ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ (Ranchi) ವಾಹನ ತಪಾಸಣೆಯ ವೇಳೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಅವರ ಮೇಲೆ ಪಿಕಪ್ ವ್ಯಾನ್ ಹತ್ತಿಸಿ ಕೊಲೆ ಮಾಡಲಾಗಿದೆ. ಈ ಘಟನೆ ಬುಧವಾರ ನಸುಕಿನ ಜಾವ ತುಪುಡಾನಾ ಪ್ರದೇಶದಲ್ಲಿ ನಡೆದಿದೆ. ರಾಂಚಿಯಲ್ಲಿ ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ನಡೆದಿದ್ದು, ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ವಾಹನ ತಪಾಸಣೆಗೆ ತೆರಳಿದ್ದರು. ಅವರ ಮೇಲೆ ವ್ಯಾನ್ ಹತ್ತಿಸಿ ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಂಚಿ ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.
ಈ ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಎಸ್ಪಿ ಶ್ರೇಣಿಯ ಹರಿಯಾಣ ಪೊಲೀಸ್ ಅಧಿಕಾರಿ ಸುರೇಂದ್ರ ಸಿಂಗ್ ಅವರನ್ನು ನುಹ್‌ನಲ್ಲಿ ಗಣಿಗಾರಿಕೆ ಮಾಫಿಯಾದವರು ಹತ್ಯೆ ಮಾಡಿದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಅವರನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Mysore News: ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಸ್ನೇಹಿತನ ಕೊಲೆ ಪ್ರಕರಣ: ಮೂವರು ಆರೋಪಿಗಳು ಅಂದರ್
“ಸಂಧ್ಯಾ ಟೋಪ್ನೋ ಎಂಬ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಇಂದು ಮುಂಜಾನೆ ವಾಹನ ತಪಾಸಣೆಯ ವೇಳೆ ಹತ್ಯೆಗೀಡಾಗಿದ್ದಾರೆ. ಅವರನ್ನು ತುಪುಡಾನ ಓಪಿಯ ಉಸ್ತುವಾರಿಯಾಗಿ ನಿಯೋಜಿಸಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ರಾಂಚಿ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಡಿಎಸ್‌ಪಿ ಸುರೇಂದ್ರ ಸಿಂಗ್ ಅವರನ್ನು ಮಂಗಳವಾರ ನುಹ್‌ನ ಪಚ್‌ಗಾಂವ್ ಬಳಿ ಗಣಿ ಮಾಫಿಯಾದವರು ಹತ್ಯೆ ಮಾಡಿದ್ದರು. ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿದ್ದ ಸುರೇಂದ್ರ ಸಿಂಗ್ ಟ್ರಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ತೆರೆದ ಕಸದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿತ್ತು.