ಜಸ್ಟ್​ ಮಿಸ್​: ಪ್ರಪಾತಕ್ಕೆ ಬೀಳ್ತಿದ್ದ 30 ಯೋಧರು ಪ್ರಾಣಾಪಾಯದಿಂದ ಪಾರು

| Updated By: ಸಾಧು ಶ್ರೀನಾಥ್​

Updated on: Oct 08, 2020 | 6:04 PM

ದೆಹರಾದೂನ್​: ಉತ್ತರಾಖಂಡ್‌ನ ಕಂಫ್ಟಿ ಫಾಲ್ಸ್ ಬಳಿ ತೆರಳುತ್ತಿದ್ದ ಯೋಧರ ಬಸ್​ ಭಾರಿ ಅನಾಹುತದಿಂದ ತಪ್ಪಿಸಿಕೊಂಡಿದೆ. ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದ ಬಸ್‌ನಲ್ಲಿದ್ದ ಯೋಧರು ಅದೃಷ್ಟವಶಾತ್​ ಪಾರಾಗಿದ್ದಾರೆ. ITBP ಪಡೆಯ ಸುಮಾರು 25ರಿಂದ 30 ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಬಸ್ ಅದರ ಪಕ್ಕದಲ್ಲೇ ಇದ್ದ ಪ್ರಪಾತಕ್ಕೆ ಜಾರಲು ಮುಂದಾಗಿತ್ತು. ಬಸ್‌ನ ಮುಂದಿನ ಟೈರ್‌ಗಳು ಪ್ರಪಾತದ ಕಡೆ ನುಗ್ಗಿದ್ದ ಹಿನ್ನೆಲೆಯಲ್ಲಿ ವಾಹನದ ಇಂಜಿನ್ ನೆಲಕ್ಕೆ ತಾಗಿ ಅರ್ಧ ಬಸ್ ಗಾಳಿಯಲ್ಲೇ ತೇಲತೊಡಗಿತು. […]

ಜಸ್ಟ್​ ಮಿಸ್​: ಪ್ರಪಾತಕ್ಕೆ ಬೀಳ್ತಿದ್ದ 30 ಯೋಧರು ಪ್ರಾಣಾಪಾಯದಿಂದ ಪಾರು
Follow us on

ದೆಹರಾದೂನ್​: ಉತ್ತರಾಖಂಡ್‌ನ ಕಂಫ್ಟಿ ಫಾಲ್ಸ್ ಬಳಿ ತೆರಳುತ್ತಿದ್ದ ಯೋಧರ ಬಸ್​ ಭಾರಿ ಅನಾಹುತದಿಂದ ತಪ್ಪಿಸಿಕೊಂಡಿದೆ. ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದ ಬಸ್‌ನಲ್ಲಿದ್ದ ಯೋಧರು ಅದೃಷ್ಟವಶಾತ್​ ಪಾರಾಗಿದ್ದಾರೆ.

ITBP ಪಡೆಯ ಸುಮಾರು 25ರಿಂದ 30 ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ಗೆ ನುಗ್ಗಿದ ಬಸ್ ಅದರ ಪಕ್ಕದಲ್ಲೇ ಇದ್ದ ಪ್ರಪಾತಕ್ಕೆ ಜಾರಲು ಮುಂದಾಗಿತ್ತು. ಬಸ್‌ನ ಮುಂದಿನ ಟೈರ್‌ಗಳು ಪ್ರಪಾತದ ಕಡೆ ನುಗ್ಗಿದ್ದ ಹಿನ್ನೆಲೆಯಲ್ಲಿ ವಾಹನದ ಇಂಜಿನ್ ನೆಲಕ್ಕೆ ತಾಗಿ ಅರ್ಧ ಬಸ್ ಗಾಳಿಯಲ್ಲೇ ತೇಲತೊಡಗಿತು. ಕೂಡಲೇ, ಸಮಯಪ್ರಜ್ಞೆ ಮೆರೆದ ಯೋಧರು ಬಸ್‌ನಿಂದ ಕೆಳಗಡೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.