ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ

  • TV9 Web Team
  • Published On - 7:58 AM, 30 Dec 2019
ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ

ಜಮ್ಮು-ಕಾಶ್ಮೀರದ ಶ್ರೀನಗರದ ಜನತೆ ಚಳಿಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಚಳಿಗೆ ಜಮ್ಮು-ಕಾಶ್ಮೀರದ ‘ದಾಲ್ ಲೇಕ್’ ಸಂಪೂರ್ಣ ಹೆಪ್ಪುಗಟ್ಟಿ ಹೋಗಿದೆ. ಇಡೀ ಕೆರೆ ಮಂಜು ಗಡ್ಡೆಯಂತೆ ಆಗಿದ್ದು, ಕಣಿವೆ ರಾಜ್ಯದಲ್ಲಿ ಸದ್ಯ ಎದುರಾಗಿರೋ ಪರಿಸ್ಥಿತಿಯನ್ನ ಬಿಂಬಿಸುತ್ತಿದೆ.

4 ಅಂತಸ್ತಿನ ಕಟ್ಟಡ ನೆಲಸಮ
4 ಅಂತಸ್ತಿನ ಕಟ್ಟಡವೊಂದನ್ನು ಇಂಧೋರ್​ ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ. ನಿಗದಿತ ಎತ್ತರಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಾರಣ ಇಂಧೋರ್ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇಂದೋರ್​ನ ಸಂತ ನಗರದಲ್ಲಿ ಈ ಕಟ್ಟಡವಿತ್ತು. ಪಾಲಿಕೆ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಡುಗುತ್ತಿದೆ ‘ಉತ್ತರ ಭಾರತ’..!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚಳಿ ದಾಖಲಾಗಿದ್ದು, ಮೈಕೊರೆಯುವ ಚಳಿಯಿಂದ ಜನ ತತ್ತರಿಸಿದ್ದಾರೆ. ನಿನ್ನೆ ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 3.4ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಬೀದಿ ನಾಯಿಗಳ ಕಳ್ಳಸಾಗಣೆ
ತ್ರಿಪುರ-ಮಿಜೋರಾಂ ಗಡಿಯಲ್ಲಿ ಬೀದಿ ನಾಯಿಗಳ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 12 ನಾಯಿಗಳನ್ನು ಮಿಜೋರಾಂಗೆ ಕಳ್ಳಸಾಗಣೆ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮಿಜೋರಾಂನಲ್ಲಿ ನಾಯಿ ಮಾಂಸಕ್ಕೆ ಭಾರಿ ಬೇಡಿಕೆಯಿದ್ದು, ಇದೇ ಕಾರಣಕ್ಕೆ ಕಳ್ಳಸಾಗಾಣೆ ಮಾಡಲು ಯತ್ನಿಸಲಾಗಿದೆ.