Champai Soren: ಹೇಮಂತ್ ಸೊರೆನ್ ರಾಜೀನಾಮೆ; ಚಂಪೈ ಸೊರೆನ್ ಜಾರ್ಖಂಡ್ ನೂತನ ಸಿಎಂ

|

Updated on: Jan 31, 2024 | 9:07 PM

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ರಾಂಚಿಯಲ್ಲಿ ವಿಚಾರಣೆ ನಡೆಸುತ್ತಿದೆ. ಈ ನಡುವೆಯೇ ಹೇಮಂತ್ ಸೊರೆನ್ ರಾಜೀನಾಮೆ ನೀಡಿದ್ದು, ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಚಂಪೈ ಸೊರೆನ್ ಅವರನ್ನು ಮುಂದಿನ ಸಿಎಂ ಆಗಿ ಮಾಡಿದೆ.

Champai Soren: ಹೇಮಂತ್ ಸೊರೆನ್ ರಾಜೀನಾಮೆ; ಚಂಪೈ ಸೊರೆನ್ ಜಾರ್ಖಂಡ್ ನೂತನ ಸಿಎಂ
ಚಂಪೈ ಸೊರೆನ್
Follow us on

ರಾಂಚಿ ಜನವರಿ 31: ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಬುಧವಾರ ಚಂಪೈ ಸೊರೆನ್ (Champai Soren ) ಅವರನ್ನು ಜಾರ್ಖಂಡ್​​ನ (Jharkhand )ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜಾರ್ಖಂಡ್‌ನ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರನ್ನು ಇಡಿ ಬಂಧಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಹೇಮಂತ್ ಸೊರೆನ್ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್‌  ಇದನ್ನು ಅಂಗೀಕರಿಸಿದ್ದಾರೆ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ರಾಂಚಿಯಲ್ಲಿ ವಿಚಾರಣೆ ನಡೆಸುತ್ತಿದೆ.

ಸಿಎಂ ಇಡಿ ಕಸ್ಟಡಿಯಲ್ಲಿದ್ದಾರೆ. ರಾಜೀನಾಮೆ ಸಲ್ಲಿಸಲು ಇಡಿ ತಂಡದೊಂದಿಗೆ ಸಿಎಂ ರಾಜ್ಯಪಾಲರ ಬಳಿಗೆ ತೆರಳಿದ್ದಾರೆ. ಚಂಪೈ ಸೊರೆನ್ ಹೊಸ ಮುಖ್ಯಮಂತ್ರಿಯಾಗುತ್ತಾರೆ. ನಮ್ಮ ಬಳಿ ಸಂಖ್ಯಾಬಲ ಇದೆ ಎಂದು ಜೆಎಂಎಂ ಸಂಸದ ಮಹುವಾ ಮಾಜಿ ಹೇಳಿದ್ದಾರೆ.ಅದೇ ವೇಳೆ ನಾವು ನಮ್ಮ ನಾಯಕನನ್ನು ಆಯ್ಕೆ ಮಾಡಿದ್ದೇವೆ.ನಮ್ಮ ಮುಖ್ಯಮಂತ್ರಿ ಚಂಪೈ ಸೊರೆನ್ ಆಗಿರುತ್ತಾರೆ ಎಂದು ಜಾರ್ಖಂಡ್ ಸಚಿವ ಮತ್ತು ಜೆಎಂಎಂ ನಾಯಕ ಮಿಥಿಲೇಶ್ ಠಾಕೂರ್ ಹೇಳಿದ್ದಾರೆ.

ಸೋಮವಾರ ಇಡಿ ಅಧಿಕಾರಿಗಳು ದೆಹಲಿಯಲ್ಲಿರುವ ಸೊರೆನ್ ಅವರ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಕೇಂದ್ರ ಏಜೆನ್ಸಿ ಎರಡು ಕಾರುಗಳು ಮತ್ತು ₹ 36 ಲಕ್ಷವನ್ನು ವಶಪಡಿಸಿಕೊಂಡಿದೆ ಆದರೆ ಜೆಎಂಎಂ ನಾಯಕ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಜಾರ್ಖಂಡ್ ಸಿಎಂ ಪರಾರಿಯಾಗಿದ್ದಾರೆ. ಸೊರೆನ್ ಅವರ ಪತ್ನಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪವಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Hemant Soren: ದೆಹಲಿಗೆ ಬಂದಿದ್ದ ಜಾರ್ಖಂಡ್​ ಸಿಎಂ ಹೇಮಂತ್ ಸೊರೆನ್ ನಾಪತ್ತೆ, ಬಿಎಂಡಬ್ಲ್ಯೂ ಕಾರು ವಶಪಡಿಸಿಕೊಂಡ ಇಡಿ

ಬುಧವಾರದ ಬೆಳವಣಿಗೆಯಲ್ಲಿ ಹೇಮಂತ್ ಸೊರೆನ್ ಅವರ ರಾಂಚಿ ನಿವಾಸದಲ್ಲಿ ಇಡಿ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದರು. ಸೊರೆನ್ ಶೀಘ್ರದಲ್ಲೇ ಬಂಧನ ಸಾಧ್ಯತೆ ಎಂಬ ವರದಿಗಳ ನಡುವೆಯೇ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಬರತೊಡಗಿತು. ಇದಾದ ನಂತರ ಹೇಮಂತ್ ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜೆಎಂಎಂ ಚಂಪೈ ಸೊರೆನ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಹೇಮಂತ್ ಸೊರೆನ್ ಇಡಿ ವಶದಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 8:54 pm, Wed, 31 January 24