AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಎಸ್​ಎಸ್​ಎಲ್​ವಿ

AzaadiSAT ಮೂಲಕ ತಲಾ 50 ಗ್ರಾಂ ತೂಕದ 750 ಪೇಲೋಡ್​ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ.

ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಎಸ್​ಎಸ್​ಎಲ್​ವಿ
ಎಸ್​ಎಸ್​ಎಲ್​ವಿ ಉಡ್ಡಯನ
TV9 Web
| Edited By: |

Updated on:Aug 07, 2022 | 11:48 AM

Share

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್​ಎಸ್​ಎಲ್​ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 75 ಶಾಲೆಗಳ ವಿದ್ಯಾರ್ಥಿಗಳು ರೂಪಿಸಿರುವ 50 ಗ್ರಾಂ ತೂಕದ 750 ಪೇಲೋಡ್​ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ರೂಪಿಸಿರುವ EOS-02 ಭೂ ನಿಗಾ ಉಪಗ್ರಹ ಮತ್ತು ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ರೂಪಿಸಿರುವ ಪುಟ್ಟ ಉಪಗ್ರಹಗಳು (ಪೇಲೋಡ್) ಈ ಬಾಹ್ಯಾಕಾಶ ವಾಹನದ ಮೂಲಕ ಅಂತರಿಕ್ಷದ ಭೂ ಕಕ್ಷೆ ಸೇರಲಿವೆ.

SSLV-D1/EOS-02 ಯೋಜನೆಯ ಕೌಂಟ್​ಡೌನ್ ಭಾನುವಾರ ನಸುಕಿನ 02:26ಕ್ಕೆ ಆರಂಭವಾಗಿತ್ತು. ಕೊನೆಯ ಹಂತದ ಪ್ರಕ್ರಿಯೆ ಮತ್ತು ಪರಿಶೀಲನೆಗಳು ಮುಗಿದ ನಂತರ ಬೆಳಿಗ್ಗೆ 09:18ಕ್ಕೆ ಉಪಗ್ರಹ ಹೊತ್ತ ರಾಕೆಟ್​ ಆಗಸಕ್ಕೆ ನೆಗೆಯಿತು.

ಇಸ್ರೋದ ಭೂ-ಕೇಂದ್ರಗಳಲ್ಲಿ ರೂಪಿಸಿರುವ ‘ಸ್ಪೇಸ್ ಕಿಡ್ಸ್ ಇಂಡಿಯಾ’ (Space Kidz India) ವ್ಯವಸ್ಥೆಯ ಈ ಉಪಗ್ರಹಗಳು ರವಾನಿಸುವ ದತ್ತಾಂಶಗಳನ್ನು ಸ್ವೀಕರಿಸಲಿದೆ. ಈ ಸಣ್ಣ ಉಪಗ್ರಹಗಳಲ್ಲಿ ದೂರದ ಸಿಗ್ನಲ್​ಗಳನ್ನು ಗ್ರಹಿಸುವ / ರವಾನಿಸುವ ಪ್ರಬಲ ಟ್ರಾನ್ಸ್​ಪಾಂಡರ್​ ಮತ್ತು ಸೆಲ್ಫಿ ಕ್ಯಾಮೆರಾಗಳಿವೆ. ಇದೇ ಎಸ್​ಎಸ್​ಎಲ್​ವಿಯಲ್ಲಿ EOS-02 ಭೂ ನಿಗಾ ಉಪಗ್ರಹವೂ ಇದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ನೆರವಾಗಲಿದೆ.

ಇಸ್ರೋದ ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆಯು 10ರಿಂದ 500 ಕೆಜಿ ತೂಗುವ ಮಿನಿ, ನ್ಯಾನೊ ಮತ್ತು ಮೈಕ್ರೊ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನಗಳನ್ನು ಆರಂಭಿಸಲಿದೆ. ಆರ್ಥಿಕವಾಗಿಯೂ ಇದು ಲಾಭದಾಯಕವಾಗಲಿದೆ.

Published On - 9:42 am, Sun, 7 August 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?