ಐದು ತಿಂಗಳ ಹಿಂದೆ ಕೋಟಾದಿಂದ ಕಾಣೆಯಾಗಿದ್ದ ಜೆಇಇ ಆಕಾಂಕ್ಷಿ ಕೇರಳದಲ್ಲಿ ಪತ್ತೆ

|

Updated on: Mar 17, 2024 | 10:49 AM

ರಾಜಸ್ಥಾನದ ಕೋಟಾದಲ್ಲಿ 5 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿ ಕೇರಳದಲ್ಲಿ ಪತ್ತೆಯಾಗಿದ್ದಾರೆ. ಬಿಹಾರದ ಬಾಲಕ ಅಕ್ಟೋಬರ್‌ನಲ್ಲಿ ಹಾಸ್ಟೆಲ್​ನಿಂದ ಹೊರಬಂದ ಬಳಿಕ ನಾಪತ್ತೆಯಾಗಿದ್ದರು.

ಐದು ತಿಂಗಳ ಹಿಂದೆ ಕೋಟಾದಿಂದ ಕಾಣೆಯಾಗಿದ್ದ ಜೆಇಇ ಆಕಾಂಕ್ಷಿ ಕೇರಳದಲ್ಲಿ ಪತ್ತೆ
ಜೆಇಇ ವಿದ್ಯಾರ್ಥಿಗಳು-ಸಾಂದರ್ಭಿಕ ಚಿತ್ರ
Image Credit source: Shiksha
Follow us on

ಐದು ತಿಂಗಳ ಹಿಂದೆ ರಾಜಸ್ಥಾನದ ಕೋಟಾದಿಂದ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿ ಇದೀಗ ಕೇರಳದಲ್ಲಿ ಪತ್ತೆಯಾಗಿದ್ದಾರೆ.
ಬಿಹಾರದ ಬಾಲಕ ಅಕ್ಟೋಬರ್‌ನಲ್ಲಿ ಹಾಸ್ಟೆಲ್ ಕೊಠಡಿಯಿಂದ ಹೊರಬಂದ ನಂತರ ನಾಪತ್ತೆಯಾಗಿದ್ದರು. ತಿರುವನಂತಪುರಂನ ಶಿವಗಿರಿ ಪ್ರದೇಶದಲ್ಲಿ ಆತ ಪತ್ತೆಯಾಗಿದ್ದು,ಮ ಕೌನ್ಸೆಲಿಂಗ್ ಬಳಿಕ ಪೋಷಕರಿಗೆ ಒಪ್ಪಿಸಲಾಗಿದೆ.
ಬಿಹಾರದ ರಾಘೋಪುರ್-ಸುಪೌಲ್ ಮೂಲದ ಬಾಲಕ ಕೋಟಾದಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ ಮತ್ತು ವಿಜ್ಞಾನ ನಗರ ಪ್ರದೇಶದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ (ಕೋಟಾ ಸಿಟಿ) ಅಮೃತಾ ದುಹಾನ್ ತಿಳಿಸಿದ್ದಾರೆ.

ಮಗ ನಾಪತ್ತೆಯಾಗಿದ್ದಾನೆ ಎಂದು ವಿದ್ಯಾರ್ಥಿ ತಂದೆ ನವೆಂಬರ್​ 9 ರಂದು ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್​ 5ರಂದೇ ಹಾಸ್ಟೆಲ್​ನಿಂದ ಆತ ಕಾಣೆಯಾಗಿದ್ದ. ಬಾಲಕ ತನ್ನ ಮೊಬೈಲ್ ನಂಬರ್​, ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬದಲಾಯಿಸಿದ್ದ. ಮಾಹಿತಿ ಮೇರೆಗೆ ಕಾರ್ಯನಿರ್ವಹಿಸಿದ ಪೊಲೀಸ್ ತಂಡವು ಮಾರ್ಚ್ 8 ರಂದು ಕೇರಳ ತಲುಪಿತು ಮತ್ತು ವ್ಯಾಪಕ ಹುಡುಕಾಟದ ನಂತರ ಗುರುವಾರ ಬಾಲಕನನ್ನು ರಕ್ಷಿಸಿದೆ.

ಜೆಇಇಗೆ ತಯಾರಿ, 12 ನೇ ತರಗತಿಗೆ ಅರ್ಹತೆ ಮತ್ತು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಉದ್ಯೋಗ ಪಡೆಯುವ ಬದಲು, ಆನ್‌ಲೈನ್ ಟ್ರೇಡಿಂಗ್ ಮೂಲಕ ಏನಾದರೂ ಮಾಡಲು ಬಯಸಿದ್ದರು ಎಂದು ಹುಡುಗ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ರಾಜಸ್ಥಾನದ ಕೋಟಾದಲ್ಲಿ ಐಐಟಿ ಆಕಾಂಕ್ಷಿ ಆತ್ಮಹತ್ಯೆ, ಇದು ಈ ವರ್ಷ 4ನೇ ಪ್ರಕರಣ

ಬಾಲಕನನ್ನು ಶುಕ್ರವಾರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಆತನ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ದುಹಾನ್ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ