ಕಾಶ್ಮೀರ: ದೇಶದ ರಕ್ಷಣಾ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat) ಸೇರಿದಂತೆ ದೇಶದ 13 ಮಂದಿ ಹೆಮ್ಮೆಯ ಸೇನಾನಿಗಳು ದುರ್ವಿಧಿಯ ಅಟ್ಟಹಾಸದಿಂದ ಕಳೆದ ವಾರ ಅಕಾಲಿಕವಾಗಿ ಸಾವನ್ನಪ್ಪಿದ್ದು ಇಡೀ ದೇಶವ್ನೇ ಶೋಕಸಾಗರದಲ್ಲಿ ಮುಳುಗಿಸಿತು. ಪ್ರತಿಯೊಬ್ಬ ದೇಶಪ್ರೇಮಿಯೂ ಕಣ್ಣೀರು ಹಾಕುತ್ತಾ, ಮರುಗಿದರು. ಆದರೆ ಈ ಮಧ್ಯೆ ದೇಶದ್ರೋಹಿಗಳಂತೆ ಕೆಲ ಮಂದಿ ವಿಕಟ ನಗೆಯನ್ನೂ ನಕ್ಕಿದ್ದಾರೆ. ಇದರಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದೂ ಅಲ್ಲದೆ ಪೊಲೀಸರು, ಕಾನೂನು ಕಟ್ಟಳೆಯನ್ನೂ ಎದುರಿಸುವಂತಾಗಿದೆ. ಇನ್ನು ಕೆಲ ಸಂಸ್ಥೆಗಳು ಅಂತಹ ವಿಕಟ ನಗೆ ನಕ್ಕಿದವರನ್ನು ಸೀದಾ ಮನೆಗೆ ಕಳುಹಿಸಿದೆ.
ಇಲ್ಲಿನ ಜಮ್ಮು ಕಾಶ್ಮೀರ ಬ್ಯಾಂಕ್ (Jammu and Kashmir Bank) ಮಹಿಳಾ ಸಿಬ್ಬಂದಿ ಅಫ್ರಿನಾ ಹಸನ್ ಸಖಾಶ್ (Afreen Hassan Naqash) ಅಕ್ಷರಶಃ ದೇಶದ ಹೆಮ್ಮೆಯ ಸೇನಾನಿಗಳ ಸಾವನ್ನು (martyrdom) ಅಕ್ಷರಶಃ ಸಂಭ್ರಮಿಸಿದ್ದರು. ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Facebook) ನಗುವಿನ ಎಮೋಜಿ (emoji) ಹಾಕಿದ್ದರು. ಇದರ ವಿರುದ್ಧ ಕಂಗೆಣ್ಣು ಬೀರಿದ ನೆಟ್ಟಿಗರು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆ ಅಂಡ್ ಕೆ ಬ್ಯಾಂಕ್ (J&K Bank) ಅನ್ನು ಆಗ್ರಹಿಸಿದ್ದರು. ಇದರ ವಿರುದ್ಧ ಎಚ್ಚೆತ್ತ ಬ್ಯಾಂಕ್ ಆಕ್ಷೇಪಾರ್ಹ ಕಾಮೆಂಟ್ (Derogatory) ಹಾಕಿದ್ದ ತನ್ನ ಸಿಬ್ಬಂದಿಯನ್ನು ಕೊನೆಗೂ ಸಸ್ಪೆಂಡ್ ಮಾಡಿ, ಮನೆಗೆ ಕಳುಹಿಸಿದೆ.
ಬ್ಯಾಂಕ್ ಆದೇಶ- ಸಂದೇಶ ಹೀಗಿದೆ:
despite repeated circulars issued from time to time against misuse of social media platforms by employees contrary to interests/rules of the Bank, in one such incident one of our employees has made derogatory comments/remarks on the social media platform on to tragic accident.
The contents are purely defamatory and not in consonance with conduct rules governing the services of an employee and tantamount to misconduct. Pending disciplinary proceedings against the Banking Attendant, Code No 023581, presently posted at Central Processing Centre CASA, she is hereby placed under Suspension with immediate effect.
ಜಮ್ಮು ಕಾಶ್ಮೀರ ಬ್ಯಾಂಕ್ ಮಹಿಳಾ ಸಿಬ್ಬಂದಿ ಅಫ್ರೀನಾ ಹಸನ್ ಸಖಾಶ್ ವಿರುದ್ಧ ಕಂಗೆಣ್ಣು ಬೀರಿದ ನೆಟ್ಟಿಗರು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು:
@JandKBank, your employee Afreen Hassan Naquash is celebrating the helicopter crash of CDS #bipinrawat.
Pls take appropriate action against her and set an example for other extremists ?? https://t.co/Z2WtXf6pTC pic.twitter.com/6LiGTzp99A— Rishabh (Expert) (@Rishabh_RW) December 8, 2021
ಸಿಡಿಎಸ್ ರಾವತ್ ನಿಧನದ ಬಗ್ಗೆ ವಿಕೃತ ಪೋಸ್ಟ್! ದೇಶ ವಿರೋಧಿಗಳ ಪತ್ತೆ ಹಚ್ಚಿ ಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ
ಬೆಂಗಳೂರು: ಸಿಡಿಎಸ್ ಬಿಪಿನ್ ರಾವತ್ ಭಾರತಕ್ಕೆ ನೀಡಿರುವ ಕೊಡುಗೆ ಅಪಾರ. ಇವರ ನಿಧನ ಇಡೀ ದೇಶಕ್ಕೆ ತುಂಬಲಾರದ ನಷ್ಟ. ಆದರೆ ಇವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಕೃತ ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆ ದೇಶ ವಿರೋಧಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು ಡಿಜಿ ಮತ್ತು ಐಜಿಪಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ವಿಕೃತ ಪೋಸ್ಟ್ ಮಾಡುವವರನ್ನು ಸಹಿಸುವುದಿಲ್ಲ. ದುಷ್ಕರ್ಮಿಗಳ ವಿಳಾಸ ಪತ್ತೆ ಹಚ್ಚಿ ತಕ್ಕ ಶಿಕ್ಷೆ ಆಗಬೇಕು ಅಂತ ದೂರವಾಣಿ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಡಿಜಿಪಿಗೆ ಸೂಚನೆ ನೀಡಿದ್ದಾರೆ.
ವಿಕೃತ ಪೋಸ್ಟ್ ಬಗ್ಗೆ ನಿನ್ನೆ ಬಸವರಾಜ ಬೊಮ್ಮಯಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಸಿಡಿಎಸ್ ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಡೀ ದೇಶವೇ ಬಿಪಿನ್ ರಾವತ್ ಸಾವಿಗೆ ಕಂಬನಿ ಮಿಡಿಯುತ್ತಿದೆ. ಅದರೆ ಕೆಲವರು ಅವರ ಸಾವನ್ನ ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ಗಳನ್ನ ಹಾಕಿರೋದು ತೀರಾ ಖಂಡನೀಯ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಅಂತ ಹೇಳಿದ್ದರು.
ಉಡುಪಿ ಮೂಲದ ಬರಹಗಾರನ ವಿರುದ್ಧ ಫೇಸ್ಬುಕ್ನಲ್ಲಿ ಆಕ್ರೋಶ
ಬಿಪಿನ್ ರಾವತ್ ನಿಧನದ ಬಗ್ಗೆ ವಿಕೃತಿ ಮೆರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಉಡುಪಿ ಮೂಲದ ಬರಹಗಾರರೊಬ್ಬರ ವಿರುದ್ಧ ಫೇಸ್ಬುಕ್ನಲ್ಲಿ ಆಕ್ರೋಶಗಳು ವ್ಯಕ್ತವಾಗಿವೆ. ಈ ಸಂಬಂಧ ಉಡುಪಿ ಪೊಲೀಸರಿಗೆ ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ಕೂಡಲೇ ಅವರನ್ನು ಬಂಧಿಸಬೇಕೆಂದು ಸಮಾಜಿಕ ಜಾಲತಾಣದಲ್ಲಿ ಆಗ್ರಹಗಳು ಕೇಳಿಬಂದಿವೆ.
Also Read:
ಬಿಪಿನ್ ರಾವತ್ ಮೃತಪಟ್ಟಿದ್ದಕ್ಕೆ ಸಂಭ್ರಮಾಚರಣೆ ವಿಚಾರ; ಮಂಗಳೂರಿನಲ್ಲಿ ಪ್ರಕರಣ ದಾಖಲು
Published On - 9:23 am, Mon, 13 December 21