ಕೊರೊನಾ ಬಳಿಕ ಅಮೆರಿಕ ವೀಸಾ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ: ಡೋನಾಲ್ಡ್ ಹೆಫ್ಲಿನ್

| Updated By: ರಶ್ಮಿ ಕಲ್ಲಕಟ್ಟ

Updated on: Apr 20, 2022 | 4:41 PM

ದೇಶಾದ್ಯಂತ 10 ದಿನಗಳ ಹಿಂದೆ ವೀಸಾ ಅಪಾಯಿಂಟ್‌ಮೆಂಟ್‌ ಪ್ರಾರಂಭವಾಯಿತು ಎಂದ ಹೆಫ್ಲಿನ್, ಜೂನ್ ಮಧ್ಯ ಅಥವಾ ಜುಲೈ ಮಧ್ಯದಿಂದ ಹೆಚ್ಚಿನ ವರ್ಗಗಳಿಗೆ ಸ್ಲಾಟ್‌ಗಳು ಲಭ್ಯವಿವೆ ಎಂದು ಹೇಳಿದರು.

ಕೊರೊನಾ ಬಳಿಕ ಅಮೆರಿಕ ವೀಸಾ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ: ಡೋನಾಲ್ಡ್ ಹೆಫ್ಲಿನ್
ಡೋನಾಲ್ಡ್ ಹೆಪ್ಲಿನ್
Follow us on

ಚೆನ್ನೈ: ಅಮೆರಿಕ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಲರ್ ಫಾರ್ ಕಾನ್ಸಲರ್ ಅಫೈರ್ಸ್ ಡೊನಾಲ್ಡ್ ಎಲ್. ಹೆಫ್ಲಿನ್ (Donald L. Heflin) ಅವರು ಕೊವಿಡ್-19 (Covid 19) ನಿಂದ ಉಂಟಾದ ಅಡೆತಡೆಗಳ ನಂತರ ವೀಸಾ ಕಾರ್ಯಾಚರಣೆಗಳಿಗೆ ಚೇತರಿಕೆಯ ವರ್ಷ ಇದು ಎಂದು ಹೇಳಿದ್ದು ಭಾರತದಲ್ಲಿ 12 ತಿಂಗಳುಗಳಲ್ಲಿ ಎಂಟು ಲಕ್ಷ ಅಮೆರಿಕ ವೀಸಾಗಳನ್ನು(US Visa) ನೀಡಲಾಗುವುದು ಎಂದು ಹೇಳಿದರು. ಚೆನ್ನೈನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಫ್ಲಿನ್, ಕೊರೊನಾ ಬಳಿಕ ವೀಸಾ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದೆ. ವೀಸಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹೆಲ್ಪ್ ಲೈನ್ ನಂಬರ್ ಇರಲಿದೆ. ಕೆಲವು ಉದ್ಯೋಗಿಗಳ H1B ವೀಸಾ ಅವಧಿ ಮುಗಿದಿದೆ. ವೀಸಾ ಅವಧಿ ವಿಸ್ತರಣೆ ಬಗ್ಗೆ ಕಾರ್ಯಪ್ರವೃತ್ತ ಆಗಿವೆ. ವೀಸಾ ನೀಡುವ ಕುರಿತು ಭಾರತೀಯರಿಗೆ ವಿಳಂಬವಾಗುತ್ತಿಲ್ಲ. ಐಟಿ ಕಂಪೆನಿಗಳಿಗಳಲ್ಲಿ ಕೆಲಸ ಮಾಡುವರಿಗೆ ಅನುಕೂಲ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳು,ಐಟಿ ಉದ್ಯೋಗಿಗಳು ಹೆಚ್ಚು ಆಸಕ್ತರಾಗಿದ್ದಾರೆ. ರಾಯಭಾರ ಕಚೇರಿಯು ಮುಂದಿನ ವರ್ಷದಲ್ಲಿ ಕಾನ್ಸುಲೇಟ್‌ಗಳಲ್ಲಿನ ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ಯೋಜಿಸುತ್ತಿರುವುದರಿಂದ, 2023 ರ ದ್ವಿತೀಯಾರ್ಧದಲ್ಲಿ ಸಂಖ್ಯೆಗಳು ಪೂರ್ವ ಕೊವಿಡ್ ಮಟ್ಟಕ್ಕೆ ಏರುತ್ತವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಕಳೆದ ಬೇಸಿಗೆಯಲ್ಲಿಯೇ 62,000 ವೀಸಾಗಳನ್ನು ನೀಡುವುದರೊಂದಿಗೆ ವಿದ್ಯಾರ್ಥಿ ವೀಸಾಗಳ ವಿತರಣೆಯನ್ನು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಮರುಸ್ಥಾಪಿಸಲಾಗಿದೆ ಎಂದು ಹೇಳಿದ ಅವರು, ಈ ಬೇಸಿಗೆಯಲ್ಲಿ ರಾಯಭಾರ ಕಚೇರಿ ಈ ಸಂಖ್ಯೆಯನ್ನು ಮೀರಿಸಲು ಆಶಿಸುತ್ತಿದೆ ಎಂದಿದ್ದಾರೆ. ಅದೇ ರೀತಿ ಮುಂದಿನ 12 ತಿಂಗಳಲ್ಲಿ ಮೂರು ಲಕ್ಷ ‘H’ ಮತ್ತು ‘L’ ಕೆಟಗರಿ ವೀಸಾಗಳನ್ನು ವಿತರಿಸುವ ಸಾಧ್ಯತೆ ಇದ್ದು, ಬೇಡಿಕೆಯನ್ನು ಸಮರ್ಪಕವಾಗಿ ಪೂರೈಸಲಿದೆ ಎಂದರು.

ದೇಶಾದ್ಯಂತ 10 ದಿನಗಳ ಹಿಂದೆ ವೀಸಾ ಅಪಾಯಿಂಟ್‌ಮೆಂಟ್‌ ಪ್ರಾರಂಭವಾಯಿತು ಎಂದ ಹೆಫ್ಲಿನ್, ಜೂನ್ ಮಧ್ಯ ಅಥವಾ ಜುಲೈ ಮಧ್ಯದಿಂದ ಹೆಚ್ಚಿನ ವರ್ಗಗಳಿಗೆ ಸ್ಲಾಟ್‌ಗಳು ಲಭ್ಯವಿವೆ ಎಂದು ಹೇಳಿದರು. ಆದಾಗ್ಯೂ, ತೆರೆಯಲಾದ ಸ್ಲಾಟ್‌ಗಳು ಓವರ್‌ಸಬ್‌ಸ್ಕ್ರೈಬ್ ಆಗಿರುವುದರಿಂದ ‘H’ ಮತ್ತು ‘L’ ಸಂದರ್ಶನವಲ್ಲದ ಪ್ರಕರಣಗಳಿಗೆ ಸ್ಲಾಟ್‌ಗಳು ಲಭ್ಯವಿಲ್ಲ ಎಂದು ಅವರು ಹೇಳಿದರು. ಈ ವರ್ಗದಲ್ಲಿರುವ ವ್ಯಕ್ತಿಗಳು ಸೆಪ್ಟೆಂಬರ್ 1 ರಿಂದ ಸ್ಲಾಟ್‌ಗಳಿಗಾಗಿ ಮುಂದಿನ ಕೆಲವು ವಾರಗಳಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುತ್ತದೆ.
ಅದೇ ವೇಳೆ ಬಿ1 ಮತ್ತು ಬಿ2 ವರ್ಗದ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ಸೆಪ್ಟೆಂಬರ್ 1 ರಿಂದ ದಿನಕ್ಕೆ 500 ಅಪಾಯಿಂಟ್‌ಮೆಂಟ್‌ ಲಭ್ಯವಿರುತ್ತವೆ. ಈ ವರ್ಗದ ವ್ಯಕ್ತಿಗಳು ಮುಂದಿನ ಕೆಲವು ವಾರಗಳಲ್ಲಿ ಅಪಾಯಿಂಟ್‌ಮೆಂಟ್‌ ಕಾಯ್ದಿರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಡ್ರಾಪ್ ಬಾಕ್ಸ್ ಅಪಾಯಿಂಟ್‌ಮೆಂಟ್‌
ಡ್ರಾಪ್ ಬಾಕ್ಸ್ ಅಪಾಯಿಂಟ್‌ಮೆಂಟ್‌ಗಳಿಗೆ ಅರ್ಹರಾಗಿರುವವರಿಗೆ ಮತ್ತು ಸಂದರ್ಶನಗಳಿಗೆ ಅಲ್ಲದವರಿಗೆ ಹತ್ತಿರದ ವೀಸಾ ಅರ್ಜಿ ಕೇಂದ್ರದಲ್ಲಿ ದಾಖಲೆಗಳು ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಸಲ್ಲಿಸಲು ಆಯ್ಕೆಗಳನ್ನು ಲಭ್ಯಗೊಳಿಸಲಾಗುವುದು ಎಂದು ಹೆಫ್ಲಿನ್ ಹೇಳಿದರು. ಈ ಬಗ್ಗೆ ವಿವರಿಸಿದ ಅವರು ಜನರು ಹಿಂದಿನ ಅಪಾಯಿಂಟ್‌ಮೆಂಟ್ ಹತ್ತಿರದ ಸ್ಥಳಗಳಲ್ಲಿ ಲಭ್ಯವಿಲ್ಲದಿದ್ದರೆ ಇತರ ನಗರಗಳಲ್ಲಿನ ಕಾನ್ಸುಲೇಟ್‌ಗಳಲ್ಲಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಡ್ರಾಪ್ ಬಾಕ್ಸ್ ಅಪಾಯಿಂಟ್‌ಮೆಂಟ್‌ ಸಂದರ್ಭದಲ್ಲಿಯೂ ಜನರು ದಾಖಲೆಗಳನ್ನು ಸಲ್ಲಿಸಲು ಇತರ ನಗರಗಳಿಗೆ ಪ್ರಯಾಣಿಸುತ್ತಿದ್ದು, ಮುಂದೆ ಈ ರೀತಿ ಹೋಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು. ಉದಾಹರಣೆಗೆ ಚೆನ್ನೈನಿಂದ ಒಬ್ಬ ವ್ಯಕ್ತಿಯು ಕೋಲ್ಕತ್ತಾದಲ್ಲಿರುವ ಯುಎಸ್ ಕಾನ್ಸುಲೇಟ್‌ನಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿದ್ದರೆ, ಅವನು ಅಥವಾ ಅವಳು ಕೋಲ್ಕತ್ತಾಗೆ ಪ್ರಯಾಣಿಸುವ ಬದಲು ದಾಖಲೆಗಳನ್ನು ಸಲ್ಲಿಸಲು ಚೆನ್ನೈನಲ್ಲಿರುವ ವೀಸಾ ಅರ್ಜಿ ಕೇಂದ್ರವನ್ನು ಆಯ್ಕೆ ಮಾಡಬಹುದು ಎಂದು ಹೆಫ್ಲಿನ್ ವಿವರಿಸಿದ್ದಾರೆ.

ಇದನ್ನೂ ಓದಿ: ಮುಂದಿನ 12 ತಿಂಗಳಲ್ಲಿ ಯುಎಸ್ ರಾಯಭಾರಿ ಕಚೇರಿಗಳು ಸುಮಾರು 8 ಲಕ್ಷ ವೀಸಾಗಳನ್ನು ವಿತರಿಸಲಿವೆ: ಯುಎಸ್ ಸಚಿವ

Published On - 4:37 pm, Wed, 20 April 22