AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ

ಸ್ಥಗಿತಗೊಂಡ ನಂತರ ಹೈಕ್​ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ.

ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ
ಹೈಕ್ ಆ್ಯಪ್
guruganesh bhat
| Edited By: |

Updated on:Jan 18, 2021 | 6:07 PM

Share

ಆತ್ಮನಿರ್ಭರತೆ ಮತ್ತು ವೈಯಕ್ತಿಕ/ಖಾಸಗಿ ಮಾಹಿತಿ ಸೋರಿಕೆ ಕೂಗಿನ ನಡುವೆ ದೇಶೀಯ ಖಾಸಗಿ ಮೆಸೇಜಿಂಗ್ ಆ್ಯಪ್ ಹೈಕ್ ಸದ್ದಿಲ್ಲದೆ ಸ್ಥಗಿತಗೊಂಡಿದೆ. ತನ್ನ ವಿಶಿಷ್ಟ ಸ್ಟಿಕರ್​ಗಳಿಂದಲೇ ಹೆಸರುವಾಸಿಯಾಗಿದ್ದ ಹೈಕ್ ಸ್ಟಿಕರ್ ಚಾಟ್​ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್​ಗಳಿಂದ ಹೈಕ್ ಅ​ನ್ನು ಕಿತ್ತುಹಾಕಲಾಗಿದೆ. ಜನವರಿ 21ರಿಂದ ಹೈಕ್ ಸ್ಟಿಕರ್ ಆ್ಯಪ್ ತನ್ನ ಚಟುವಟಿಕೆಯನ್ನು ಸಂಪೂರ್ಣ ನಿಲ್ಲಿಸಲಿದೆ ಎಂದು ಹೈಕ್ ತಿಳಿಸಿದೆ.

ಹೈಕ್​ನ್ನು ಸ್ಥಗಿತಗೊಳಿಸುವುದಾಗಿ ಹೈಕ್​ನ ಸ್ಥಾಪಕ ಮತ್ತು ಭಾರ್ತಿ ಎಂಟರ್​ಪ್ರೈಸಸ್​ನ ಸಿಇಒ ಕೆವಿನ್ ಭಾರ್ತಿ ಮಿತ್ತಲ್ ಜನವರಿ 6ರಂದೇ ಘೋಷಿಸಿದ್ದರು. ಜನವರಿ 14 ರಂದು ಹೈಕ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಲಾಗಿತ್ತು.

ಬಳಕೆದಾರರು ತಮ್ಮ ಮೆಸೇಜ್, ಫೊಟೊ ಮತ್ತು ವಿಡಿಯೋ ಸೇರಿ ಎಲ್ಲ ಬಗೆಯ ಡಾಟಾಗಳನ್ನು ಜನವರಿ 14ರ ರಾತ್ರಿ 11:59ರವರೆಗೆ ಬ್ಯಾಕ್​ಅಪ್ ಮಾಡಿಕೊಳ್ಳಬಹುದು ಎಂದು ಹೈಕ್ ತಿಳಿಸಿತ್ತು. ಹೈಕ್​ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ.

ಹೈಕ್ ಆ್ಯಪ್

ಹೈಕ್​ನ ಸ್ಥಾಪಕ ಕೆವಿನ್ ಭಾರ್ತಿ ಮಿತ್ತಲ್ ಈ ಮುನ್ನವೇ ‘ಭಾರತ ಮೂಲದ ಆ್ಯಪ್​ಗಳು ಉಳಿಯಬೇಕೆಂದರೆ ಐರೋಪ್ಯ ಮೂಲದ ಆ್ಯಪ್​ಗಳನ್ನು ದೇಶದಲ್ಲಿ ನಿಷೇಧಿಸಬೇಕು’ ಎಂದು ವಿನಂತಿಸಿದ್ದರು. ಮೇಡ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದ ಕೂಗಿನ ನಡುವೆಯೇ ನಮ್ಮದೇ ಆ್ಯಪ್​ ಮುಚ್ಚುತ್ತಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ.

ಬೇರೆ ರೂಪದಲ್ಲಿ ಪ್ರತ್ಯಕ್ಷ! ಖಾಸಗಿ ಮೆಸೇಜಿಂಗ್ ಆ್ಯಪ್​ ಹೈಕ್ ಸ್ಥಗಿತಗೊಂಡರೂ ಅದೇ ಸಂಸ್ಥೆಯ ವೈಬ್ ಮತ್ತು ರಷ್ ಎಂಬ ಎರಡು ಆ್ಯಪ್​ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿರುವುದಾಗಿ ಕೆವಿನ್ ಭಾರ್ತಿ ಮಿತ್ತಲ್ ತಿಳಿಸಿದ್ದರು. ವೈಬ್ ಫೇಸ್​ಬುಕ್​ ಸ್ವರೂಪದ ಸಾಮಾಜಿಕ ಜಾಲತಾಣವಾಗಿದ್ದು, ರಷ್ ಗೇಮಿಂಗ್ ಆ್ಯಪ್ ಆಗಿದೆ. ಹೈಕ್ ಸ್ಟಿಕರ್​ಗಳು ಬಹಳ ಜನಪ್ರಿಯವಾಗಿದ್ದವು. ಅಲ್ಲದೇ ಹೈಕ್ ವಾಲೆಟ್ ಮೂಲಕ ಹಣ ವರ್ಗಾಯಿಸುವ ಸೌಲಭ್ಯವನ್ನೂ ಹೈಕ್ ಒದಗಿಸಿತ್ತು.

ಹೈಕ್ ಸ್ಟಿಕರ್​ಗಳು

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 5:42 pm, Mon, 18 January 21

Follow Us
guruganesh bhat
guruganesh bhat
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!