AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajasthan Earthquake: ಬಿಕಾನೆರ್​​ನಲ್ಲಿ 4.3ರಷ್ಟು ತೀವ್ರತೆಯ ಭೂಕಂಪ; ಹೆದರಿ ಮನೆಯಿಂದ ಓಡಿದ ಜನರು

ರಾಜಸ್ಥಾನದ ಬಿಕಾನೆರ್​ನಲ್ಲಿ ಭೂಮಿ ನಡುಗುವುದಕ್ಕೂ ಮೊದಲು ಮ್ಯಾನ್ಮಾರ್-ಭಾರತ ಗಡಿ ಕೂಡ ನಡುಗಿದೆ ಎಂದು ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ ಹೇಳಿದೆ.

Rajasthan Earthquake: ಬಿಕಾನೆರ್​​ನಲ್ಲಿ 4.3ರಷ್ಟು ತೀವ್ರತೆಯ ಭೂಕಂಪ; ಹೆದರಿ ಮನೆಯಿಂದ ಓಡಿದ ಜನರು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Dec 13, 2021 | 8:38 AM

Share

ರಾಜಸ್ಥಾನದ ಬಿಕಾನೆರ್​​ನಲ್ಲಿ ಪ್ರಬಲ ಭೂಕಂಪವಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ. ಸದ್ಯ ಯಾವುದೇ ಆಸ್ತಿಪಾಸ್ತಿ ಹಾನಿಯಾಗಿಲ್ಲ. ಜೀವ ಹೋದ ವರದಿಯೂ ಆಗಿಲ್ಲ. ನಿನ್ನೆ ಸಂಜೆ 6.56ರ ಹೊತ್ತಿಗೆ ಭೂಮಿ ಕಂಪಿಸಿದೆ. ಹೀಗೆ ಭೂಮಿ ನಡುಗುತ್ತಿದ್ದಂತೆ ಸ್ಥಳೀಯ ಜನರು ಗಾಬರಿಯಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸಂಜೆ ಮನೆಯಲ್ಲಿ ಕುಳಿತಿದ್ದಾಗ ಒಮ್ಮೆಲೇ ಭೂಮಿ ಕಂಪನವಾಗಲು ಶುರುವಾಯಿತು. ಭಯದಿಂದ ಎಲ್ಲರೂ ಹೊರಗೆ ಓಡಿದೆವು. ಆದರೆ ಅದೃಷ್ಟಕ್ಕೆ ನಮ್ಮ ಮನೆ ಬೀಳಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.  ಇತ್ತೀಚೆಗಷ್ಟೇ ರಾಜಸ್ಥಾನದ ಜಾಲೋರ್​​ನಲ್ಲಿ ಭೂಕಂಪವಾಗಿತ್ತು. ಆಗಲೂ ಕೂಡ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಯಾಗಿರಲಿಲ್ಲ. 

ರಾಜಸ್ಥಾನದ ಬಿಕಾನೆರ್​ನಲ್ಲಿ ಭೂಮಿ ನಡುಗುವುದಕ್ಕೂ ಮೊದಲು ಮ್ಯಾನ್ಮಾರ್-ಭಾರತ ಗಡಿ ಕೂಡ ನಡುಗಿದೆ. ಮಿಝೋರಾಂನ ಥೆಂಜಾವ್ಲ್​, ಪಶ್ಚಿಮ ಬಂಗಾಳದ ಕೋಲ್ಕತ್ತಗಳಲ್ಲಿಯೂ ಭೂಕಂಪನದ ಅನುಭವ ಆಗಿದೆ. ಅದರಲ್ಲೂ ಮಿಝೋರಾಂನ ಥೆಂಜಾವ್ಲ್​​ನಲ್ಲಿ ಭೂಕಂಪದ ತೀವ್ರತೆ 6.1ರಷ್ಟಿತ್ತು ಎನ್ನಲಾಗಿದೆ. ಭಾರತ-ಮೈನ್ಮಾರ್​ ಗಡಿಯ ಭೂಕಂಪನದ ಕೇಂದ್ರ ಥೆಂಜಾವ್ಲ್​ ಆಗಿತ್ತು ಎಂದು ಭಾರತೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

ಇದನ್ನೂ ಓದಿ: Virat Kohli: ವಿದೇಶಿ ತಂಡಕ್ಕೆ ನಡುಕ ಹುಟ್ಟಿಸಿದೆ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿದ ಆ ಒಂದು ಹೇಳಿಕೆ

Published On - 8:38 am, Mon, 13 December 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ