ISRO-MapmyIndia ಪ್ರಯತ್ನ; ಗೂಗಲ್ ಮ್ಯಾಪ್ಸ್, ಗೂಗಲ್ ಅರ್ಥ್ ಬದಲು ಸ್ವದೇಶಿ ಪೋರ್ಟಲ್ ನಿರ್ಮಾಣ

| Updated By: ganapathi bhat

Updated on: Apr 06, 2022 | 8:01 PM

ISRO-MapmyIndia ಸಂಸ್ಥೆಯು ಜಂಟಿಯಾಗಿ ಸ್ವದೇಶಿ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ಮ್ಯಾಪ್ಸ್/ ಅರ್ಥ್ ಬದಲು ಭಾರತೀಯ ಮ್ಯಾಪಿಂಗ್ ಅಪ್ಲಿಕೇಷನ್ ಲಭ್ಯವಾಗುವ ಸೂಚನೆ ಲಭಿಸಿದೆ.

ISRO-MapmyIndia ಪ್ರಯತ್ನ; ಗೂಗಲ್ ಮ್ಯಾಪ್ಸ್, ಗೂಗಲ್ ಅರ್ಥ್ ಬದಲು ಸ್ವದೇಶಿ ಪೋರ್ಟಲ್ ನಿರ್ಮಾಣ
ISRO - MapmyIndia
Follow us on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO- Indian Space Research Organisation) ಮತ್ತು ಲೊಕೇಷನ್-ನೇವಿಗೇಷನ್ ಟೆಕ್ನಾಲಜಿ ಸೊಲ್ಯುಷನ್ಸ್ ಒದಗಿಸುವ ಮ್ಯಾಪ್​ಮೈ ಇಂಡಿಯಾ (MapmyIndia) ಸಂಸ್ಥೆ ಜಂಟಿಯಾಗಿ ಹೊಸ ಮ್ಯಾಪಿಂಗ್ ಸಂಸ್ಥೆ ಆರಂಭಿಸಲು ಮೊದಲ ಹೆಜ್ಜೆ ಇಟ್ಟಿವೆ. ಭಾರತದ ಉತ್ತಮ ಮತ್ತು ಸ್ವದೇಶಿ ನಿರ್ಮಿತ ಮ್ಯಾಪಿಂಗ್ ಪೋರ್ಟಲ್​ಗೆ (Mapping Portal) ಹಾಗೂ ಜಿಯೋಸ್ಪೇಷಿಯಲ್ ಸರ್ವೀಸ್ (Geospatial Service) ನೀಡಲು ಮುಂದಾಗಿದೆ. ಈ ವಿಚಾರ ಪ್ರಾಯೋಗಿಕವಾಗಿ ನಿಜವಾದರೆ, ಗೂಗಲ್ ಅರ್ಥ್ ಅಥವಾ ಗೂಗಲ್ ಮ್ಯಾಪ್ಸ್ (Google Earth/Google Maps) ಬಳಕೆ ಕಡಿಮೆ ಆಗುವ ಸಂಭಾವ್ಯತೆ ಊಹಿಸಲಾಗುತ್ತಿದೆ.

ಈ ಬಗ್ಗೆ MapmyIndia ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಮಾತನಾಡಿದ್ದಾರೆ. ಈ ತಂತ್ರಜ್ಞಾನವು MapmyIndiaದ ಡಿಜಿಟಲ್ ಮ್ಯಾಪ್ ಹಾಗೂ ಇಸ್ರೋ ಸ್ಯಾಟಲೈಟ್​ನ ಮಾಹಿತಿ ಪಡೆದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಲಿಂಕ್ಡ್​ಇನ್ ಅಪ್ಲಿಕೇಷನ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವರ್ಮಾ, ನಿಮಗೆ ಇನ್ನು Goo*le Maps/Earth ಬೇಕಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಭಾರತದ ಮ್ಯಾಪ್ ಹಾಗೂ ಜಿಯೋಸ್ಪೇಷಿಯಲ್ ಸೇವೆಗಳಿಗೆ ಸ್ವದೇಶಿ ಅಪ್ಲಿಕೇಷನ್​ಗಳೇ ಹೆಚ್ಚು ಉತ್ತಮ ಎನ್ನಲು ಹಲವು ಕಾರಣಗಳಿವೆ ಎಂದೂ ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ‘ಆತ್ಮನಿರ್ಭರ್ ಭಾರತ್’ ಹಾದಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ರೋಹನ್ ವರ್ಮಾ ತಿಳಿಸಿದ್ದಾರೆ. ಈ ಮೂಲಕ, ಭಾರತದ ಬಳಕೆದಾರರು ವಿದೇಶಿ ಸಂಸ್ಥೆಗಳನ್ನು ಅವಲಂಬಿಸಬೇಕಾಗಿ ಬರುವುದಿಲ್ಲ. ಮ್ಯಾಪ್, ನೇವಿಗೇಷನ್ ಮುಂತಾದ ಸಮಸ್ಯೆಗಳಿಗೆ ಭಾರತದ ಸಂಸ್ಥೆಯಿಂದಲೇ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

ಇಸ್ರೋ ಮಾಹಿತಿಯಂತೆ, ISRO ಅಡಿಯಲ್ಲಿ ಬರುವ ಡಿಪಾರ್ಟ್​ಮೆಂಟ್ ಆಫ್ ಸ್ಪೇಸ್ (DoS), MapmyIndia ಜೊತೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೈಜೋಡಿಸಿದೆ. DoS ಹಾಗೂ MapmyIndia ಮಾತೃಸಂಸ್ಥೆ CE Info Systems Pvt Ltd ಜೊತೆಯಾಗಿ ಈ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ: ದೇಶೀಯ ವಿಡಿಯೋ ಆ್ಯಪ್​ಗಳಿಗೆ ವರವಾಯ್ತು ಟಿಕ್​ ಟಾಕ್ ನಿಷೇಧ: ಮಾರುಕಟ್ಟೆಯಲ್ಲಿ ಶೇ. 40 ಪಾಲು ಗಳಿಕೆ

ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ

Published On - 7:52 pm, Sat, 13 February 21