AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಕಳೆದುಕೊಂಡ ನೋವಿನಲ್ಲೇ ಮಗುವಿಗೆ ಜನ್ಮ ನೀಡಿದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ

Sidhu Moosewala: ಸಿಧು ಮೂಸೆವಾಲಾ ಎಂದೇ ಖ್ಯಾತರಾಗಿರುವ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅವರ ಪೋಷಕರು ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಸಿಧು ಸಾವಿನ ನೋವಿನಲ್ಲಿದ್ದ ಪೋಷಕರು ಮಗುವಿನ ಆಗಮನದಿಂದ ಕೊಂಚ ನೆಮ್ಮದಿ ಪಡೆದಿದ್ದಾರೆ.

ಮಗನ ಕಳೆದುಕೊಂಡ ನೋವಿನಲ್ಲೇ ಮಗುವಿಗೆ ಜನ್ಮ ನೀಡಿದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ
ಸಿಧು ಮೂಸೆವಾಲಾ
Follow us
ನಯನಾ ರಾಜೀವ್
|

Updated on:Mar 17, 2024 | 9:47 AM

ಸಾವಿನ ಮನೆಯಲ್ಲಿ ಮಗುವಿನ ನಗು ಕೇಳಲಿದೆ. ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಅವರ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮತ್ತೊಂದು ಜನ್ಮವೆತ್ತು ಬಂದಿದ್ದಾನೆ ಎಂದೇ ಪೋಷಕರು ನಂಬಿದ್ದಾರೆ. ಮಗುವಿನ ಜತೆಗಿರುವ ಚಿತ್ರವನ್ನು ಸಿಧು ಮೂಸೆವಾಲಾ ತಮದೆ ಬಲ್ಕೌರ್​ ಸಿಂಗ್ ಹಂಚಿಕೊಂಡಿದ್ದಾರೆ. ಶುಭದೀಪ್ (ಸಿಧು ಮೂಸೆವಾಲ)ನನ್ನು ಪ್ರೀತಿಸುವ ಕೋಟ್ಯಂತರ ಜನರ ಆಶೀರ್ವಾದದಿಂದ ದೇವರು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ತೋಳಿನಲ್ಲಿ ಹಾಕಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಭಗವಂತನ ದಯೆಯಿಂದ ತಾಯಿ ಹಾಗೂ ಮಗು ಆರೋಗ್ಯವಾಗಿದೆ ಮತ್ತು ಎಲ್ಲಾ ಹಿತೈಷಿಗಳ ಅಪಾರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ. ವರದಿ ಪ್ರಕಾರ ಸಿಧು ಅವರ ತಾಯಿಗೆ 58 ಮತ್ತು ತಂದೆಗೆ 60 ವರ್ಷ.

2022 ರಲ್ಲಿ ಮಾನ್ಸಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ವಿಫಲವಾದ ಮೂಸೆವಾಲಾ, ಅದೇ ವರ್ಷದ ಮೇ 29 ರಂದು ದುರಂತವಾಗಿ ಕೊಲೆಯಾದರು. ಮೇ 29, 2022 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಅವರ ಕಾರಿನಲ್ಲಿ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು.

ಮತ್ತಷ್ಟು ಓದಿ: Sidhu Moosewala: 2022ರಲ್ಲಿ ಹತ್ಯೆಯಾಗಿದ್ದ ಗಾಯಕ ಸಿಧು ಮೂಸೆವಾಲಾ ತಾಯಿ ಈಗ ಗರ್ಭಿಣಿ

ಮೂಸೆವಾಲನ ಕೊಲೆಯಾದ ನಂತರ ಆತನ ಪೋಷಕರು ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಚಳವಳಿ ನಡೆಸಿದರು. ಕೊನೆಯ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಜಸ್ಟೀಸ್ ಫಾರ್ ಸಿಧು ಮೂಸೆವಾಲಾ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲಾಯಿತು.

ಮೃತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ ಅಲ್ಲ, ವದಂತಿಯಷ್ಟೇ ಎಂದು ಹೇಳಲಾಗಿತ್ತು. 2022ರಲ್ಲಿ ಹತ್ಯೆಯಾಗಿದ್ದ ಗಾಯಕ ಸಿಧು ಮೂಸೆವಾಲಾ(Sidhu Moosewala) ತಾಯಿ ಗರ್ಭಿಣಿಯಲ್ಲ ಅದೊಂದು ವದಂತಿಯಷ್ಟೇ ಎಂಬುದು ತಿಳಿದುಬಂದಿದೆ. ಈ ಕುರಿತು ಅವರ ತಂದೆಯೇ ಸ್ಪಷ್ಟನೆ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ ಪೋಷಕರು ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲವೇ ದಿನಗಳಲ್ಲಿ, ದಿವಂಗತ ಗಾಯಕನ ತಂದೆ ಇದೀಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಬರೆದಿದ್ದಾರೆ.

ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ನಮ್ಮ ಕುಟುಂಬದ ಬಗ್ಗೆ ಹಲವು ವದಂತಿಗಳನ್ನು ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದಂತೆ, ದಿವಂಗತ ಪಂಜಾಬಿ ಗಾಯಕ, ಸಿದ್ದು ಮೂಸೆವಾಲಾ ಎಂದು ಜನಪ್ರಿಯವಾಗಿರುವ ಶುಭದೀಪ್ ಸಿಂಗ್ ಸಿಧು ಅವರ ಪೋಷಕರು ಹೊಸ ಸದಸ್ಯರ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಅವರ ಕುಟುಂಬ ನಿರೀಕ್ಷಿಸುತ್ತಿದೆ ಎಂದು ಹೇಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:46 am, Sun, 17 March 24

ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್