ಸವಾಲಿಗೆ ಸವಾಲು ಹಾಕುವ ಮಾರ್ಗವನ್ನು ನಮ್ಮ ಸರ್ಕಾರ ಆಯ್ದುಕೊಂಡಿದೆ: ಪ್ರಧಾನಿ ಮೋದಿ
ದೇಶದಲ್ಲಿ ಎಲ್ಲಾ ಉತ್ತಮ ಕೆಲಸಗಳು ನನ್ನ ಬರುವಿಕೆಗಾಗಿಯೇ ಕಾಯುತ್ತಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಶ್ರೀನಗರದಲ್ಲಿ ಚೆನಾಬ್ ರೈಲ್ವೆ ಸೇತುವೆ ಉದ್ಘಾಟಿಸಿ ಮಾತನಾಡಿದರು. ನಮ್ಮ ಅಧಿಕಾರಾವಧಿಯಲ್ಲಿ ಈ ಯೋಜನೆಗೆ ವೇಗ ಸಿಕ್ಕಿದ್ದು ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಅದೃಷ್ಟ. ಕಾಮಗಾರಿ ಸಮಯದಲ್ಲಿ ಹಲವು ತೊಂದರೆಗಳು, ಹವಾಮಾನ ಸಮಸ್ಯೆಗಳು, ಪರ್ವತಗಳಿಂದ ನಿರಂತರವಾಗಿ ಕಲ್ಲುಗಳು ಬೀಳುವುದು ಸವಾಲಿನದಾಗಿತ್ತು.

ಶ್ರೀನಗರ, ಜೂನ್ 06: ಸವಾಲಿಗೆ ಸವಾಲು ಹಾಕುವ ಮಾರ್ಗವನ್ನು ನಮ್ಮ ಸರ್ಕಾರ ಆಯ್ದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ದೇಶದಲ್ಲಿ ಎಲ್ಲಾ ಉತ್ತಮ ಕೆಲಸಗಳು ನನ್ನ ಬರುವಿಕೆಗಾಗಿಯೇ ಕಾಯುತ್ತಿದ್ದವು. ಶ್ರೀನಗರದಲ್ಲಿ ಚೆನಾಬ್ ರೈಲ್ವೆ ಸೇತುವೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಅಧಿಕಾರಾವಧಿಯಲ್ಲಿ ಈ ಯೋಜನೆಗೆ ವೇಗ ಸಿಕ್ಕಿದ್ದು ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಅದೃಷ್ಟ. ಕಾಮಗಾರಿ ಸಮಯದಲ್ಲಿ ಹಲವು ತೊಂದರೆಗಳು, ಹವಾಮಾನ ಸಮಸ್ಯೆಗಳು, ಪರ್ವತಗಳಿಂದ ನಿರಂತರವಾಗಿ ಕಲ್ಲುಗಳು ಬೀಳುವುದು ಸವಾಲಿನದಾಗಿತ್ತು. ಆದರೆ ನಮ್ಮ ಸರ್ಕಾರ ಸವಾಲಿಗೆ ಸವಾಲು ಹಾಕುವ ಮಾರ್ಗವನ್ನು ಆಯ್ದುಕೊಂಡಿದೆ ಎಂದಿದ್ದಾರೆ.
ಸ್ವಲ್ಪ ಸಮಯದ ಹಿಂದೆ, ಚೆನಾಬ್ ಸೇತುವೆ ಮತ್ತು ಅಂಜಿ ಸೇತುವೆಯನ್ನು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತು. ಇಂದು, ಜಮ್ಮು ಮತ್ತು ಕಾಶ್ಮೀರ ಎರಡು ಹೊಸ ವಂದೇ ಭಾರತ್ ರೈಲುಗಳನ್ನು ಸ್ವೀಕರಿಸಿದೆ. ಜಮ್ಮುವಿನಲ್ಲಿ ಹೊಸ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 46,000 ಕೋಟಿ ರೂ. ಮೌಲ್ಯದ ಈ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡುತ್ತವೆ ಎಂದು ಹೇಳಿದ್ದಾರೆ.
ತಾಯಿ ವೈಷ್ಣೋದೇವಿ ಆಶೀರ್ವಾದದಿಂದ, ಇಂದು ಕಾಶ್ಮೀರ ಕಣಿವೆಯು ಭಾರತದ ರೈಲು ಜಾಲದೊಂದಿಗೆ ಸಂಪರ್ಕ ಹೊಂದಿದೆ. ಇಂದಿನ ಕಾರ್ಯಕ್ರಮವು ಭಾರತದ ಏಕತೆ ಮತ್ತು ಭಾರತದ ಇಚ್ಛಾಶಕ್ತಿಯ ಬೃಹತ್ ಆಚರಣೆಯಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಕತ್ರಾ ಮತ್ತು ಶ್ರೀನಗರ ನಡುವೆ ಚಲಿಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದು ಕಾಶ್ಮೀರ ಕಣಿವೆ ಮತ್ತು ಜಮ್ಮು ಪ್ರದೇಶದ ನಡುವಿನ ಮೊದಲ ರೈಲು ಸೇವೆಯಾಗಿದೆ.
ಮತ್ತಷ್ಟು ಓದಿ: ಪಹಲ್ಗಾಮ್ ದಾಳಿ ಬಳಿಕ ಕಾಶ್ಮೀರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ, ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಬ್ರಿಡ್ಜ್ ಉದ್ಘಾಟನೆ
ಚೆನಾಬ್ ರೈಲು ಸೇತುವೆ ಮತ್ತು ಅಂಜಿ ಸೇತುವೆಯನ್ನು ಉದ್ಘಾಟಿಸಿದರು. ರಿಯಾಸಿ ಜಿಲ್ಲೆಯ ಕತ್ರಾದಲ್ಲಿ, ಪ್ರಧಾನಿ 46 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಹಲವಾರು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
#WATCH | J&K: Prime Minister Narendra Modi inaugurates Chenab bridge – the world’s highest railway arch bridge. Lt Governor Manoj Sinha, CM Omar Abdullah and Railway Minister Ashwini Vaishnaw also present.#KashmirOnTrack
(Video: DD) pic.twitter.com/Jv4d5tLOqW
— ANI (@ANI) June 6, 2025
ಸೇತುವೆ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಚೆನಾಬ್ ರೈಲು ಸೇತುವೆಯನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ಅವರು ಸೇತುವೆಗಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಭೇಟಿಯಾದರು. ಪ್ರಧಾನಿ ಮೋದಿ ಅವರ ಭೇಟಿಗಾಗಿ ಕಾಶ್ಮೀರದಲ್ಲಿ ಬಹು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ಮೋದಿ ಈ ಕೇಂದ್ರಾಡಳಿತ ಪ್ರದೇಶಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
#WATCH | J&K: Prime Minister Narendra Modi inspects Chenab Bridge. He will inaugurate the bridge shortly.
Chenab Rail Bridge, situated at a height of 359 meters above the river, is the world’s highest railway arch bridge. It is a 1,315-metre-long steel arch bridge engineered to… pic.twitter.com/IMf6tGOZH7
— ANI (@ANI) June 6, 2025
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಬಹುನಿರೀಕ್ಷಿತ ಕಾಶ್ಮೀರ ರೈಲು ಸಂಪರ್ಕವನ್ನು ಉದ್ಘಾಟಿಸಿದರು. ಇದರೊಂದಿಗೆ, 46,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕತ್ರಾದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಪ್ರಧಾನಿ ಭೇಟಿಗೂ ಮುನ್ನ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಭದ್ರತೆಯನ್ನು ಪರಿಶೀಲಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯವೂ ಆರಂಭ ಪ್ರಧಾನಿ ಮೋದಿ ಅವರು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಆರ್‌ಬಿಎಲ್) ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಯುಎಸ್‌ಬಿಆರ್‌ಎಲ್ ಯೋಜನೆಯು 272 ಕಿ.ಮೀ ಉದ್ದವಿದ್ದು, 36 ಸುರಂಗಗಳು (119 ಕಿ.ಮೀ ಉದ್ದ) ಮತ್ತು 943 ಸೇತುವೆಗಳನ್ನು ಒಳಗೊಂಡಿದೆ. ಇದನ್ನು ನಿರ್ಮಿಸಲು 43,780 ಕೋಟಿ ರೂ. ವೆಚ್ಚವಾಗಿದೆ.
ರಾಷ್ಟ್ರೀಯ ಹೆದ್ದಾರಿ -701 ರಲ್ಲಿ ರಫಿಯಾಬಾದ್ನಿಂದ ಕುಪ್ವಾರಾವರೆಗಿನ ರಸ್ತೆ ವಿಸ್ತರಣೆ ಯೋಜನೆ ಮತ್ತು NH -444 ರಲ್ಲಿ ಶೋಪಿಯಾನ್ ಬೈಪಾಸ್ ರಸ್ತೆ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ನಿರ್ಮಾಣಕ್ಕೆ 1,952 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಲಿದೆ.
ರಿಯಾಸಿ ಜಿಲ್ಲೆಯಲ್ಲಿ ಮೊದಲ ವೈದ್ಯಕೀಯ ಕಾಲೇಜು ಶ್ರೀನಗರದ ರಾಷ್ಟ್ರೀಯ ಹೆದ್ದಾರಿ-1 ರ ಸಂಗ್ರಾಮ್ ಜಂಕ್ಷನ್ ಮತ್ತು ರಾಷ್ಟ್ರೀಯ ಹೆದ್ದಾರಿ-44 ರ ಬೆಮಿನಾ ಜಂಕ್ಷನ್‌ನಲ್ಲಿ ಎರಡು ಫ್ಲೈಓವರ್ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದಲ್ಲದೆ, ಅವರು ಕತ್ರಾದಲ್ಲಿ 350 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಕಾಲೇಜಿಗೆ ಅಡಿಪಾಯವನ್ನು ಹಾಕಲಿದ್ದಾರೆ. ಈ ಸಂಸ್ಥೆ ರಿಯಾಸಿ ಜಿಲ್ಲೆಯ ಮೊದಲ ವೈದ್ಯಕೀಯ ಕಾಲೇಜು. ಇದರ ನಿರ್ಮಾಣವು ಈ ಪ್ರದೇಶದ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
ಪ್ರವಾಸಕ್ಕೂ ಮುನ್ನ ಶಂಕಿತರ ಮನೆಗಳ ಮೇಲೆ ದಾಳಿ ಪ್ರಧಾನಿ ಮೋದಿ ಕಣಿವೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೆಚ್ಚಿನ ಭದ್ರತಾ ಎಚ್ಚರಿಕೆ ನೀಡಲಾಗಿದೆ. ಪೊಲೀಸ್, ಅರೆಸೈನಿಕ ಪಡೆಗಳು, ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳಗಳ ಸುತ್ತಲೂ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ ಡ್ರೋನ್‌ಗಳು ಸೇರಿದಂತೆ ಹೊಸ ಉಪಕರಣಗಳನ್ನು ನಿಯೋಜಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ