Solar Energy: ಸದ್ಯದಲ್ಲೇ ಅಪಾರ್ಟ್​ಮೆಂಟ್​​ಗಳಲ್ಲಿ ಸೋಲಾರ್ ಅಳವಡಿಕೆ ಅನಿವಾರ್ಯ ಸಾಧ್ಯತೆ; ವಿದ್ಯುತ್ ಉಳಿತಾಯಕ್ಕೆ ಸರ್ಕಾರ ಚಿಂತನೆ

100 ಕಿಲೋವ್ಯಾಟ್​ನಷ್ಟು ವಿದ್ಯುತ್ ಬಳಸುವ ಅಪಾರ್ಟ್​ಮೆಂಟ್, ಕಟ್ಟಡಗಳು ಸೋಲಾರ್ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಮಾಲೀಕರೇ ಅಳವಡಿಸಿಕೊಳ್ಳಬೇಕಾಗುತ್ತದೆ.

Solar Energy: ಸದ್ಯದಲ್ಲೇ ಅಪಾರ್ಟ್​ಮೆಂಟ್​​ಗಳಲ್ಲಿ ಸೋಲಾರ್ ಅಳವಡಿಕೆ ಅನಿವಾರ್ಯ ಸಾಧ್ಯತೆ; ವಿದ್ಯುತ್ ಉಳಿತಾಯಕ್ಕೆ ಸರ್ಕಾರ ಚಿಂತನೆ
ಸೋಲಾರ್
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Apr 20, 2022 | 5:29 PM

ನವದೆಹಲಿ: ಭಾರತದಲ್ಲಿ ಅಪಾರ್ಟ್​ಮೆಂಟ್ ನಿರ್ಮಾಣ ಮಾಡುವವರುಮುಂದಿನ ದಿನಗಳಲ್ಲಿ ಸೋಲಾರ್ (Solar Power) ವಿದ್ಯುತ್ ಉತ್ಪಾದನೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನೂರು ಕಿಲೋವ್ಯಾಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಅಪಾರ್ಟ್ ಮೆಂಟ್​ಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಅನಿವಾರ್ಯವಾಗಲಿದೆ. ಇದರಿಂದ ಸರ್ಕಾರ ಉತ್ಪಾದಿಸಿ, ಪೂರೈಸುವ ವಿದ್ಯುತ್ ಮೇಲಿನ ಅವಲಂಬನೆ ತಪ್ಪಲಿದೆ. ಹೊಸ ವಸತಿ ಕಟ್ಟಡಗಳಲ್ಲಿ ಇಂಧನ ದಕ್ಷತೆಯ ಕೋಡ್ ಅಥವಾ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸುವುದನ್ನು ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ. ಈ ಕ್ರಮವು 2030ರ ವೇಳೆಗೆ 300 ಶತಕೋಟಿ ಯೂನಿಟ್ ವಿದ್ಯುತ್‌ ಉತ್ಪಾದನೆಯನ್ನು ತಪ್ಪಿಸುವ ಮೂಲಕ 1.2 ಲಕ್ಷ ಕೋಟಿ ಮೌಲ್ಯದ ವಿದ್ಯುತ್ ಅನ್ನು ಉಳಿಸುವ ಸಾಧ್ಯತೆಯಿದೆ. ಅಂದರೆ, ಅಪಾರ್ಟ್​ಮೆಂಟ್​ಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಇದರಿಂದ ಕಟ್ಟಡ ನಿರ್ಮಾಣದ ವೆಚ್ಚವು ಶೇ. 2ರಿಂದ 3ರಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದರೆ, ಕಡಿಮೆ ವಿದ್ಯುತ್ ಬಿಲ್‌ಗಳ ಮೂಲಕ 4ರಿಂದ 5 ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಗೆ ಹೂಡಿದ ಹಣ ವಾಪಾಸ್ ಬರಲಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಾರ್ಟ್​ಮೆಂಟ್, ವಾಣಿಜ್ಯ ಕಾಂಪ್ಲೆಕ್ಸ್​ಗಳಲ್ಲಿ 100 ಕಿಲೋವ್ಯಾಟ್‌ ವಿದ್ಯುತ್ ಬಳಸುವ ಅಪಾರ್ಟ್​ಮೆಂಟ್, ಕಟ್ಟಡಗಳಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ. 100 ಕಿಲೋವ್ಯಾಟ್​ನಷ್ಟು ವಿದ್ಯುತ್ ಬಳಸುವ ಅಪಾರ್ಟ್​ಮೆಂಟ್, ಕಟ್ಟಡಗಳು ಸೋಲಾರ್ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಮಾಲೀಕರೇ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಸೋಲಾರ್ ವಿದ್ಯುತ್ ಅನ್ನು ಅಪಾರ್ಟ್​ಮೆಂಟ್​ನಲ್ಲಿ ಬಳಸಬೇಕು. ಇದರಿಂದ ಸರ್ಕಾರ ಉತ್ಪಾದಿಸಿ ಪೂರೈಸುವ ವಿದ್ಯುತ್ ಮೇಲಿನ ಅವಲಂಬನೆಯನ್ನು ನಿಲ್ಲಿಸಲು ಸಾಧ್ಯ. ಅಪಾರ್ಟ್​ಮೆಂಟ್​ಗಳು ವಿದ್ಯುತ್‌ ನಲ್ಲಿ ಸ್ವಾವಲಂಬಿಯಾಗುತ್ತವೆ. ಸಾಮಾನ್ಯವಾಗಿ 1 ಬಿಎಚ್‌ಕೆಯ 20 ಮನೆಗಳು ಅಥವಾ 2 ಬಿಎಚ್‌ಕೆಯ 10 ಮನೆಗಳು 100 ಕಿಲೋವ್ಯಾಟ್ ವಿದ್ಯುತ್ ಅನ್ನು ಬಳಕೆ ಮಾಡುತ್ತವೆ. ಒಂದು ಬಿಎಚ್‌ಕೆಯ ಒಂದು ಮನೆಗೆ 5 ಕಿಲೋವ್ಯಾಟ್ ವಿದ್ಯುತ್ ಬೇಕಾಗುತ್ತದೆ.

2030ರ ವೇಳೆಗೆ ಇಂಧನ ತೀವ್ರತೆಯನ್ನು ಶೇ.45ರಷ್ಟು ಕಡಿಮೆ ಮಾಡುವ ಭಾರತದ ಬದ್ಧತೆಯ ಭಾಗವಾದ ಪ್ರಸ್ತಾವನೆಗೆ ವಿದ್ಯುತ್ ಸಂರಕ್ಷಣೆ ಕಾಯಿದೆಯಲ್ಲಿ ತಿದ್ದುಪಡಿಯ ಅಗತ್ಯವಿದೆ. ಕಾಯಿದೆಯ ತಿದ್ದುಪಡಿ ಪ್ರಸ್ತಾವವನ್ನು ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕಳುಹಿಸಲಾಗುತ್ತಿದೆ.

ಇಂಧನ ಸಂರಕ್ಷಣಾ ಕಾಯಿದೆಯ ಪ್ರಕಾರ, ವಾಣಿಜ್ಯ ಕಟ್ಟಡಗಳು ಮಾತ್ರ ಇಂಧನ ದಕ್ಷತೆಯ ಕೋಡ್ ಅನ್ನು ಅನುಸರಿಸಲು ಕಡ್ಡಾಯಗೊಳಿಸಬಹುದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) 2017 ರಲ್ಲಿ ವಾಣಿಜ್ಯ ಕಟ್ಟಡಗಳಿಗಾಗಿ ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ಸ್ ಕೋಡ್ (ಇಸಿಬಿಸಿ) ಅನ್ನು ಪ್ರಾರಂಭಿಸಿತು. BEE 2018 ರಲ್ಲಿ ವಸತಿ ಕಟ್ಟಡಗಳಿಗಾಗಿ ಪ್ರತ್ಯೇಕ ಪರಿಸರ ನಿವಾಸ ಸಂಹಿತಾ (ENS) ಕೋಡ್ ಅನ್ನು ಪ್ರಾರಂಭಿಸಿದೆ. 500 ಚದರ ಮೀಟರ್‌ಗಿಂತ ಹೆಚ್ಚಿನ ಪ್ರದೇಶವನ್ನು ಹೊಂದಿರುವ ವಸತಿ ಘಟಕಗಳಿಂದ ಸ್ವಯಂಪ್ರೇರಿತ ಆಧಾರದ ಮೇಲೆ ಕೋಡ್ ಅನ್ನು ಅಳವಡಿಸಿಕೊಳ್ಳಬಹುದು.

BEE ಪ್ರಕಾರ, ವಸತಿ ಕಟ್ಟಡಗಳು ಭಾರತದ ಒಟ್ಟು ವಿದ್ಯುತ್‌ ಬಳಕೆಯಲ್ಲಿ ಸುಮಾರು ಶೇ.24ರಷ್ಟಿದೆ. 2030ರ ವೇಳೆಗೆ ಮತ್ತೊಂದು 3 ಬಿಲಿಯನ್ ಚದರ ಮೀಟರ್ ಪ್ರದೇಶವನ್ನು ಸೇರಿಸುವ ನಿರೀಕ್ಷೆಯಿದೆ.

“ಮನೆಗಳಲ್ಲಿ, ಪ್ರಾಥಮಿಕ ಶಕ್ತಿಯ ಬಳಕೆಯು ಹವಾನಿಯಂತ್ರಣಗಳು, ಲೈಟ್, ಫ್ಯಾನ್‌ಗಳು ಮೂಲಕ ವಿದ್ಯುತ್ ಬಳಕೆ ಮಾಡಲಾಗುತ್ತದೆ. ENS ಸೂಕ್ತವಾದ ವಸ್ತು, ವಿನ್ಯಾಸ, ವಾತಾಯನ ಮತ್ತು ಮನೆಗಳನ್ನು ದಿನದ ಗರಿಷ್ಠ ಸಮಯವನ್ನು ಆರಾಮದಾಯಕವಾಗಿಸಲು ತಂತ್ರಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಇದರಿಂದಾಗಿ ಎಸಿಗಳು, ಕೂಲರ್‌ಗಳ ಬಳಕೆ, ಫ್ಯಾನ್‌ಗಳು ಮತ್ತು ಲೈಟ್‌ಗಳ ಬಳಕೆ ಕಡಿಮೆಯಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.

BEE ಪ್ರತಿ ಚದರ ಮೀಟರ್‌ಗೆ ವಾರ್ಷಿಕ ಶಕ್ತಿಯ ಬಳಕೆಯ ಆಧಾರದ ಮೇಲೆ ಕಟ್ಟಡಗಳಿಗೆ ಸ್ಟಾರ್ ಲೇಬಲ್ ಮಾಡುವ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಕಟ್ಟಡ ಕೋಡ್ ಮತ್ತು ಲೇಬಲಿಂಗ್ ಪ್ರೋಗ್ರಾಂ ಇಂಗಾಲದ ಹೊರಸೂಸುವಿಕೆಯ ಕಡಿತದ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ ಆ ವೇಗವನ್ನು ಪಡೆಯುವ ನಿರೀಕ್ಷೆಯಿದೆ.

ಕಳೆದ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ COP 26ರಲ್ಲಿ, ಭಾರತವು 2070ರ ವೇಳೆಗೆ ತನ್ನ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಕಡಿತಗೊಳಿಸುವುದಾಗಿ ಭರವಸೆ ನೀಡಿತು. ದೇಶವು 500 Gw ಪಳೆಯುಳಿಕೆ ರಹಿತ ವಿದ್ಯುತ್ ಸಾಮರ್ಥ್ಯ, ಶೇ.50ರಷ್ಟು ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯ, ಕಡಿತವನ್ನು ಘೋಷಿಸಿದೆ. ಹೀಗಾಗಿ, ಈ ಗುರಿಯನ್ನು ತಲುಪಲು ಈಗ ದೇಶದಲ್ಲಿ ಹೆಚ್ಚೆಚ್ಚು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಬೇಕು. ಸರ್ಕಾರ ಮಾತ್ರವೇ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ, ಗ್ರಾಹಕರಿಗೆ ಪೂರೈಸಿದರೇ, ಈ ಗುರಿ ತಲುಪಲು ಸಾಧ್ಯವಿಲ್ಲ. ಹೀಗಾಗಿ, ಕಾಯಿದೆಗೆ ತಿದ್ದುಪಡಿ ತಂದು ಅಪಾರ್ಟ್​ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವಂತೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಬಾರಿ ಬದಲಾವಣೆಯಾಗಬಹುದು. ಪ್ರತಿಯೊಂದು ಮನೆಯಲ್ಲೂ ಸೋಲಾರ್ ವಿದ್ಯುತ್ ಉತ್ಪಾದನೆಯಾಗಿ ಬಳಕೆ ಮಾಡುವಂತಾದರೆ ಆಗ ಸರ್ಕಾರ ಪೂರೈಸುವ ವಿದ್ಯುತ್ ಮೇಲೆ ಅವಲಂಬನೆಯಾಗುವ ಅಗತ್ಯವೇ ಇರುವುದಿಲ್ಲ.

ಇದನ್ನೂ ಓದಿ: Budget 2022: ಸೋಲಾರ್ ವಿದ್ಯುತ್ ಉತ್ಪಾದನೆಗೆ ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧಾರ: ಬಜೆಟ್ ಮಂಡನೆ ವಿಡಿಯೋ ಇಲ್ಲಿದೆ

ಕೃಷ್ಣ ಮೃಗಗಳ ವಾಸಸ್ಥಾನದಲ್ಲಿಯೇ ಸೋಲಾರ್ ಪಾರ್ಕ್; ಕರೆಂಟ್ ಶಾಕ್ ತಗುಲಿ ಹಲವು ಜಿಂಕೆಗಳ ಸಾವು, ಕೈಕಟ್ಟಿ ಕುಳಿತ ಬೀದರ್ ಜಿಲ್ಲಾಡಳಿತ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ