ಅಮರಿಂದರ್ ಸಿಂಗ್ರನ್ನು ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ
2021ರ ಸೆಪ್ಟೆಂಬರ್ನಲ್ಲಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ.
ಕೊಟ್ಕಾಪುರ: ಪಂಜಾಬ್ನಲ್ಲಿಈ ಹಿಂದೆ ಇದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವನ್ನು ದೆಹಲಿಯಿಂದ ಬಿಜೆಪಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ. ಕೋಟ್ಕಾಪುರದಲ್ಲಿ ಇಂದು ನವಿ ಸೋಚ್, ನವ ಪಂಜಾಬ್ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಪಂಜಾಬ್ನಲ್ಲಿ ಅಮರಿಂದರ್ ಸಿಂಗ್ (Amarinder Singh) ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲಿ ಅನೇಕ ಕುಂದುಕೊರತೆಗಳಿದ್ದವು. ಆಡಳಿತ ವಿಫಲವಾಗುತ್ತಿತ್ತು. ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಅಮರಿಂದರ್ ಸಿಂಗ್ರನ್ನು ನಿಯಂತ್ರಿಸುತ್ತಿತ್ತು. ಹಾಗಾಗಿಯೇ ಅವರನ್ನು ಬದಲಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅಮರಿಂದರ್ ಸಿಂಗ್ ಹೆಸರನ್ನು ಹೇಳದೆ ಇಷ್ಟು ಮಾತುಗಳನ್ನಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರ ದೆಹಲಿಯಿಂದ ನಿಯಂತ್ರಿಸುತ್ತಿರುವುದು ಗೊತ್ತಾಗಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ. ಹಾಗೇ, ಪಂಜಾಬ್ನಲ್ಲಿ ಇದೀಗ ಅಮರಿಂದರ್ ಸಿಂಗ್ ಅವರ ನೂತನ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆಯೂ ಕೂಡ ಪ್ರಿಯಾಂಕಾ ಗಾಂಧಿ ಇದೇ ವೇಳೆ ಮಾತನಾಡಿದ್ದಾರೆ.
2021ರ ಸೆಪ್ಟೆಂಬರ್ನಲ್ಲಿ ಪಂಜಾಬ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಕಾಂಗ್ರೆಸ್ನ ವರಿಷ್ಠರು, ಅದರಲ್ಲೂ ಗಾಂಧಿ ಕುಟುಂಬದ ಯಾರೂ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಕಾಂಗ್ರೆಸ್ ನ ಪಂಜಾಬ್ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಅಮರಿಂದರ್ ಸಿಂಗ್ ನಡುವಿನ ಮನಸ್ತಾಪ ಹೆಚ್ಚಾದ ಬೆನ್ನಲ್ಲೇ, ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಅಮರಿಂದರ್ ಸಿಎಂ ಸ್ಥಾನ ಕಳೆದುಕೊಳ್ಳಲು ನವಜೋತ್ ಸಿಂಗ್ ಸಿಧು ಕಾರಣ ಎಂದು ಹೇಳಲಾಗಿತ್ತು. ಅದಾದ ಮೇಲೆ ಕೂಡ ಕಾಂಗ್ರೆಸ್ ಸಧುರನ್ನು ಸಿಎಂ ಮಾಡದೆ, ಛನ್ನಿಯವರಿಗೆ ಆ ಸ್ಥಾನ ನೀಡಿತ್ತು. ಹಾಗೇ, ಮುಂದಿನ ಅವಧಿಗೂ ಕೂಡ ಛನ್ನಿಯವರೇ ಸಿಎಂ ಅಭ್ಯರ್ಥಿ.
ಇದನ್ನೂ ಓದಿ: ಮಹೇಶ್ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್ ಆಯ್ತು ಫೋಟೋ
Published On - 5:57 pm, Sun, 13 February 22