ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಉಡಾವಣೆ ಯಶಸ್ವಿ: 36 ಉಪಗ್ರಹ ಹೊತ್ತು ಆಕಾಶಕ್ಕೆ ಹಾರಿದ GSLV MkIII
ಇದೇ ಮೊದಲ ಬಾರಿಗೆ ಇಸ್ರೋದ ಅತ್ಯಂತ ಭಾರವಾದ ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, 36 ಉಪಗ್ರಹ ಹೊತ್ತು GSLV MkIII ಆಕಾಶಕ್ಕೆ ಹಾರಿದೆ.
ಶ್ರೀಹರಿಕೋಟಾ(ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಂತ ಭಾರವಾದ ರಾಕೆಟ್ GSLV Mk III ಉಡಾವಣೆ ಯಶಸ್ವಿಯಾಗಿದೆ. ಇದೇ ಮೊದಲ ಬಾರಿಗೆ LVM3-M2 ನಲ್ಲಿ 36 ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳ ಮೊದಲ ವಾಣಿಜ್ಯ ಉಡಾವಣೆ ಮಾಡಲಾಗಿದೆ. ಇದರೊಂದಿಗೆ ಇಸ್ರೋ ಇತಿಹಾಸ ನಿರ್ಮಿಸಿದೆ.
ಗ LVM3 M2 ಅಕ್ಟೋಬರ್ 23ರ ಮಧ್ಯರಾತ್ರಿ ಸರಿಯಾಗಿ 12.7ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. 36 ‘OneWeb’ ಉಪಗ್ರಹಗಳನ್ನು ಹೊತ್ತು GSLV Mk III ಉಡಾವಣಾ ನೌಕೆ ನಭಕ್ಕೆ ಹಾರಿದೆ.
#WATCH | ISRO launches LVM3-M2/OneWeb India-1 Mission from Satish Dhawan Space Centre (SDSC) SHAR, Sriharikota
(Source: ISRO) pic.twitter.com/eBcqKrsCXn
— ANI (@ANI) October 22, 2022
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜಿಎಸ್ಎಲ್ವಿ ರಾಕೆಟ್ ಅನ್ನು ವಾಣಿಜ್ಯ ಉಡಾವಣೆಗೆ ಬಳಸಲಾಗಿದ್ದು, ಇಸ್ರೋಗೆ ಈ ಮಿಷನ್ ಐತಿಹಾಸಿಕವಾಗಿದೆ. ಒನ್ ವೆಬ್ ಇದು ಇಂಡಿಯಾ ಭಾರ್ತಿ ಗ್ಲೋಬಲ್ ಮತ್ತು ಯುಕೆ ಸರ್ಕಾರದ ನಡುವಿನ ಜಂಟಿ ಉದ್ಯಮವಾಗಿದೆ. ಇಸ್ರೋದ ಅತ್ಯಂತ ಭಾರವಾದ ಲಾಂಚರ್‌ಗೆ ಇದು ಮೊದಲ ವಾಣಿಜ್ಯ ಬಾಹ್ಯಾಕಾಶವಾಗಿದ್ದು, 5,796 ಕೆಜಿಯಷ್ಟು ಭಾರವಾದ ಪೇಲೋಡ್‌ನೊಂದಿಗೆ ಉಡಾವಣೆ ಮಾಡಲಾಗಿದೆ.
Published On - 12:20 am, Sun, 23 October 22