AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹೆಂಡ ಕುಡಿದ್ರೆ ಓಕೆ ನೀನ್ಯಾಕೆ ಕುಡಿಯೋದು ಎಂದು ಪತ್ನಿಯನ್ನು ಹೊಡೆದು ಕೊಂದ ಪತಿ

ಪತಿಯೊಬ್ಬ ಕುಡಿದ ನಶೆಯಲ್ಲಿ ಪತ್ನಿಗೆ ಹೊಡೆದು ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್​​ನಲ್ಲಿ ನಡೆದಿದೆ. ಪತ್ನಿ ಮನೆಗೆ ಕುಡಿದುಬಂದಿದ್ದಕ್ಕೆ ಕೋಪಗೊಂಡು ಆಕೆಗೆ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ರಾಮಗಢ ಪೊಲೀಸ್ ಠಾಣೆ ಪ್ರದೇಶದ ದಾತಮ್ ಬಾಡಿ ಝರಿಯಾದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪತಿ ಉಪೇಂದ್ರ ಪರ್ಹಿಯಾ (25) ಅವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಿಲ್ಪಿ ದೇವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾನು ಹೆಂಡ ಕುಡಿದ್ರೆ ಓಕೆ ನೀನ್ಯಾಕೆ ಕುಡಿಯೋದು ಎಂದು ಪತ್ನಿಯನ್ನು ಹೊಡೆದು ಕೊಂದ ಪತಿ
ಕ್ರೈಂ
ನಯನಾ ರಾಜೀವ್
|

Updated on:Nov 26, 2025 | 8:07 AM

Share

ಜಾರ್ಖಂಡ್, ನವೆಂಬರ್ 26: ಪತಿ ಪತ್ನಿ ಇಬ್ಬರೂ ಮದ್ಯಪಾನ ಮಾಡಿ ಮನೆಗೆ ಬಂದಿದ್ದರು. ಪತ್ನಿ ಕುಡಿದಿದ್ದಾಳೆ ಎಂಬುದೇ ಪತಿಗೆ ಸಮಸ್ಯೆ ತಂದಿತ್ತು. ತಾನು ಕುಡಿದಿದ್ದೇನೆ ಅದು ಕೂಡ ತಪ್ಪು ಎನ್ನುವ ಯಾವ ಪಶ್ಚಾತಾಪವೂ ಆತನಿಗಿರಲಿಲ್ಲ. ಪತ್ನಿ(Wife) ಮನೆಗೆ ಕುಡಿದುಬಂದಿದ್ದಕ್ಕೆ ಕೋಪಗೊಂಡು ಆಕೆಗೆ ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ರಾಮಗಢ ಪೊಲೀಸ್ ಠಾಣೆ ಪ್ರದೇಶದ ದಾತಮ್ ಬಾಡಿ ಝರಿಯಾದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪತಿ ಉಪೇಂದ್ರ ಪರ್ಹಿಯಾ (25) ಅವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿಲ್ಪಿ ದೇವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಿಲ್ಪಿ ಕೂಡ ಕುಡಿದು ಮನೆಗೆ ಬಂದಾಗ ಉಪೇಂದ್ರ ಮನೆಯಲ್ಲಿ ಕುಡಿದ ಮತ್ತಿನಲ್ಲಿದ್ದ. ಆಕೆಯನ್ನು ನೋಡಿ ಕೋಪಗೊಂಡ ಉಪೇಂದ್ರ, ಕುಡಿದು ಮನೆಗೆ ಬಂದಿದ್ದರ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದು, ಇದು ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ, ಉಪೇಂದ್ರ ಶಿಲ್ಪಿಯನ್ನು ಹೊಡೆಯಲು ಪ್ರಾರಂಭಿಸಿದನು, ಮತ್ತು ಇದ್ದಕ್ಕಿದ್ದಂತೆ ಅವಳನ್ನು ಎತ್ತಿ ಬಲವಾಗಿ ನೆಲಕ್ಕೆ ಹೊಡೆದನು ಎಂದು ಅವರು ಹೇಳಿದರು. ಮೂರು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಒಂದು ಮಗುವಿದೆ.

ಮತ್ತಷ್ಟು ಓದಿ: ಯಾದಗಿರಿಯಲ್ಲಿ ಡಬಲ್​ ಮರ್ಡರ್​: 2 ಪ್ರತ್ಯೇಕ ಗ್ಯಾಂಗ್​ನಿಂದ ದಲಿತ ಮುಖಂಡ, ಸಹಚರನ ಕೊಲೆ

ಮತ್ತೊಂದು ಘಟನೆ ಕುಡಿದ ಮತ್ತಿನಲ್ಲಿ ಜೊತೆಗಿದ್ದವನ ಕೊಲೆ: ಆರೋಪಿ ಅರೆಸ್ಟ್​ ಕುಡಿದ ಮತ್ತಿನಲ್ಲಿ ಜೊತೆಗಿದ್ದವನನ್ನೇ ವ್ಯಕ್ತಿಯೋರ್ವ ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ರಾಯಚೂರು ಮೂಲದ ಮಹದೇವ(65) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಯಾಗಿರೋ ತಮಿಳುನಾಡಿನ ತಾಂಜಾವೂರು ಮೂಲದ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿ ಮರ್ಡರ್​ ನಡೆದಿದೆ ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿದ್ದ ಆರೋಪಿ ರಾಜು, ಜಗಳದ ವೇಳೆ ಮಹದೇವ ಹೊಟ್ಟೆಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡ ಮಹದೇವ ಪ್ರಾಣ ಬಿಟ್ಟಿದ್ದು, ಸ್ಥಳಕ್ಕೆ ವೈಟ್​ ಫೀಲ್ಡ್​ ಡಿಸಿಪಿ ಪರಶುರಾಮ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮಾರತ್​​ಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಮತ್ತು ಕೊಲೆಯಾದ ವ್ಯಕ್ತಿ ಇಬ್ಬರೂ ಮಾರತಹಳ್ಳಿ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:07 am, Wed, 26 November 25