International Yoga Day 2021: 18ಸಾವಿರ ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ ಐಟಿಬಿಪಿ ಯೋಧರು

ಇಂದು ಐಟಿಬಿಪಿಯ ಕೆಲವು ಸಿಬ್ಬಂದಿ ಹಿಮಾಚಲ ಪ್ರದೇಶದ 16000 ಅಡಿ ಎತ್ತರದ ಪ್ರದೇಶದಲ್ಲಿ, ಲಡಾಖ್​ನ ಪ್ಯಾಂಗೋಂಗ್​ ತ್ಸೋ ಸರೋವರ ದಡದ 14,000 ಅಡಿ ಎತ್ತರದಲ್ಲಿ ಕೂಡ ಯೋಗಾಭ್ಯಾಸ ಮಾಡಿದ್ದಾರೆ.

International Yoga Day 2021: 18ಸಾವಿರ ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ ಐಟಿಬಿಪಿ ಯೋಧರು
ಯೋಗಾಭ್ಯಾಸದಲ್ಲಿ ತೊಡಗಿರುವ ಐಟಿಬಿಪಿ ಯೋಧರು..
Follow us
TV9 Web
| Updated By: Lakshmi Hegde

Updated on: Jun 21, 2021 | 9:27 AM

ಇಂದು ಅಂತಾರಾಷ್ಟ್ರೀಯ ಯೋಗ ದಿನ. ಬೆಳಗ್ಗೆಯೇ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಾಗೇ ಭಾರತ-ಚೀನಾ ಗಡಿಯಲ್ಲಿ ನಿಯೋಜಿಸಲ್ಪಟ್ಟಿರುವ ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​​​ (ಐಟಿಬಿಪಿ)ಸಿಬ್ಬಂದಿ 18000 ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ್ದಾರೆ. ಹಿಮ ಬೀಳುತ್ತಿದ್ದರೂ ಅದರ ಮಧ್ಯೆಯೇ ಐಟಿಬಿಪಿ ಸಿಬ್ಬಂದಿ ಯೋಗಾಭ್ಯಾಸ ಮಾಡಿದ ಫೋಟೋಗಳು ವೈರಲ್​ ಆಗುತ್ತಿವೆ. ಕಳೆದ ವರ್ಷವೂ ಸಹ ಐಟಿಬಿಪಿ ಸಿಬ್ಬಂದಿ ಲಡಾಖ್​ ಔಟ್​ಪೋಸ್ಟ್​​​ ರೇಂಜಿಂಗ್​​ನಲ್ಲಿರುವ 13,000 ಅಡಿ ಎತ್ತರದ ಪ್ರದೇಶದಲ್ಲಿ ಯೋಗ ಮಾಡಿದ್ದರು.

ಅಷ್ಟೇ ಅಲ್ಲ, ಇಂದು ಐಟಿಬಿಪಿಯ ಕೆಲವು ಸಿಬ್ಬಂದಿ ಹಿಮಾಚಲ ಪ್ರದೇಶದ 16000 ಅಡಿ ಎತ್ತರದ ಪ್ರದೇಶದಲ್ಲಿ, ಲಡಾಖ್​ನ ಪ್ಯಾಂಗೋಂಗ್​ ತ್ಸೋ ಸರೋವರ ದಡದ 14,000 ಅಡಿ ಎತ್ತರದಲ್ಲಿ, ಕಳೆದ ವರ್ಷ ಚೀನಾ ಸೈನಿಕರೊಂದಿಗೆ ಸಂಘರ್ಷ ನಡೆದ ಗಾಲ್ವಾನ್​ ಕಣಿವೆಯ ಬಳಿಯೂ ಯೋಗಾಭ್ಯಾಸ ನಡೆಸಿದ್ದಾರೆ.

ITBP 2

ಯೋಗಾಭ್ಯಾಸದಲ್ಲಿ ತೊಡಗಿರುವ ಯೋಧರು

ಲಡಾಖ್​​ನಲ್ಲಂತೂ ವಿಪರೀತ ಚಳಿ. 30 ಡಿಗ್ರಿ ಸೆಲ್ಸಿಯಸ್​ ಕೊರೆವ ಚಳಿಯಲ್ಲೂ ಯೋಗಾಭ್ಯಾಸ ಮಾಡಿದ ಐಟಿಬಿಪಿ ಸಿಬ್ಬಂದಿಯ ಬದ್ಧತೆಗೆ ಇಡೀ ದೇಶ ಭೇಷ್​ ಎನ್ನುತ್ತಿದೆ. ಗಾಲ್ವಾನ್ ಸೇರಿ ಹಲವು ಪ್ರದೇಶಗಳಿಗೆ ಸಂಚರಿಸುವುದೇ ಕಷ್ಟವಾಗಿರುವಾಗ ಈ ಯೋಧರು ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುತ್ತಾರೆ. ಅಂಥ ಚಳಿಯಲ್ಲೂ ಮುಂಜಾನೆ ಹಿಮದಲ್ಲೇ ಕುಳಿತು ಯೋಗಾಭ್ಯಾಸ ಮಾಡುವುದು ನಿಜಕ್ಕೂ ಹೆಮ್ಮೆ ತರುತ್ತಿದೆ ಎಂದು ನೆಟ್ಟಿಗರೂ ಅಭಿಪ್ರಾಯ ಪಟ್ಟಿದ್ದಾರೆ.

ITBP 1

ಐಟಿಬಿಪಿ ಯೋಗಾಭ್ಯಾಸ

ಇದನ್ನೂ ಓದಿ: International Yoga Day 2021: ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗದಿಂದ ಬಲ ಸಿಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ