ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ: ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

| Updated By: ರಶ್ಮಿ ಕಲ್ಲಕಟ್ಟ

Updated on: Apr 17, 2022 | 5:18 PM

"ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅವರವರ ಇಷ್ಟದ ಆಹಾರವನ್ನು ತಿನ್ನಲು ಸ್ವಾತಂತ್ರ್ಯವಿದೆ" ಎಂದು ನಖ್ವಿ ಹೇಳಿದ್ದಾರೆ.

ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ: ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ
Follow us on

ಮುಂಬೈ: ಭಾರತೀಯರಿಗೆ ತಮ್ಮ ನಂಬಿಕೆಯನ್ನು ಆಚರಿಸಲು ಸ್ವಾತಂತ್ರ್ಯವಿದೆ. ಧಾರ್ಮಿಕ ಸಮುದಾಯಗಳ ನಡುವೆ ಯಾವುದೇ ಅಸಹಿಷ್ಣುತೆ ಬೆಳೆಯುತ್ತಿಲ್ಲ ಎಂದು ದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಗಲಭೆಗಳ ನಡುವೆ ಭಾನುವಾರ ಪ್ರಕಟವಾದ ಸಂದರ್ಶನದಲ್ಲಿ ದೇಶದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ (Mukhtar Abbas Naqvi) ಹೇಳಿದ್ದಾರೆ. ಹನುಮ ಜಯಂತಿ (Hanuman Jayanti)ನಿಮಿತ್ತ ನವದೆಹಲಿಯಲ್ಲಿ ಶನಿವಾರ ನಡೆದ ಹಿಂದೂ ಧಾರ್ಮಿಕ ಮೆರವಣಿಗೆಯಲ್ಲಿ ಧಾರ್ಮಿಕ ಘರ್ಷಣೆಗಳು ನಡೆದಿದ್ದು, ಆರು ಪೊಲೀಸರು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಿ ಎಕನಾಮಿಕ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ  ಮುಖ್ತಾರ್ ಅಬ್ಬಾಸ್ ನಖ್ವಿ ಅವರು ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಅಂಚಿನಲ್ಲಿರುವ ಅಂಶಗಳು ಭಾರತದ ಅಂತರ್ಗತ ಸಂಸ್ಕೃತಿ ಮತ್ತು ಬದ್ಧತೆಯನ್ನು ದೂಷಿಸಲು ಪ್ರಯತ್ನಿಸುತ್ತವೆ ಎಂದಿದ್ದಾರೆ. ಇತ್ತೀಚಿನ ವಾರಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಧಾರ್ಮಿಕ ಮೆರವಣಿಗೆಗಳಲ್ಲಿ ಬಹುಸಂಖ್ಯಾತ ಹಿಂದೂ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನಡುವೆ ಸಣ್ಣ ಪ್ರಮಾಣದ ಧಾರ್ಮಿಕ ಗಲಭೆಗಳು (religious riots)ಭುಗಿಲೆದ್ದಿವೆ. ದೆಹಲಿಯ ಜೆಎನ್​​ಯು ವಿಶ್ವ ವಿದ್ಯಾಲಯದಲ್ಲಿ ರಾಮ ನವಮಿಯಂದು ಹಾಸ್ಟೆಲ್‌ನಲ್ಲಿ ಮಾಂಸಾಹಾರವನ್ನು ನೀಡುವುದರ ಕುರಿತು ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿತ್ತು.

“ಜನರಿಗೆ ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅವರವರ ಇಷ್ಟದ ಆಹಾರವನ್ನು ತಿನ್ನಲು ಸ್ವಾತಂತ್ರ್ಯವಿದೆ” ಎಂದು ನಖ್ವಿ ಹೇಳಿದ್ದಾರೆ.

ತಿಂಗಳ ಆರಂಭದಲ್ಲಿ, ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗೆ ಬಂದ ವಿವಾದ ಭುಗಿಲೆದ್ದಿತ್ತು.  ಭಾರತದ ವಿರೋಧ ಪಕ್ಷಗಳು ಶನಿವಾರ ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದು, ಬಹು-ನಂಬಿಕೆಯ ಭಾರತವು ಹಿಂದೂಗಳ ಪ್ರಾಬಲ್ಯವನ್ನು ಹೊಂದಿದೆ ಆದರೆ 200 ಮಿಲಿಯನ್ ಮುಸ್ಲಿಮರು ಸೇರಿದಂತೆ ಗಮನಾರ್ಹ ಅಲ್ಪಸಂಖ್ಯಾತರನ್ನು ಹೊಂದಿದೆ, ಪ್ರಧಾನಿ ಮೋದಿಯವರ ಆಡಳಿತದಲ್ಲಿ ಕಡಿಮೆ ಸಹಿಷ್ಣುತೆ ಹೊಂದುತ್ತಿದೆ ಎಂದಿದೆ.

“ಭಾರತದಲ್ಲಿ ಹಿಜಾಬ್‌ಗೆ ಯಾವುದೇ ನಿಷೇಧವಿಲ್ಲ. ಮಾರುಕಟ್ಟೆ ಮತ್ತು ಇತರ ಸ್ಥಳಗಳಲ್ಲಿ ಒಬ್ಬರು ಹಿಜಾಬ್ ಧರಿಸಬಹುದು. ಆದರೆ ಪ್ರತಿ ಕಾಲೇಜು ಅಥವಾ ಸಂಸ್ಥೆಯು ಡ್ರೆಸ್ ಕೋಡ್, ಶಿಸ್ತು ಹೊಂದಿದೆ. . ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮಗೆ ಇಷ್ಟವಿಲ್ಲದಿದ್ದರೆ, ನೀವು ಬೇರೆ ಸಂಸ್ಥೆಯನ್ನು ಆಯ್ಕೆ ಮಾಡಬಹುದು” ಎಂದು ನಖ್ವಿ ಹೇಳಿದ್ದಾರೆ .

ಇದನ್ನೂ ಓದಿ:  ಹುಬ್ಬಳ್ಳಿ ಗಲಭೆ: ಧರ್ಮದ ಹೆಸರಿನಲ್ಲಿ ಶಾಂತಿ ಕದಡುವುದು ಬೇಡ, ಶಾಸಕ ಅಬ್ಬಯ್ಯ ಪ್ರಸಾದ್ ತಾಕೀತು