AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandrayaan-3: ಮಹತ್ವದ ಮೈಲುಗಲ್ಲಿನತ್ತ ಇಸ್ರೋ: ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್​

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಲ್ಯಾಂಡಿಂಗ್​​ಗೆ ಮಹತ್ವದ ಹೆಜ್ಜೆ ಹಾಕುವ ಸನಿಹದಲ್ಲಿದೆ. ಇಂದು ಇಸ್ರೋ ಮಧ್ಯಾಹ್ನ 1 ಗಂಟೆಗೆ ಚಂದ್ರಯಾನ-3 ಮಿಷನ್‌ನ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್​​ನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ.

Chandrayaan-3: ಮಹತ್ವದ ಮೈಲುಗಲ್ಲಿನತ್ತ ಇಸ್ರೋ: ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್​
ಅಕ್ಷಯ್​ ಪಲ್ಲಮಜಲು​​
|

Updated on:Aug 17, 2023 | 2:53 PM

Share

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಚಂದ್ರಯಾನ-3 (Chandrayaan-3) ಲ್ಯಾಂಡಿಂಗ್​​ನಲ್ಲಿ ಮಹತ್ವದ ಹೆಜ್ಜೆ ಹಾಕುವ ಸನಿಹದಲ್ಲಿದೆ. ಇಂದು ಇಸ್ರೋ ಮಧ್ಯಾಹ್ನ 1 ಗಂಟೆಗೆ ಚಂದ್ರಯಾನ-3 ಮಿಷನ್‌ನ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ವಿಕ್ರಮ್ ಲ್ಯಾಂಡರ್​​ನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಅವರ ಹೆಸರಿನಿಂದ ಸೂಚಿಸಲಾಗಿದ್ದ ಲ್ಯಾಂಡರ್ ಪ್ರಗ್ಯಾನ್ ರೋವರ್​​ನ್ನು ಹೊತ್ತೊಯ್ಯುವ ಲ್ಯಾಂಡರ್​​ನ್ನು ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಿಸುವ ಮೂಲಕ ನಿರ್ಣಾಯಕ ಮೈಲಿಗಲ್ಲನ್ನು ಸಾಧಿಸಿದೆ ಎಂದು ಇಸ್ರೋ ಟ್ವಿಟರ್​​ ಮೂಲಕ ತಿಳಿಸಿದೆ. ಇನ್ನು ಚಂದ್ರಯಾನ-3 ಮಿಷನ್​​ನ್ನು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್​ ಆ್ಯಂಡ್​​ ಕಮಾಂಡ್​​ ನೆಟ್​ವರ್ಕ್​​ ಗಮನಿಸುತ್ತಿರುತ್ತದೆ.

ಇಸ್ರೋ ಈಗಾಗಲೇ ಲ್ಯಾಂಡಿಂಗ್ ಪ್ರದೇಶವನ್ನು ವಿಸ್ತರಿಸಿದ್ದು, ಚಂದ್ರಯಾನ-2 ಸಮಯದಲ್ಲಿ 500 ಚದರ ಮೀಟರ್ ಪ್ರದೇಶವನ್ನು ಗುರುತಿಸಲಾಗಿತ್ತು. ಇದೀಗ ಅದರ ಬದಲಿಗೆ 4 X 2.4 ಕಿಮೀ ಪ್ರದೇಶವನ್ನು ಹೊಂದಿರುವ ಸ್ಥಳವನ್ನು ಆಯ್ಕೆ ಮಾಡಿದೆ. ಲ್ಯಾಂಡಿಂಗ್ ಮಾಡುವ ಪ್ರಯತ್ನಕ್ಕೆ ಹೆಚ್ಚಿನ ನಮ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ: ಚಂದ್ರನ ಮೊದಲ ಚಿತ್ರಗಳನ್ನು ಸೆರೆಹಿಡಿದ ಚಂದ್ರಯಾನ-3

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್​​ನ್ನು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಇನ್ನು ರಷ್ಯಾ ಕೂಡ ಈ ಚಂದ್ರನತ್ತ ಲೂನಾ -25 ಮಿಷನ್‌ ಕಳುಹಿಸಿದೆ. ಅದಕ್ಕಿಂತ ಎರಡು ದಿನಗಳ ಮೊದಲ ಚಂದ್ರನಲ್ಲಿ ನಮ್ಮ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯಬಹುದು ಎಂದು ಇಸ್ರೋ ಹೇಳಿದೆ. ಚಂದ್ರಯಾನ -3 ಉಡಾವಣೆಯ ನಂತರ ರಷ್ಯಾದ ಲೂನಾ -25 ಮಿಷನ್‌ ಉಡಾವಣೆಯಾಗಿರುವುದು. ಜತೆಗೆ ಲ್ಯಾಂಡಿಂಗ್​​ ಪ್ರದೇಶದಲ್ಲೂ ಬದಲಾವಣೆ ಇದೆ ಎಂದು ಹೇಳಿದೆ. ಇದರಿಂದ ಎರಡು ಮಿಷನ್​​ ನಡುವೆ ಯಾವುದೇ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿದೆ.

ಇಸ್ರೋ ಹಂಚಿಕೊಂಡ ಟ್ವೀಟ್​​

ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಆಗುವ ಗುರಿಯನ್ನು ಹೊಂದಿದೆ ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ಇಸ್ರೋ ಹೇಳಿದೆ. ಇನ್ನು ಚಂದ್ರಯಾನ -2ನಿಂದ ಅನೇಕ ವಿಚಾರಗಳನ್ನು ಕಲಿತ್ತಿದ್ದೇವೆ, ಹಾಗಾಗಿ ಇಲ್ಲಿ ತುಂಬಾ ಎಚ್ಚರಿಕೆ ಮಾರ್ಗವನ್ನು ತೆಗೆದುಕೊಳ್ಳಲಾಗಿದೆ ಎಂದು ಇಸ್ರೋ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:49 pm, Thu, 17 August 23