಕ ಗಾಯಗಳು ಆಗಿಲ್ಲ.
ಜಗನ್ನಾಥ ದೇವರೇ ಡೊನಾಲ್ಡ್ ಟ್ರಂಪ್ ಪ್ರಾಣವನ್ನು ಉಳಿಸಿದ್ದಾಗಿ ಇಸ್ಕಾನ್ನ ವಕ್ತಾರ ರಾಧಾರಮಣ್ ದಾಸ್ ಹೇಳಿದ್ದಾರೆ. 48 ವರ್ಷಗಳ ಹಿಂದೆ ನ್ಯೂಯಾರ್ಕ್ನಲ್ಲಿ ಮೊದಲ ರಥಯಾತ್ರೆ ನಡೆದಿತ್ತು ಆಗ ಡೊನಾಲ್ಡ್ ಟ್ರಂಪ್ ಅದರಲ್ಲಿ ಭಾಗವಹಿಸಿದ್ದರು. ಹಾಗೆಯೇ ಭಕ್ತರಿಗೂ ಸಹಾಯ ಮಾಡಿದ್ದರು. ಈಗ ಜಗನ್ನಾಥನೇ ಬಂದು ಟ್ರಂಪ್ರನ್ನು ಕಾಪಾಡಿದ್ದಾರೆ ಎಂದು ಹೇಳಿದ್ದಾರೆ.
1976ರಲ್ಲಿ ಡೊನಾಲ್ಡ್ ಟ್ರಂಪ್ ಇಸ್ಕಾನ್ ಭಕ್ತರಿಗೆ ರಥಯಾತ್ರೆ ಆಯೋಜಿಸಲು ಸಹಾಯ ಮಾಡಿದ್ದರು, ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ್ಯೂಯಾರ್ಕ್ ನಗರದಲ್ಲಿ ಮೊದಲ ರಥಯಾತ್ರೆಯನ್ನು ಆಯೋಜಿಸಲು ಯೋಜಿಸುತ್ತಿದ್ದಾಗ ಹಲವು ಸವಾಲುಗಳು ಎದುರಾಗಿದ್ದವು, ಯಾತ್ರೆಗೆ ಅನುಮತಿಯೂ ಸಿಕ್ಕಿರಲಿಲ್ಲ, ಆಗ ಟ್ರಂಪ್ ಸಹಾಯ ಮಾಡಿದ್ದಾಗಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಟ್ರಂಪ್ ಹತ್ಯೆ ಪ್ರಯತ್ನ; ಹೆಂಡತಿ, ಮಕ್ಕಳನ್ನು ಕಾಪಾಡಲು ಗುಂಡಿಗೆ ಎದೆಯೊಡ್ಡಿದ ಅಪ್ಪ
ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು, ಟ್ರಂಪ್ ಕಿವಿಗೆ ಗಾಯವಾಗಿದೆ, ದಾಳಿಕೋರನನ್ನು ಹತ್ಯೆ ಮಾಡಲಾಗಿದೆ.
ದಾಳಿಯಲ್ಲಿ ಅವರ ಬೆಂಬಲಿಗರೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯಿದ್ದು, ಇಬ್ಬರು ಗಾಯಗೊಂಡಿದ್ದಾರೆ. ದಾಳಿಯ ನಂತರ, ಟ್ರಂಪ್ ಅವರ ರಹಸ್ಯ ಏಜೆಂಟ್ ತಕ್ಷಣ ದಾಳಿಕೋರನ ತಲೆಗೆ ಗುಂಡು ಹಾರಿಸಿದ್ದಾರೆ, ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾಳಿಕೋರನನ್ನು ಸ್ಥಳೀಯ ಬಟ್ಲರ್ ಕೌಂಟಿ ಪ್ರದೇಶದ 20 ವರ್ಷದ ಥಾಮಸ್ ಮ್ಯಾಥ್ಯೂ ಕುಕ್ ಎಂದು ಎಫ್‌ಬಿಐ ಗುರುತಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Mon, 15 July 24