ಗಗನಯಾನ ನಮ್ಮ ಆದ್ಯತೆ: ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್

|

Updated on: Nov 29, 2023 | 5:03 PM

ಕೋಲ್ಕತ್ತಾದಲ್ಲಿ 2023 ಗ್ಲೋಬಲ್ ಎನರ್ಜಿ ಪಾರ್ಲಿಮೆಂಟ್​​ನಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಹಲವು ಗುರಿಗಳು ಇವೆ. ಇದು ಒಂದೇ ಗುರಿಯಲ್ಲ. ಆದರೆ ನಮ್ಮ ಪ್ರಾಥಮಿಕ ಗುರಿ ಈಗ ಗಗಗಯಾನ ಆಗಿದೆ. ಒಬ್ಬ ಭಾರತೀಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಮತ್ತು ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಬೇಕು. ಇದು ನಮ್ಮ ತಕ್ಷಣದ ಗುರಿಯಾಗಿದೆ ಎಂದಿದ್ದಾರೆ.

ಗಗನಯಾನ ನಮ್ಮ ಆದ್ಯತೆ: ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್
ಎಸ್. ಸೋಮನಾಥ್
Follow us on

ಕೊಲ್ಕತ್ತಾ ನವೆಂಬರ್ 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಹು ಗುರಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಆದರೆ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನ್‌ಯಾನ್ (Gaganyaan) ನಮ್ಮ ಆದ್ಯತೆ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ (S Somanath) ಬುಧವಾರ ಹೇಳಿದ್ದಾರೆ. ಹಲವು ಗುರಿಗಳು ಇವೆ. ಇದು ಒಂದೇ ಗುರಿಯಲ್ಲ. ಆದರೆ ನಮ್ಮ ಪ್ರಾಥಮಿಕ ಗುರಿ ಈಗ ಗಗಗಯಾನ ಆಗಿದೆ. ಒಬ್ಬ ಭಾರತೀಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಮತ್ತು ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಬೇಕು. ಇದು ನಮ್ಮ ತಕ್ಷಣದ ಗುರಿಯಾಗಿದೆ ಎಂದು ಕೋಲ್ಕತ್ತಾದಲ್ಲಿ 2023 ಗ್ಲೋಬಲ್ ಎನರ್ಜಿ ಪಾರ್ಲಿಮೆಂಟ್​​ನಲ್ಲಿ ಮಾತನಾಡಿದ ಸೋಮನಾಥ್ ಹೇಳಿದ್ದಾರೆ.

2025 ರಲ್ಲಿ ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಎತ್ತರದಲ್ಲಿ ಕಡಿಮೆ ಭೂಮಿಯ ಕಕ್ಷೆಯಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದು ಗಗನಯಾನ ಮಿಷನ್‌ನ ಗುರಿಯಾಗಿದೆ. 2028 ರ ವೇಳೆಗೆ ಭಾರತದ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯೂಲ್ ಅನ್ನು ಸ್ಥಾಪಿಸಲು ಮತ್ತು 2035 ರ ವೇಳೆಗೆ ಅದನ್ನು ಪೂರ್ಣಗೊಳಿಸಲು ಸಂಸ್ಥೆ ಯೋಜಿಸಿದೆ ಎಂದು ಸೋಮನಾಥ್ ಹೇಳಿದರು.
ಅಕ್ಟೋಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2040 ರ ವೇಳೆಗೆ ಚಂದ್ರನಿಗೆ ಮಾನವಸಹಿತ ಮಿಷನ್ ಮತ್ತು 2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿಯನ್ನು ಹೊಂದುವಂತೆ ಬಾಹ್ಯಾಕಾಶ ಸಂಸ್ಥೆಗೆ ಹೇಳಿದ್ದರು.


2024 ರ ಅಂತ್ಯದ ವೇಳೆಗೆ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲು ಯುಎಸ್ ಬಾಹ್ಯಾಕಾಶ ಸಂಸ್ಥೆ ಸಹಾಯ ಮಾಡುತ್ತದೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಮಂಗಳವಾರ ಹೇಳಿದ್ದಾರೆ.

ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ ಎಲ್ 1 ತನ್ನ ಹಾದಿಯಲ್ಲಿದೆ. ನಮ್ಮ ನಿರೀಕ್ಷೆಯು ಜನವರಿ 7 ರ ವೇಳೆಗೆ ಇದು ಲಾಗ್ರೇಂಜ್ ಪಾಯಿಂಟ್ 1 (L1) ಅನ್ನು ಪ್ರವೇಶಿಸುತ್ತದೆ. ನಾವು ಕೆಲವು ತಂತ್ರಗಳನ್ನು ಮಾಡಬೇಕಾಗಿದೆ ಎಂದಿದ್ದಾರೆ ಸೋಮನಾಥ್.

ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಎಲ್ 1 ಸುತ್ತ ಇರಿಸಲಾಗುತ್ತದೆ. ಆ ಪ್ರದೇಶದಲ್ಲಿ ಇರಿಸಲಾದ ಉಪಗ್ರಹವು ಯಾವುದೇ ಗ್ರಹಣವಿಲ್ಲದೆ ಸೂರ್ಯನನ್ನು ನಿರಂತರವಾಗಿ ನೋಡುವ ಪ್ರಯೋಜನವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಮೋದಿ ಸರ್ಕಾರ ಸಿಎಎ ಜಾರಿ ಮಾಡಲಿದೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಅಮಿತ್ ಶಾ

ಚಂದ್ರಯಾನ-3 ಎಲ್ಲರಿಗೂ ಸ್ಫೂರ್ತಿ ನೀಡಿದೆ. ಚಂದ್ರನ ಮೇಲೆ ಮೇಲೆ ಇಳಿದನಾಲ್ಕನೇ ರಾಷ್ಟ್ರ ಮತ್ತು ದಕ್ಷಿಣ ಭಾಗದಲ್ಲಿ ಮೊದಲ ಬಾರಿಗೆ ಇಳಿದ ದೇಶವಾಗಿದೆ ಭಾರತ. ಇದೆಲ್ಲವೂ ಭಾರತದ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಕೌಶಲಗಳು ತುಂಬಾ ಹೆಚ್ಚಿರುವುದನ್ನು ತೋರಿಸುತ್ತದೆ. ಕರಕುಶಲ ಮತ್ತು ಮಿಷನ್ ಯೋಜನೆಯನ್ನು ನಿರ್ಮಿಸಲು ನಾವು ಯಾರನ್ನೂ ಅವಲಂಬಿಸಿಲ್ಲ. ನಾವು ಅನೇಕ ಜನರನ್ನು ಸಂಪರ್ಕಿಸಿದ್ದೇವೆ. ಇಡೀ ಸೃಷ್ಟಿ ನಮ್ಮದೇ’ ಎಂದು ಸೋಮನಾಥ್ ಹೇಳಿದರು.

ಗ್ಲೋಬಲ್ ಎನರ್ಜಿ ಪಾರ್ಲಿಮೆಂಟ್ ಉದ್ಘಾಟಿಸಿದ ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರು ಸೋಮನಾಥ್ ಅವರಿಗೆ ರಾಜ್ಯಪಾಲರ ಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ