Sign In

By signing in or creating an account, you agree with Associated Broadcasting Company's Terms & Conditions and Privacy Policy.

Anant Ambani- Radhika Merchant Wedding: ಅದ್ದೂರಿಯಾಗಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಮದುವೆಯಾದ ಅನಂತ್ ಅಂಬಾನಿ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಪ್ರಾರಂಭವಾದ ವಿವಾಹಪೂರ್ವ ಸಂಭ್ರಮಾಚರಣೆಯ ಬಳಿಕ ಅವರಿಬ್ಬರೂ ಜುಲೈ 12ರಂದು ರಾತ್ರಿ ಅಧಿಕೃತವಾಗಿ ವಿವಾಹವಾಗಿದ್ದಾರೆ. ಈ ಮದುವೆಯನ್ನು ಈ ಶತಮಾನದ ಅತ್ಯಂತ ಅದ್ದೂರಿ ಮದುವೆ ಎನ್ನಲಾಗುತ್ತಿದೆ.

Anant Ambani- Radhika Merchant Wedding: ಅದ್ದೂರಿಯಾಗಿ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಮದುವೆಯಾದ ಅನಂತ್ ಅಂಬಾನಿ
ರಾಧಿಕಾ ಮರ್ಚೆಂಟ್ ಜೊತೆ ಮದುವೆಯಾದ ಅನಂತ್ ಅಂಬಾನಿ
Follow us
ಸುಷ್ಮಾ ಚಕ್ರೆ
|

Updated on:Jul 13, 2024 | 9:41 AM

ಮುಂಬೈ: ಹಲವಾರು ಪೂರ್ವ ವಿವಾಹ ಸಮಾರಂಭಗಳು ಮತ್ತು ಆಚರಣೆಗಳ ನಂತರ ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿನ್ನೆ ರಾತ್ರಿ ನಡೆದ ಅದ್ದೂರಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈ ಅದ್ಧೂರಿ ಸಮಾರಂಭವನ್ನು ನಡೆಸಲಾಯಿತು. ಅವರ ಮದುವೆಯಲ್ಲಿ ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಉದ್ಯಮದ ಅನೇಕ ಗಣ್ಯರು ಭಾಗವಹಿಸಿದ್ದರು.

ಈ ವರ್ಷದ ಮಾರ್ಚ್ ಆರಂಭದಿಂದ ವಿವಾಹ ಪೂರ್ವದ ಸಮಾರಂಭಗಳ ಸರಣಿ ಆರಂಭವಾಗಿತ್ತು. ಶುಕ್ರವಾರ ಸಂಜೆ ಬಾರತ್​ನೊಂದಿಗೆ ಅಂಬಾನಿ ದಂಪತಿ ಮದುವೆ ಮಂಟಪಕ್ಕೆ ಹೊರಟಿದ್ದರು. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: Nita Ambani Dance: ಮದುವೆ ದಿಬ್ಬಣದ ವೇಳೆ ಡೋಲು ವಾದ್ಯದ ಶಬ್ದಕ್ಕೆ ಡ್ಯಾನ್ಸ್ ಮಾಡಿದ ನೀತಾ ಅಂಬಾನಿ

ತಮ್ಮ ವರಮಾಲಾ ಸಮಾರಂಭಕ್ಕಾಗಿ ರಾಧಿಕಾ ಮರ್ಚೆಂಟ್ ಸುಂದರವಾದ ಅಬು ಜಾನಿ ಸಂದೀಪ್ ಖೋಸ್ಲಾ ಲೆಹೆಂಗಾವನ್ನು ಧರಿಸಿದ್ದರು. ದಂತದ ಜರ್ದೋಜಿ ಕಟ್-ವರ್ಕ್, ಐದು ಮೀಟರ್ ಹೆಡ್ ವೆಲ್ ಮತ್ತು ಟಿಶ್ಯೂ ದುಪ್ಪಟ್ಟಾದೊಂದಿಗೆ ಈ ಘಾಗ್ರಾವನ್ನು ಡಿಸೈನ್ ಮಾಡಲಾಗಿತ್ತು. ವಜ್ರಗಳು ಮತ್ತು ಪಚ್ಚೆಗಳಿಂದ ಮಾಡಿದ ಸುಂದರವಾದ ಆಭರಣದೊಂದಿಗೆ ರಾಧಿಕಾ ಕಂಗೊಳಿಸಿದರು.

View this post on Instagram

A post shared by YPB (@yourpoookieboo)

ಅನಂತ್ ಅಂಬಾನಿ ಅವರ ಬಾರಾತ್‌ನ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಟರಾದ ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಅರ್ಜುನ್ ಕಪೂರ್, ಅನನ್ಯ ಪಾಂಡೆ, ಅನಿಲ್ ಕಪೂರ್ ಮತ್ತು ರಜನಿಕಾಂತ್ ಸೇರಿದಂತೆ ಇತರರು ಬಾರಾತ್‌ನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿವೆ. ಕುಸ್ತಿಪಟು, ನಟ ಜಾನ್ ಸೀನಾ ಕೂಡ ಇತರ ಅತಿಥಿಗಳೊಂದಿಗೆ ಬಾರಾತ್‌ನಲ್ಲಿ ಧೋಲ್ ಬೀಟ್‌ಗಳಿಗೆ ನೃತ್ಯ ಮಾಡಿದ್ದಾರೆ.

ವಿವಾಹದ ಮೊದಲು, ಅನಂತ್ ಅಂಬಾನಿ ಅವರು ತಮ್ಮ ಅಜ್ಜ ಧೀರೂಬಾಯಿ ಅಂಬಾನಿ ಅವರನ್ನು ನೆನಪಿನಲ್ಲಿ ಸಣ್ಣ ಪೂಜೆಯನ್ನು ಮಾಡಿದರು.

ಇದನ್ನೂ ಓದಿ: ಅನಂತ್​ ಅಂಬಾನಿ ವಿವಾಹದಲ್ಲಿ ರಜನಿಕಾಂತ್​ ಮಸ್ತ್​ ಡ್ಯಾನ್ಸ್​; ಯುವಕರೂ ನಾಚಬೇಕು

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ವಿವಾಹದ ನಂತರ 3 ಕಾರ್ಯಕ್ರಮಗಳು ನಡೆಯಲಿವೆ. ಇಂದು (ಜುಲೈ 13) ‘ಶುಭ್ ಆಶೀರ್ವಾದ’, ‘ಮಂಗಲ್ ಉತ್ಸವ’ ನಡೆಯಲಿದೆ. ಜುಲೈ 14 ರಂದು ಮದುವೆಯ ಆರತಕ್ಷತೆ ಮತ್ತು ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Sat, 13 July 24

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!