2022ರ ಮೊದಲ ಉಡ್ಡಯನಕ್ಕೆ ಕ್ಷಣಗಣನೆ; ಫೆ.14ರ ಮುಂಜಾನೆ ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಉಡಾವಣೆ

| Updated By: Lakshmi Hegde

Updated on: Feb 13, 2022 | 6:59 PM

ನಾಳೆ ಮುಂಜಾನೆ ಇಒಎಸ್​-04 ಉಪಗ್ರಹದೊಟ್ಟಿಗೆ ಉಡಾವಣೆಗೊಳ್ಳಲಿರುವ ಇನ್ನೆರಡು ಉಪಗ್ರಹಗಳು INSPIREsat-1 (IS-1) ಮತ್ತು INS-2TD. ಇವೆರಡೂ ಕೂಡ ಬೇರೆಬೇರೆ ಇನ್​ಸ್ಟಿಟ್ಯೂಶನ್​ಗಳ ವಿದ್ಯಾರ್ಥಿಗಳಿಂದ ನಿರ್ಮಿತವಾದ ಉಪಗ್ರಹಗಳಾಗಿವೆ.

2022ರ ಮೊದಲ ಉಡ್ಡಯನಕ್ಕೆ ಕ್ಷಣಗಣನೆ; ಫೆ.14ರ ಮುಂಜಾನೆ ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಉಡಾವಣೆ
ಪ್ರಾತಿನಿಧಿಕ ಚಿತ್ರ
Follow us on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಲಿರುವ 2022ರ ಮೊದಲ ಉಡಾವಣೆಗೆ ಇನ್ನು ಕೆಲವೇ ತಾಸುಗಳು ಬಾಕಿ ಇದೆ.  ಇಸ್ರೋ ನಾಳೆ (ಫೆ.14) ಮುಂಜಾನೆ 5.59ಗಂಟೆಗೆ ಈ ವರ್ಷದ ಮೊದಲ ಭೂ ವೀಕ್ಷಣಾ ಉಪಗ್ರಹ-04 (EOS-04)ನ್ನು ಉಡಾವಣೆ ಮಾಡಲಿದೆ.  ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದ ಮೊದಲ ಉಡ್ಡಯನ ನೆಲೆಯಿಂದ ಈ ಉಡಾವಣೆ ನಡೆಯಲಿದ್ದು, ಇಒಎಸ್​-04 ಉಪಗ್ರಹವನ್ನು ಪೋಲಾರ್ ಉಪಗ್ರಹ ಉಡಾವಣಾ ವಾಹಕ (PSLV-C52) ಹೊತ್ತೊಯ್ಯಲಿದೆ.  ಅಂದಹಾಗೇ, ಇಒಎಸ್​-04 ರಾಡಾಡ್​ ಇಮೇಜ್​ ಉಪಗ್ರಹದೊಂದಿಗೆ ಇನ್ನೆರಡು ಉಪಗ್ರಹಗಳೂ ಕೂಡ ನಭಕ್ಕೆ ಏರಲಿವೆ.  

ನಾಳೆ ಮುಂಜಾನೆ ಇಒಎಸ್​-04 ಉಪಗ್ರಹದೊಟ್ಟಿಗೆ ಉಡಾವಣೆಗೊಳ್ಳಲಿರುವ ಇನ್ನೆರಡು ಉಪಗ್ರಹಗಳು INSPIREsat-1 (IS-1) ಮತ್ತು INS-2TD. ಇವೆರಡೂ ಕೂಡ ಬೇರೆಬೇರೆ ಇನ್​ಸ್ಟಿಟ್ಯೂಶನ್​ಗಳ ವಿದ್ಯಾರ್ಥಿಗಳಿಂದ ನಿರ್ಮಿತವಾದ ಉಪಗ್ರಹಗಳಾಗಿವೆ. ಪಿಎಸ್​ಎಲ್​ವಿ ಸಿ52 ಎಂಬುದು, ಪಿಎಸ್​ಎಲ್​ವಿ ಸರಣಿಯ 54ನೇ ಉಡಾವಣೆಯಾಗಿದೆ. ನಾಳೆ ಉಡ್ಡಯನಗೊಳ್ಳುವ ಇಒಎಸ್​-04 ಭೂ ವೀಕ್ಷಣಾ ಉಪಗ್ರಹ 1710 ಕೆಜಿ ತೂಕವಿದ್ದು, ಇದನ್ನು ಪಿಎಸ್​ಎಲ್​ವಿ ಸಿ52ವಾಹಕವು 529 ಕಿಮೀ ಕಕ್ಷೆಯ ಸೂರ್ಯ-ಸಿಂಕ್ರೊನಸ್ ಧ್ರುವೀಯ ಕಕ್ಷೆಗೆ ಸೇರಿಸುತ್ತದೆ.

ಇಒಎಸ್​-04 ಒಂದು ರಾಡಾರ್​ ಇಮೇಜಿಂಗ್ ಉಪಗ್ರಹವಾಗಿದ್ದು, ಯಾವುದೇ ರೀತಿಯ ವಾತಾವರಣವಿದ್ದರೂ, ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ, ಪ್ರವಾಹ ನಕ್ಷೆ ಅಪ್ಲಿಕೇಶನ್​​ಗಳಿಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ನಾಳೆ ಈ ಉಪಗ್ರಹ ಉಡಾವಣೆಯಾಗುವ ಬಗ್ಗೆ ಇಸ್ರೋ ಕೂಡ ಟ್ವೀಟ್ ಮಾಡಿ ತಿಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ವೈನ್ ಮಾರಾಟ ನೀತಿ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ರದ್ದು

Published On - 6:36 pm, Sun, 13 February 22