ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ಕೆ ಕೇಂದ್ರದಿಂದ ಗ್ರೀನ್ ಸಿಗ್ನಲ್, ಅಂಗನವಾಡಿಯಿಂದಲೇ ಆರಂಭ
ಹಲವರ ವಿರೋಧದ ನಡುವೆಯೂ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಂಗನವಾಡಿ ಹಂತದಿಂದಲೇ ಎನ್ಇಪಿ ಆರಂಭವಾಗಲಿದೆ.
ಬೆಂಗಳೂರು : ಭಾರತದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು (National Education Policy 2020) ಜಾರಿಗೆ ತಂದಿದೆ. ವಿರೋಧದ ನಡುವೆಯೂ ಶಿಕ್ಷಣ ಇಲಾಖೆ NEP ಜಾರಿಗೆ ಮುಂದಾಗಿದೆ ಈಗ ಕೇಂದ್ರ ಶಿಕ್ಷಣ ಇಲಾಖೆಯಿಂದಲೂ ಎನ್ ಇಪಿ ಪಠ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದು ಶಿಕ್ಷಣ ಇಲಾಖೆಯ ನಡೆಗೆ ಮತಷ್ಟು ಬಲ ಹೆಚ್ಚಿಸಿದೆ
ಅಂಗನವಾಡಿ ಹಂತದಿಂದಲೇ ಎನ್ಇಪಿ ಆರಂಭ
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಸರ್ಕಾರ ಜಾರಿಗೊಳಿಸಿದೆ. ದೇಶದ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದಕ್ಕಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ, ಬದಲಾವಣೆ ತರಲಿರುವ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು, ಇದೇ ವರ್ಷದಿಂದಲೇ ಎನ್‌ಇಪಿ-2020 ಜಾರಿಗೆ ಮುಂದಾಗಿದೆ.. ಪ್ರಾಥಮಿಕ ಹಂತದಲ್ಲಿ ರಾಜ್ಯದ ಅಂಗನವಾಡಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನಕ್ಕೆ ಮುಂದಾಗಿದ್ದು ಕೇಂದ್ರ ಶಿಕ್ಷಣ ಇಲಾಖೆಯೂ ಇದಕ್ಕೆ ಅನುಮತಿ ನೀಡಿದೆ
ಡಿಸೆಂಬರ್ ನಿಂದ ಕೆಲ ಶಾಲೆಗಳಲ್ಲಿ ಏನ್ಇಪಿ ಮಾದರಿ ಕ್ಲಾಸ್
ಶಿಕ್ಷಣ ಇಲಾಖೆ ಸಲ್ಲಿಸಿದ್ದ ಎನ್ ಇ ಪಿ ಪಠ್ಯಕ್ರಮ ರೂಪರೇಶಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಸಮ್ಮಿತಿ ನೀಡಿದ್ದು ಇದೇ ವರ್ಷದಿಂದೇ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದೆ.. ಡಿಸೆಂಬರ್ ನಿಂದ ಆಯ್ದೆ ಕೆಲ ಸರ್ಕಾರಿ ಶಾಲೆಗಳಲ್ಲಿ ಏನ್ ಇ ಪಿ ಮಾದರಿ ಕ್ಲಾಸ್ ಗಳು ಶುರವಾಗಲಿದ್ದು ಮುಂದಿನ ವರ್ಷ ಅಂದ್ರೆ 23-24 ನೇ ಸಾಲಿಗೆ ಎನ್ ಇ ಪಿ ರಾಜ್ಯ ಅಂಗನವಾಡಿಗಳಲ್ಲಿ ಪ್ರಾಥಮಿಕ ಹಾಗು ಮೊದಲ ಹಂತದಲ್ಲಿ ಜಾರಿಯಾಗಲಿದೆ .. ಆರಂಭದಲ್ಲಿ ಪ್ರಾಥಮಿಕ ಹಂತದಲ್ಲಿ 8 ವರ್ಷದೊಳಗಿನ ಮಕ್ಕಳಿಗೆ ಎನ್ ಇ ಪಿ ಪ್ರಾಥಮಿಕ ಹಂತದಲ್ಲಿ ರಾಜ್ಯದಲ್ಲಿ ಜಾರಿಯಾಗಲಿದ್ದು ಹಂತ ಹಂತವಾಗಿ ಪ್ರಾಥಮಿಕ ಫ್ರೌಢ ತರಗತಿಗಳಿಗೆ ಜಾರಿಯಾಗಲಿದೆ.. ಸದ್ಯ ಎನ್ ಇ ಪಿ ಅನುಷ್ಠಾನ ಹಾಗೂ ಪಠ್ಯಕ್ರಮಕ್ಕೆ ಕೇಂದ್ರ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು ಶಿಕ್ಷಣ ಇಲಖೆ ಎನ್ಇ ಪಿ ಜಾರಿಗೆ ಕಂಪ್ಲೀಟ್ ತಯಾರಿ ಶುರುಮಾಡಿಕೊಂಡಿದೆ
ಇನ್ನು ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯಿಸಿದ್ದು, ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಜಾರಿಗೆ ಕೇಂದ್ರ ಶಿಕ್ಷಣ ಇಲಾಖೆ ಅನುಮತಿ ನೀಡಿದೆ .. ರಾಜ್ಯ ಶಿಕ್ಷಣ ಇಲಾಖೆ ಸಿದ್ದಪಡಿಸಿರುವ ಎನ್ಇಪಿ ಪಠ್ಯಕ್ಕೆ ಕೇಂದ್ರ ಸಮ್ಮತಿ ನೀಡಿದೆ ಹೀಗಾಗಿ ನಾವು ಇದೇ ಡಿಸೆಂಬರ್ ನಿಂದ ಪ್ರಾಥಮಿಕ ಹಂತದಲ್ಲಿ ಅಂಗನವಾಡಿ ಶಾಲೆಗಳಲ್ಲಿ ಎನ್ಇಪಿ ಮಾದರಿ ಕ್ಲಾಸ್ ಆರಂಭಿಸುವ ಮೂಲಕ ರಾಜ್ಯದಲ್ಲಿ ಎನ್ಇಪಿ ಜಾರಿಗೆ ಮುಂದ್ದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದಂತೆ ಎನ್ಇಪಿ ಜಾರಿಗೆ ತಯಾರಿ ನಡೆಸಿದ್ದು ಈಗ ಕೇಂದ್ರ ಶಿಕ್ಷಣ ಇಲಾಖೆಯೂ ಎಲ್ಲದಕ್ಕೂ ಓಕೆ ಮಾಡಿರೋದು ಮತಷ್ಟು ವೇಗ ಪಡೆದುಕೊಂಡಿದ್ರೆ.. ಮೊತ್ತಂದಡೆ ನುರಿತ ತಜ್ಞರ ಜೊತೆ ಮಾತುಕತೆ ನಡೆಸದೆಯೇ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಅಂತಾ ವಿರೋಧ ಕೂಡಾ ಕೇಳಿ ಬರ್ತಿದೆ
ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
Published On - 10:01 pm, Sat, 22 October 22