ಕುನಾಲ್ ಕಮ್ರಾ ಮೇಲೆ ನ್ಯಾಯಾಂಗ ನಿಂದನೆ ಆರೋಪ: ನಾಳೆ ಸುಪ್ರೀಂಕೋರ್ಟ್ ತೀರ್ಪು
ಕುನಾಲ್ರ ನಾಲ್ಕು ಟ್ವೀಟ್ಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ಅಟಾರ್ನಿ ಜನರಲ್, ಈ ನಾಲ್ಕು ಟ್ವೀಟ್ಗಳು ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲ, ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ನಡುವೆ ಇರಬೇಕಾದ ತೆಳು ರೇಖೆಯನ್ನು ಉಲ್ಲಂಘಿಸಿವೆ ಎಂದಿದ್ದರು.
ದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದನ್ನು ಟ್ವೀಟ್ ಮೂಲಕ ವ್ಯಂಗ್ಯ ಮಾಡಿ, ನ್ಯಾಯಾಂಗ ನಿಂದನೆ ಆರೋಪ ಹೊತ್ತಿದ್ದ ಖ್ಯಾತ ಕಾಮಿಡಿಯನ್ ಕುನಾಲ್ ಕಮ್ರಾ ಮತ್ತು ಕಾರ್ಟೂನಿಸ್ಟ್ ರಚಿತಾ ತನೇಜಾ ವಿಚಾರಣೆಯ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ನಾಳೆ ನೀಡಲಿದೆ. ಇಂದಿನ ವಿಚಾರಣೆ ವೇಳೆ ಕಮ್ರಾ ಕೋರ್ಟ್ನಲ್ಲಿ ಹಾಜರು ಇರಲಿಲ್ಲ.
2018ರಲ್ಲಿ ಇಂಟೀರಿಯರ್ ಡಿಸೈನರ್ ಓರ್ವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ನವೆಂಬರ್ 4ರಂದು ಅರ್ನಬ್ ಗೋಸ್ವಾಮಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ನವೆಂಬರ್ 11ರಂದು ಸುಪ್ರೀಂಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಗ್ಗೆ ಕುನಾಲ್ ಮತ್ತು ರಚಿತಾ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದರು.
ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ವಕೀಲರು, ಕಾನೂನು ವಿದ್ಯಾರ್ಥಿಗಳು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದರು. ಅಟಾರ್ನಿ ಜನರಲ್ ಅನುಮತಿಯನ್ನೂ ನೀಡಿದ್ದರು. ರಚಿತಾ ವಿಚಾರದಲ್ಲೂ ಇದೇ ರೀತಿ ಕಾನೂನು ವಿದ್ಯಾರ್ಥಿಗಳ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಕುನಾಲ್ ಮತ್ತು ರಚಿತಾ ವಿರುದ್ಧ ಅನೇಕರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಕೋರ್ಟ್, ನಾಳೆ ಅಂತಿಮವಾಗಿ ಆದೇಶ ನೀಡಲಿದ್ದು, ಇವರಿಬ್ಬರ ಟ್ವೀಟ್ಗಳು ನ್ಯಾಯಾಂಗ ನಿಂದನೆ ಹೌದಾ? ಅಲ್ಲವಾ ಎಂಬುದನ್ನು ಸ್ಪಷ್ಟಪಡಿಸಲಿದೆ.
ಕುನಾಲ್ರ ನಾಲ್ಕು ಟ್ವೀಟ್ಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ಅಟಾರ್ನಿ ಜನರಲ್, ಈ ನಾಲ್ಕು ಟ್ವೀಟ್ಗಳು ಕೆಟ್ಟ ಅಭಿರುಚಿ ಹೊಂದಿರುವುದು ಮಾತ್ರವಲ್ಲ, ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ನಡುವೆ ಇರಬೇಕಾದ ತೆಳು ರೇಖೆಯನ್ನು ಉಲ್ಲಂಘಿಸಿವೆ ಎಂದಿದ್ದರು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಶಾ ಅವರಿದ್ದ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.
ವಕೀಲ ಪ್ರಶಾಂತ್ ಭೂಷಣ್ಗೆ ರೂ. 1 ಜುಲ್ಮಾನೆ ವಿಧಿಸಿದ ಸುಪ್ರೀಂ ಕೋರ್ಟ್
ತಪ್ಪಿತಸ್ಥ ಪ್ರಶಾಂತ್ ಭೂಷಣ್ ಪರ ಆ ಒಂದು ರೂಪಾಯಿ ದಂಡ ಕಟ್ಟಿದ್ದು ಯಾರು ಗೊತ್ತಾ?
ಗಣರಾಜ್ಯೋತ್ಸವ ದಿನಾಚರಣೆಯಂದೇ ಅಯೋಧ್ಯಾ ಮಸೀದಿಗೆ ಶಂಕು ಸ್ಥಾಪನೆ; ಇದು ಬಾಬ್ರಿ ಮಸೀದಿಗಿಂತಲೂ ವಿಶಾಲ, ವಿಭಿನ್ನ
Published On - 3:41 pm, Thu, 17 December 20