ದೆಹಲಿ : ಕಾಂಗ್ರೆಸ್ ಪಂಜಾಬ್ ಘಟಕದ ಮುಖ್ಯಸ್ಥರಾಗಿ ನೇಮಕವಾದ ಒಂದು ದಿನದ ನಂತರ, ನವಜೋತ್ ಸಿಂಗ್ ಸಿಧು ಜನರ ಕೈಗೆ ಅಧಿಕಾರವನ್ನು ಮರಳಿ ತರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ನ ‘ಜಿತ್ತೇಗಾ ಪಂಜಾಬ್’ (ಪಂಜಾಬ್ ಗೆಲ್ಲಲಿದೆ) ಧ್ಯೇಯವನ್ನು ಪೂರೈಸುವತ್ತ ಗಮನ ಹರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇಂದು ಅದೇ ಕನಸಿಗಾಗಿ ಮತ್ತು ಪಂಜಾಬ್ ಕಾಂಗ್ರೆಸ್ ನ ಅಜೇಯ ಕೋಟೆಯನ್ನು ಬಲಪಡಿಸಲು ಮತ್ತಷ್ಟು ಕೆಲಸ ಮಾಡಲಿದ್ದೇನೆ. ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಿ, ರಾಹುಲ್ ಗಾಂಧಿ ಜಿ ಮತ್ತು ಶ್ರೀಮತಿ ಪ್ರಿಯಾಂಕಾ ಜಿ ಅವರಿಗೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಈ ಮಹತ್ವದ ಜವಾಬ್ದಾರಿಯನ್ನು ನನಗೆ ನೀಡಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.
Today, to work further for the same dream & strengthen the invincible fort of @INCIndia, Punjab. I am grateful to Hon’ble Congress President Sonia Gandhi Ji, Shri @RahulGandhi Ji & Smt @priyankagandhi Ji for bestowing their faith in me & giving me this pivotal responsibility ??
— Navjot Singh Sidhu (@sherryontopp) July 19, 2021
ಪಂಜಾಬ್ ಮಾಡೆಲ್ ಮತ್ತು ಹೈಕಮಾಂಡ್ ನ 18 ಪಾಯಿಂಟ್ ಅಜೆಂಡಾ ಮೂಲಕ ಜನರ ಶಕ್ತಿಯನ್ನು ಜನರಿಗೆ ಮರಳಿ ನೀಡಲು ವಿನಮ್ರ ಕಾಂಗ್ರೆಸ್ ಕಾರ್ಯಕರ್ತರಾಗಿ ಜಿತ್ತೇಗಾ ಪಂಜಾಬ್ ಧ್ಯೇಯವನ್ನು ಪೂರೈಸಲು ಪಂಜಾಬ್ ನಲ್ಲಿನ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಕೆಲಸ ಮಾಡುತ್ತೇನೆ. ನನ್ನ ಪಯಣ ಈಗಷ್ಟೇ ಪ್ರಾರಂಭವಾಯಿತು ಎಂದು ಪಂಜಾಬ್ ಕಾಂಗ್ರೆಸ್ನ ನೂತನ ಅಧ್ಯಕ್ಷ ಸಿಧು ಟ್ಟೀಟ್ನಲ್ಲಿ ಹೇಳಿದ್ದಾರೆ.
To share prosperity, privilege & freedom not just among a few but among all, My father a Congress worker left a royal household & joined freedom struggle, was sentenced to death for his patriotic work reprieved by King’s Amnesty became DCC President, MLA, MLC & Advocate General. pic.twitter.com/fTv0eNlNyt
— Navjot Singh Sidhu (@sherryontopp) July 19, 2021
ಚುನಾವಣೆಗೆ ಸಜ್ಜಾಗಿರುವ ಪಂಜಾಬ್ನಲ್ಲಿ ಪ್ರಮುಖ ಸ್ಥಾನಕ್ಕೆ ಏರಿದ ಸ್ವಲ್ಪ ಸಮಯದ ನಂತರ, ಸಿಧು ಪಟಿಯಾಲಾದ ಗುರುದ್ವಾರ ಶ್ರೀ ದುಖ್ನಿವರನ್ ಸಾಹಿಬ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ವಾರಗಳ ಕಾಲ ನಡೆದ ಜಟಾಪಟಿ ನಂತ ಸಿಧು ಅವರನ್ನು ಭಾನುವಾರ ಸಂಜೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಘೋಷಿಸಿದರು.
ಗುರುದ್ವಾರದಲ್ಲಿ ತಮ್ಮ ಬೆಂಬಲಿಗರು ಮತ್ತು ಕೆಲವು ಪಕ್ಷದ ಸದಸ್ಯರೊಂದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ನಂತರ ಪಟಿಯಾಲದಲ್ಲಿರುವ ತಮ್ಮ ನಿವಾಸವನ್ನು ತಲುಪಿದರು.
2022 ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸಿಧು ಅವರ ಮೇಲೆ ಭರವಸೆಯಿಟ್ಟಿದೆ. ಪಂಜಾಬ್ ಘಟಕವನ್ನು ಸಿಧುಗೆ ಹಸ್ತಾಂತರಿಸುವ ಕಾಂಗ್ರೆಸ್ ನಡೆಯನ್ನು ಪಕ್ಷದ ಸದಸ್ಯರು ಸ್ವಾಗತಿಸಿದ್ದಾರೆ ಮತ್ತು ಇದು ಚಿಂತನಶೀಲ ನಡೆ ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಯಾರೂ ಅಸಮಾಧಾನ ಹೊಂದಿಲ್ಲ ಮತ್ತು ಎಲ್ಲವೂ ಸರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಹೈಕಮಾಂಡ್ ಚಿಂತನಶೀಲ ನಿರ್ಧಾರವನ್ನು ತೆಗೆದುಕೊಂಡಿರಬೇಕು. ಅವರು ಚಿಕ್ಕವರು ಮತ್ತು ಸಕ್ರಿಯ ಸಂಸದರಾಗಿದ್ದರು. ಅವರು ಕೆಲಸ ಮಾಡುವ ಉತ್ಸಾಹವನ್ನು ಹೊಂದಿದ್ದಾರೆ, ಆದ್ದರಿಂದ ನಾವು ಅದನ್ನು ಸ್ವಾಗತಿಸುತ್ತೇವೆ “ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಪಂಜಾಬ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಮೂವರು ಸದಸ್ಯರಿಗೆ ಜವಾಬ್ದಾರಿ ನೀಡಿದ್ದು, ಆ ತಂಡದಲ್ಲಿ ಒಬ್ಬರಾಗಿದ್ದಾರೆ ಖರ್ಗೆ.
ಕಾಂಗ್ರೆಸ್ ಹೈಕಮಾಂಡ್, ಅಮರಿಂದರ್ ಸಿಂಗ್ ಮತ್ತು ಅಮೃತಸರ ಶಾಸಕರ ನಡುವಿನ ಮಾತುಕತೆಗಳ ನಂತರ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ ತಿಂಗಳ ಆರಂಭದಲ್ಲಿ, ಸಿಧು ದೆಹಲಿಗೆ ಬಂದು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಪಕ್ಷದ ಮುಖಂಡ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಟೀಕಿಸುವ ಸಿಧು, ಪಂಜಾಬ್ ನಲ್ಲಿ ಕಾಂಗ್ರೆಸ್ ಪ್ರತಿಸ್ಪರ್ಧಿ ಶಿರೋಮಣಿ ಅಕಾಲಿ ದಳದ ಬಾದಲ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಬಿರುಕು ಬಗೆಹರಿಸಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮೂರು ಸದಸ್ಯರ ಸಮಿತಿಯನ್ನು ರಚಿಸಿದರು. ಜೂನ್ 10 ರಂದು ತನ್ನ ವರದಿಯಲ್ಲಿ, ಸಮಿತಿಯು ರಾಜ್ಯ ಘಟಕದಲ್ಲಿ ಸೂಕ್ತ ಸ್ಥಾನ ಕಲ್ಪಿಸುವಂತೆ ಸೂಚಿಸಿತು.
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ; ಅಮರೀಂದರ್ ಸಿಂಗ್ಗೆ ಭಾರೀ ಹಿನ್ನಡೆ
(Jittega Punjab Navjot Singh Sidhu vowed to bring power back in the hands of people)