ಚಲಿಸುತ್ತಿರುವ ಗೂಡ್ಸ್ ರೈಲಿನಲ್ಲಿ ಮಕ್ಕಳು ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಲಿಸುತ್ತಿರುವ ಗೂಡ್ಸ್ ರೈಲಿನ ಕೆಳಗೆ ಮಕ್ಕಳು ಆಟವಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಇದು ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ರೈಲಿನ ಕಬ್ಬಿಣದ ಪ್ಲೇಟ್‌ಗಳ ನಡುವಿನ ಜಾಗದಲ್ಲಿ ನಾಲ್ವರು ಮಕ್ಕಳು ಕುಳಿತಿರುವುದು ಕಂಡುಬಂದಿದೆ. ಮಕ್ಕಳು ಟೊಳ್ಳಾದ ಜಾಗದಲ್ಲಿ ಹೊಕ್ಕು ಆಟವಾಡುತ್ತಿದ್ದರು.
ರೈಲು ನಿಂತಿದ್ದಾಗ ಸರಕುಗಳನ್ನು ಪರಿಶೀಲಿಸುತ್ತಿದ್ದಾಗ ಕೂಲಿ ಕಾರ್ಮಿಕರೊಬ್ಬರು ಮಕ್ಕಳನ್ನು ಅಧಿಕಾರಿಗಳು ಕಂಡಿದ್ದಾರೆ. ಅವರು ರೈಲ್ವೆ ಮತ್ತು ಗಣಿಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮತ್ತು ರೈಲಿನ ಕೆಳಗೆ ಮಕ್ಕಳು ಇರುವ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದರು.
ಮತ್ತಷ್ಟು ಓದಿ: Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು
ಇದಲ್ಲದೆ, ಜಿಲ್ಲೆಯ ಸರಂದಾ ಪ್ರದೇಶದ ಮಕ್ಕಳು ಮತ್ತು ನಿವಾಸಿಗಳು ಇನ್ನು ಮುಂದೆ ಇಂತಹ ಯಾವುದೇ ಅಪಾಯಕಾರಿ ಕ್ರಮಗಳಿಗೆ ಪ್ರಯತ್ನಿಸದಂತೆ ಎಚ್ಚರಿಕೆ ನೀಡಲಾಯಿತು ಮತ್ತು ಸ್ಥಳದಿಂದ ಹೊರಹೋಗುವಂತೆ ತಿಳಿಸಲಾಯಿತು.
ಈ ಮೊದಲು ರೈಲಿನಿಂದ ಯುವಕರು ಅಪಾಯಕಾರಿ ಸಾಹಸಗಳನ್ನು ಮಾಡಿರುವ ಹಲುವ ವಿಡಿಯೋಗಳು ವೈರಲ್ ಆಗಿವೆ, ಹಾಗೆಯೇ ಹಲವು ಮಂದಿ ಇಂತಹ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡಿರುವ ನಿದರ್ಶನಗಳೂ ಇವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ