ಉತ್ತರ ಪ್ರದೇಶದ ಜೈಲಿನಲ್ಲಿರುವ ಮುಖ್ತಾರ್​ ಅನ್ಸಾರಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

|

Updated on: Mar 26, 2024 | 10:42 AM

ಉತ್ತರ ಪ್ರದೇಶದ ಬಾಂದಾ ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​-ರಾಜಕಾರಣಿ ಮುಖ್ತಾರ್ ಅನ್ಸಾರಿ(Mukhtar Ansari( ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಪೂರಿತ ಆಹಾರ ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಮತ್ತು ಜೈಲು ಆಡಳಿತದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಉತ್ತರ ಪ್ರದೇಶದ ಜೈಲಿನಲ್ಲಿರುವ ಮುಖ್ತಾರ್​ ಅನ್ಸಾರಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು
ಮುಖ್ತಾರ್ ಅನ್ಸಾರಿ
Follow us on

ಉತ್ತರ ಪ್ರದೇಶದ ಬಾಂದಾ ಜೈಲಿನಲ್ಲಿರುವ ಗ್ಯಾಂಗ್​ಸ್ಟರ್​-ರಾಜಕಾರಣಿ ಮುಖ್ತಾರ್ ಅನ್ಸಾರಿ(Mukhtar Ansari)ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಪೂರಿತ ಆಹಾರ ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಮತ್ತು ಜೈಲು ಆಡಳಿತದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ಎರಡು ದಿನಗಳ ಹಿಂದೆ ಮುಖ್ತಾರ್ ಅನ್ಸಾರಿ ಅವರ ಭದ್ರತೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಜೈಲರ್ ಮತ್ತು ಇಬ್ಬರು ಉಪ ಜೈಲರ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಜೈಲಿನಲ್ಲಿರುವ ಮುಖ್ತಾರ್ ವಿರುದ್ಧದ ಪ್ರಕರಣಗಳ ವಿಚಾರಣೆ ಚುರುಕುಗೊಂಡಿದೆ. ಇತ್ತೀಚೆಗೆ ಏಳನೇ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ.

ಜೈಲಿನಲ್ಲಿ ತನಗೆ ಸ್ಲೋ ಪಾಯ್ಸನ್ ನೀಡಲಾಗಿದೆ ಎಂದು ಪೂರ್ವಾಂಚಲದ ಡಾನ್ ಮುಖ್ತಾರ್ ಅನ್ಸಾರಿ ಇತ್ತೀಚೆಗೆ ಆರೋಪಿಸಿದ್ದರು. ಮಾರ್ಚ್ 21 ರಂದು ನ್ಯಾಯಾಲಯಕ್ಕೆ ಆಂಬ್ಯುಲೆನ್ಸ್​ನಲ್ಲಿ ಮುಖ್ತಾರ್ ಅನ್ಸಾರಿ ಹಾಜರಾಗಿದ್ದರು.

ಮಾರ್ಚ್​ 19ರಂದು ಊಟ ಮಾಡಿದ ಬಳಿಕ ಆರೋಗ್ಯ ಹದಗೆಟ್ಟಿತ್ತು. ದಯವಿಟ್ಟು ನನಗೆ ಸರಿಯಾಗಿ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನು ವ್ಯವಸ್ಥೆ ಮಾಡಿ ಎಂದು ಕೇಳಿದ್ದ ಅನ್ಸಾರಿ, 40 ದಿನಗಳ ಹಿಂದೆ ಕೂಡ ವಿಷ ಮಿಶ್ರಿತ ಆಹಾರ ನೀಡಿರುವುದಾಗಿ ಆರೋಪಿಸಿದ್ದರು.

ಮತ್ತಷ್ಟು ಓದಿ: ಕಪಿಲ್ ದೇವ್ ಸಿಂಗ್ ಕೊಲೆ ಪ್ರಕರಣ: ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು, 5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಮುಕ್ತಾರ್ ಅನ್ಸಾರಿಗೆ ಸ್ಲೋ ಪಾಯ್ಸನ್ ನೀಡಿದ ಆರೋಪವನ್ನು ಬಂದಾ ಜೈಲಿನ ಅಧೀಕ್ಷಕರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಮುಖ್ತಾರ್ ಅನ್ಸಾರಿಗೆ ಆಹಾರ ನೀಡುವ ಮೊದಲು ಕಾನ್‌ಸ್ಟೆಬಲ್ ಮತ್ತು ನಂತರ ಡೆಪ್ಯೂಟಿ ಜೈಲರ್ ಆಹಾರವನ್ನು ತಿನ್ನುತ್ತಾರೆ ಎಂದು ಅವರು ಹೇಳಿದ್ದಾರೆ. ಜೈಲಿನ 900 ಕೈದಿಗಳೂ ಇದೇ ಆಹಾರವನ್ನು ಸೇವಿಸುತ್ತಾರೆ. ಹೀಗಿರುವಾಗ ಸ್ಲೋ ಪಾಯ್ಸನ್ ನೀಡಿದ ಆರೋಪ ನಿರಾಧಾರ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ