
ನವದೆಹಲಿ, ಜುಲೈ 22: ಜಗದೀಪ್ ದನ್ಖರ್(Jagdeep Dhankhar) ಅವರು ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯದ ನೆಪವೊಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ ರಾಜೀನಾಮೆ ನೀಡಿದವರಲ್ಲಿ ಜಗದೀಪ್ ದನ್ಖರ್ ಮೊದಲಿಗರಲ್ಲ. ಈ ಮೊದಲು ಇನ್ನೂ ಇಬ್ಬರು ಕೂಡ ಹೀಗೆಯೇ ರಾಜೀನಾಮೆ ನೀಡಿದ್ದರು. ಅವರು ಯಾರು ಎಂಬುದನ್ನು ತಿಳಿಯೋಣ.
ಮುಂಗಾರು ಅಧಿವೇಶನದ ಮೊದಲ ದಿನವೇ ಧನ್ಖರ್ ಅವರು ರಾಜೀನಾಮೆ ನೀಡಿದ್ದಾರೆ.
ಅವರ ರಾಜೀನಾಮೆ ಬಳಿಕ ರಾಜಕೀಯ ಪ್ರಕ್ಷುಬ್ದತೆ ತೀವ್ರಗೊಂಡಿದೆ. ಮುಂದಿನ ಉಪರಾಷ್ಟ್ರಪತಿ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ರಾಜ್ಯಸಭೆಯಲ್ಲಿ ಎನ್ಡಿಎ ಬಹುಮತ ಹೊಂದಿದೆ.
ಜಗದೀಪ್ ಧಂಖರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ 67(ಎ) ವಿಧಿಯನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸದೆ ತಮ್ಮ ಹುದ್ದೆಯನ್ನು ತೊರೆಯಲು ನಿರ್ಧರಿಸಿದ ಮೂರನೇ ಉಪ ರಾಷ್ಟ್ರಪತಿ ಇವರಾಗಿದ್ದಾರೆ.
1992ರಲ್ಲಿ ಉಪ ರಾಷ್ಟ್ರಪತಿ ಕೃಷ್ಣಕಾಂತ್ ಮಧ್ಯಂತರ ಅವಧಿಯಲ್ಲಿ ನಿಧನರಾದರು. ಅವರು ಆಗಸ್ಟ್ 21, 1992ರಂದು ಉಪ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು ಜುಲೈ 27, 2002ರಂದು ತಮ್ಮ ಅಧಿಕಾರಾವಧಿಯಲ್ಲಿ ನಿಧನರಾದರು.
ಇದಲ್ಲದೆ, 1974ರಲ್ಲಿ ಉಪ ರಾಷ್ಟ್ರಪತಿ ಬಿಡಿ ಜತ್ತಿ ತಮ್ಮ ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ನೀಡಿದ್ದರು. ಜಗದೀಪ್ ದನ್ಖರ್ ಆಗಸ್ಟ್ 11, 2022ರಂದು 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದಕ್ಕೂ ಮೊದಲು, ವರಾಹಗಿರಿ ವೆಂಕಟ ಗಿರಿ( ವಿವಿ ಗಿರಿ) ಅವರು ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಗಿರಿಯವರ ಈ ನಿರ್ಧಾರ ಚರ್ಚೆಯಲ್ಲಿತ್ತು.
ಜಗದೀಪ್ ದನ್ಖರ್ ರಾಜೀನಾಮೆ ಬಳಿಕ ಉಪ ರಾಷ್ಟ್ರಪತಿ ಹುದ್ದೆಯನ್ನು ತುಂಬಲು ಚುನಾವಣಾ ಪ್ರಕ್ರಿಯೆಯನ್ನು ಮತ್ತೆ ಪೂರ್ಣಗೊಳಿಸಬೇಕಾಗುತ್ತದೆ. ಅದರ ನಂತರ ದೇಶವು ಹೊಸ ಉಪರಾಷ್ಟ್ರಪತಿಯನ್ನು ಪಡೆಯುತ್ತದೆ.
ಮತ್ತಷ್ಟು ಓದಿ: Jagdeep Dhankhar: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ
ಭಾರತದ ಉಪ ರಾಷ್ಟ್ರಪತಿಯಾಗಲು ಯಾರು ಅರ್ಹರು?
1.ಭಾರತದ ಪ್ರಜೆಯಾಗಿರುವುದು ಕಡ್ಡಾಯ
2.ಕನಿಷ್ಠ 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು
3.ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯು 15 ಸಾವಿರ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು.
4.ಚುನಾವಣೆಯ ಸಮಯದಲ್ಲಿ 1/6 ಮತಗಳನ್ನು ಪಡೆಯದಿದ್ದರೆ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸುವ ಹಕ್ಕಿದೆ?
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಮಾತ್ರ ಮತದಾನದ ಹಕ್ಕು ಹೊಂದಿರುತ್ತಾರೆ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಿಗೂ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿದೆ.
ಬಿಡಿ ಜತ್ತಿ, ವಿವಿ ಗಿರಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರ ಹಠಾತ್ ರಾಜೀನಾಮೆ ಊಹಿಸಲೂ ಅಸಾಧ್ಯವಾದಷ್ಟು ಆಘಾತಕಾರಿಯಾಗಿದೆ. ನಾನು ಇಂದು ಸಂಜೆ ಸುಮಾರು 5 ಗಂಟೆಯವರೆಗೆ ಅವರೊಂದಿಗೆ ಹಲವಾರು ಇತರ ಸಂಸದರೊಂದಿಗೆ ಇದ್ದೆ ಮತ್ತು ಸಂಜೆ 7.30 ಕ್ಕೆ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದೆ.
ಜಗದೀಪ್ ಧನ್ಖರ್ ಅವರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರ ಅನಿರೀಕ್ಷಿತ ರಾಜೀನಾಮೆಯ ಹಿಂದೆ ಗೋಚರಿಸುವುದಕ್ಕಿಂತ ಹೆಚ್ಚಿನದು ಅಡಗಿದೆ. ಆದಾಗ್ಯೂ, ಇದು ಊಹಾಪೋಹಗಳಿಗೆ ಸಮಯವಲ್ಲ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:43 am, Tue, 22 July 25