ಕೃಷ್ಣ ಮೃಗಗಳ ವಾಸಸ್ಥಾನದಲ್ಲಿಯೇ ಸೋಲಾರ್ ಪಾರ್ಕ್; ಕರೆಂಟ್ ಶಾಕ್ ತಗುಲಿ ಹಲವು ಜಿಂಕೆಗಳ ಸಾವು, ಕೈಕಟ್ಟಿ ಕುಳಿತ ಬೀದರ್ ಜಿಲ್ಲಾಡಳಿತ
ಬೀದರ್ ನಗರದ ಹೊರವಲಯದ ಬೆಳ್ಳೂರಾ ಪ್ರದೇಶದ ವಾಸಿಸುವ ವನ್ಯಜೀವಿಗಳ ವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದೆ. ಜಿಂಕೆ, ಕೃಷ್ಣಮೃಗಗಳು ವಾಸ ಮಾಡುವ ಸ್ಥಳದಲ್ಲೇ ತಂತಿ ಬೇಲಿ ಹಾಕಲಾಗಿದೆ. ಜೊತೆಗೆ ಜಿಂಕೆಗಳ ವಾಸಸ್ಥಾನದಲ್ಲೇ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಬೀದರ್: ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೃಷ್ಣ ಮೃಗಗಳು ಅತಂತ್ರವಾಗಿವೆ. ಜಿಲ್ಲೆಯ ಹೊರವಲಯದ ಬೆಳ್ಳೂರಾ ಪ್ರದೇಶದಲ್ಲಿ ವಾಸಿಸುವ ವನ್ಯಜೀವಿಗಳ ಜಾಗದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಬಯಲು ಭೂಮಿಯಲ್ಲಿ ಗೋಡೆಯಂತೆ ಅಡ್ಡಲಾಗಿ ತಂತಿ ಬೇಲಿ ಹಾಕಲಾಗಿದೆ. ಹೊಸದಾಗಿ ಕಾಂಪೌಂಡ್ ಕಟ್ಟಲು ಸಿದ್ಧತೆ ನಡೆದಿದೆ. ಇದರಿಂದ ವನ್ಯಜೀವಿಗಳ ವಾಸಕ್ಕೆ ಸಂಕಷ್ಟ ಎದುರಾಗಿದೆ.
ಕೃಷ್ಣ ಮೃಗಗಳ ವಾಸಸ್ಥಾನಕ್ಕೆ KIADB ತಂತಿ ಬೇಲಿ ಬೀದರ್ ನಗರದ ಹೊರವಲಯದ ಬೆಳ್ಳೂರಾ ಪ್ರದೇಶದ ವಾಸಿಸುವ ವನ್ಯಜೀವಿಗಳ ವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದೆ. ಜಿಂಕೆ, ಕೃಷ್ಣಮೃಗಗಳು ವಾಸ ಮಾಡುವ ಸ್ಥಳದಲ್ಲೇ ತಂತಿ ಬೇಲಿ ಹಾಕಲಾಗಿದೆ. ಜೊತೆಗೆ ಜಿಂಕೆಗಳ ವಾಸಸ್ಥಾನದಲ್ಲೇ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಕಾಡುಪ್ರಾಣಿಗಳ ವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದ್ದು, ಜಿಂಕೆಗಳಿಗೆ ಆಪತ್ತು ಎದುರಾಗಿದೆ.
ಹಲವು ವರ್ಷಗಳಿಂದ ಇಲ್ಲಿ ಸಾವಿರಗಟ್ಟಲೇ ಜಿಂಕೆಗಳು ಆಶ್ರಯ ಪಡೆದುಕೊಂಡಿದ್ವು. ಆದ್ರೆ ಮೂರು ವರ್ಷಗಳ ಹಿಂದೆ ಕೆಐಡಿಬಿಯವರು ಈ ಜಾಗವನ್ನು ಖರೀದಿ ಮಾಡಿದ್ದು, ಸೈಟ್ ಮಾಡಿ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಜಿಂಕೆಗಳು ಕೂಡ ಬಯಲಿನಲ್ಲೇ ವಾಸ ಮಾಡುವ ಪ್ರಾಣಿಗಳು. ಆದ್ರೆ ಸರ್ಕಾರ ಆ ಬಯಲು ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಿದೆ. ಇದರಿಂದ ಕರೆಂಟ್ ಶಾಕ್ ತಗುಲಿ ಈಗಾಗಲೇ ಹಲವು ಜಿಂಕೆಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೈಗಾರಿಕರಣ, ನಗರೀಕರಣಕ್ಕಿಂತ ಹಸಿರೀಕರಣಕ್ಕೆ ಸರ್ಕಾರ ಉತ್ತೇಜನ ನೀಡಬೇಕಿದ್ದು, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಕೃಷ್ಣಮೃಗಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಇದನ್ನೂ ಓದಿ: ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್
Fruits juice for skin: ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಈ ಜೂಸ್ಗಳು ಸಹಕಾರಿ