AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಬಂದಿತ್ತು ಬಾಂಬ್ ಬೆದರಿಕೆ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಏತನ್ಮಧ್ಯೆ, ಮುಂಬೈ ಪೊಲೀಸರು ಮದುವೆಗೆ ಸಂಬಂಧಿಸಿದಂತೆ ಮಹತ್ವದ ತನಿಖೆಯಲ್ಲಿ ತೊಡಗಿದ್ದಾರೆ. ಅನಂತ್ ಅಂಬಾನಿ ಮದುವೆಗೆ ಬಾಂಬ್ ಬೆದರಿಕೆ ಬಂದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮದುವೆಗೆ ಬಂದಿತ್ತು ಬಾಂಬ್ ಬೆದರಿಕೆ
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​
ನಯನಾ ರಾಜೀವ್
|

Updated on: Jul 15, 2024 | 12:57 PM

Share

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಶುಕ್ರವಾರ ಹಸೆಮಣೆ ಏರಿದರು. ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲಿ ಬಾಂಬ್​ ಇಟ್ಟಿರುವ ಕುರಿತು ಬೆದರಿಕೆ ಹಾಕಲಾಗಿತ್ತು.  ಪೊಲೀಸರು ಕೂಡಲೇ ಸನ್ನದ್ಧರಾಗಿ ಭದ್ರತೆಯನ್ನು ಹೆಚ್ಚಿಸಿದ್ದರು.

ನಾಳೆ ಅಂಬಾನಿ ಮದುವೆಯಲ್ಲಿ ಬಾಂಬ್ ಸ್ಫೋಟವಾಗಲಿದೆ ಎಂದು ಬಳಕೆದಾರರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಹಿಂದೂಸ್ತಾನ್ ಟೈಮ್ಸ್​ ವರದಿ ಪ್ರಕಾರ, ಇದು ಸುಳ್ಳು ಸುದ್ದಿ ಎಂದು ಗೊತ್ತಿತ್ತು ಆದರೂ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮದುವೆಯ ಸ್ಥಳದ ಸುತ್ತಲೂ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದರು.

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ವಿವಾಹವಾದರು.

ಮತ್ತಷ್ಟು ಓದಿ: Anant Ambani- Radhika Merchant Wedding: ಅದ್ದೂರಿಯಾಗಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಮದುವೆಯಾದ ಅನಂತ್ ಅಂಬಾನಿ

ಅಂಬಾನಿ ಮದುವೆಯಲ್ಲಿ ಒಂದು ಬಾಂಬ್ ಸ್ಫೋಟಗೊಂಡರೆ ನಾಳೆ ಅರ್ಧ ಜಗತ್ತು ತಲೆಕೆಳಗಾಗುತ್ತದೆ ಎಂದು ಬರೆಯಲಾಗಿತ್ತು. ವೈಯಕ್ತಿಕ ಮೊಬೈಲ್ ಫೋನ್‌ಗೆ ಕಳುಹಿಸಲಾದ ಕ್ಯೂಆರ್ ಕೋಡ್ ಆಧಾರದ ಮೇಲೆ ಮಾತ್ರ ವಿವಾಹ ಸಮಾರಂಭಕ್ಕೆ ಪ್ರವೇಶವನ್ನು ಏರ್ಪಡಿಸಲಾಗಿತ್ತು. ಅಂಬಾನಿ ಕುಟುಂಬದ ಒಡೆತನದ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ವಿವಾಹದಲ್ಲಿ ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರಿಕೆಟಿಗರು ಬಣ್ಣ-ಕೋಡೆಡ್ ಪೇಪರ್ ರಿಸ್ಟ್‌ಬ್ಯಾಂಡ್‌ಗಳನ್ನು ಧರಿಸಿ ಪ್ರವೇಶ ಮಾಡಿದರು.

ಪೊಲೀಸರು ಯಾವುದೇ ಎಫ್​ಐಆರ್​ ದಾಖಲಿಸಿಲ್ಲ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶುಕ್ರವಾರದಂದು ಬಿಕೆಸಿಯ ಮದುವೆ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು.

ಭಾನುವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಸಂದೇಶವನ್ನು ವದಂತಿ ಎಂದು ಪರಿಗಣಿಸಲಾಗಿದೆ, ಆದರೆ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ನೋಡುತ್ತಿರುವ ಪೊಲೀಸ್ ತಂಡವು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಅಂಬಾನಿ ಮದುವೆಗೆ ಬಳಸಿದ್ದ ಕಾರಿನ ನಂಬರ್ ಪ್ಲೇಟ್ ನಲ್ಲಿ ಮೂರು ಸೊನ್ನೆಗಳು ಕಾಣೆಯಾಗಿವೆ. ಅನಂತ್ ಅಂಬಾನಿ ಮದುವೆಗೆ ವಿಐಪಿ ಕಾರುಗಳ ದಂಡೇ ಇತ್ತು, ಈ ಕಾರು ಕೂಡ ಸೇರಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ