ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ

ರಾಮನಾಥ್ ಕೋವಿಂದ್ ಭಾಷಣ ಬಹಿಷ್ಕಾರ ಮಾಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​.ಡಿ. ದೇವೇಗೌಡ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ
ಹೆಚ್.ಡಿ.ದೇವೇಗೌಡ
Edited By:

Updated on: Apr 06, 2022 | 8:34 PM

ಬೆಂಗಳೂರು: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಭಾಷಣ ಮಾಡಲು ಆರಂಭಿಸಿದ್ದಾರೆ. ಆದರೆ ಈ ಮಧ್ಯೆ, ಭುಗಿಲೆದ್ದಿರುವ ರೈತ ಹೋರಾಟಗಳನ್ನು ಬೆಂಬಲಿಸಲು, ರೈತರ ಬಗ್ಗೆ ಕೇಂದ್ರ ತಾಳಿರುವ ಕಠಿಣ ಧೋರಣೆ ವಿರೋಧಿಸಲು ವಿರೋಧ ಪಕ್ಷಗಳು ತೀರ್ಮಾನಿಸಿವೆ. ಕಾಂಗ್ರೆಸ್ ಸಹಿತ 16 ವಿರೋಧ ಪಕ್ಷಗಳು ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ನಿರ್ಧರಿಸಿವೆ.

ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ವಿಪಕ್ಷಗಳು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಕೂಡ ಇದೇ ನಿರ್ಧಾರಕ್ಕೆ ಸಹಮತ ಸೂಚಿಸಿದೆ. ರಾಮನಾಥ್ ಕೋವಿಂದ್ ಭಾಷಣ ಬಹಿಷ್ಕಾರ ಮಾಡುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಧಿವೇಶನಕ್ಕೆ ತೆರಳದೆ ತಾವು ಬೆಂಗಳೂರಿನಲ್ಲಿಯೇ ಉಳಿಯುವುದಾಗಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ, ಜೆಡಿಎಸ್​ ಪಕ್ಷ ಕೂಡ ರಾಷ್ಟ್ರಪತಿ ಭಾಷಣ ವೇಳೆ ಭಾಗಿಯಾಗದಿರಲು ನಿರ್ಧಾರ ಮಾಡಿದೆ. ರೈತರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದೆ.

ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​.ಡಿ. ದೇವೇಗೌಡ ಟ್ವೀಟ್

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ವಿರೋಧ ಪಕ್ಷಗಳ ನಿರ್ಧಾರ

Published On - 11:08 am, Fri, 29 January 21