ಶ್ರೀಹರಿಕೋಟಾ: ಭಾರತವು ಸಂವಹನ ಸುಧಾರಣೆಗೆ ಸಂಬಂಧಿಸಿದ ಉಪಗ್ರಹವೊಂದನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ CMS-01 ಉಪಗ್ರಹವನ್ನು ಇಂದು ಮಧ್ಯಾಹ್ನ ಯಶಸ್ವಿಯಾಗಿ ಉಡಾಯಿಸಿತು. ಕೊರೊನಾ ಪಿಡುಗಿನ ನಂತರ ಇಸ್ರೋ ಉಡಾಯಿಸಿದ ಎರಡನೇ ಉಪಗ್ರಹ ಇದು.
ಜಿಸ್ಯಾಟ್ ಮತ್ತು ಇನ್ಸ್ಯಾಟ್ ನಂತರ CMS ಉಪಗ್ರಹ ಸರಣಿಯ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳನ್ನು ಒಳಗೊಂಡ ದೇಶದ ದೂರದ ಭೂಭಾಗಗಳಿಗೆ ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಸಂವಹನ ಸೇವೆ ಒದಗಿಸಲಿದೆ. ಸಂವಹನ ಸುಧಾರಣೆಗೆ ಮೀಸಲಾದ 42ನೇ ಉಪಗ್ರವಾದ CMS-01, ಈ ಸರಣಿಯ ಮೊದಲ ಉಪಗ್ರಹವಾಗಿದೆ.
PSLV-C50 ರಾಕೆಟ್ ಈ ಉಪಗ್ರಹವನ್ನು ಅಂತರಿಕ್ಷಕ್ಕೆ ಹೊತ್ತೊಯ್ದಿತು. 2011ರಲ್ಲಿ ಉಡಾವಣೆಗೊಂಡ GSAT-12 ಉಪಗ್ರಹದ ಕೆಲಸಗಳನ್ನು CMS-01 ಇನ್ನು ಮುಂದೆ ನಿರ್ವಹಿಸಲಿದೆ. ಇದು PSLV-C50 ರಾಕೆಟ್ ಹೊತ್ತೊಯ್ದ 52ನೇ ಉಪಗ್ರಹ. ದೇಶದ ಸಂವಹನ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುವ ನಿರೀಕ್ಷೆಯನ್ನು ಇಸ್ರೋ ವ್ಯಕ್ತಪಡಿಸಿದೆ.
PSLV-ಸಿ-49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ISRO
Published On - 6:25 pm, Thu, 17 December 20