ಜಮ್ಮು-ಕಾಶ್ಮೀರ ಡಿಡಿಸಿ ಕೊನೇ ಹಂತದ ಮತದಾನ ಮುಕ್ತಾಯ; ಡಿ.22ಕ್ಕೆ ಫಲಿತಾಂಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 4:26 PM

ಡಿಡಿಸಿಗೆ ನಡೆದ ಎಂಟೂ ಹಂತಗಳ ಚುನಾವಣೆಯಲ್ಲಿ ಒಟ್ಟಾರೆ ಶೇ 51.76 ಮತದಾನವಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಗರಿಷ್ಠ ಶೇ 74.62 ಮತ್ತು ಕಾಶ್ಮೀರ ವಿಭಾಗ ಪುಲ್ವಾಮಾ ಜಿಲ್ಲೆಯಲ್ಲಿ ಕನಿಷ್ಠ ಶೇ 6.70 ಮತದಾನ ದಾಖಲಾಗಿದೆ.

ಜಮ್ಮು-ಕಾಶ್ಮೀರ ಡಿಡಿಸಿ ಕೊನೇ ಹಂತದ ಮತದಾನ ಮುಕ್ತಾಯ; ಡಿ.22ಕ್ಕೆ ಫಲಿತಾಂಶ
ಜಮ್ಮು ಮತ್ತು ಕಾಶ್ಮೀರ ಮತದಾನ
Follow us on

ಶ್ರೀನಗರ: ಜಮ್ಮು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಮಂಡಳಿ (DDC) ಚುನಾವಣೆಯ 8ನೇ ಹಂತದ (ಕೊನೇ ಹಂತ) ಮತದಾನ ಇಂದು 28 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು ಶೇ.50.98ರಷ್ಟು ಮತದಾನವಾಗಿದೆ. ಯಾವುದೇ ದೊಡ್ಡ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಟ್ಟು 280 ಸ್ಥಾನಗಳಿಗೆ ಎಂಟು ಹಂತದಲ್ಲಿ ಮತದಾನ ನಡೆದಿದೆ. ಇಂದಿನ ಕೊನೇ ಹಂತದಲ್ಲಿ ಜಮ್ಮುವಿನಲ್ಲಿ ಶೇ.72.71 ಮತ್ತು ಕಾಶ್ಮೀರದಲ್ಲಿ ಶೇ. 29.91ರಷ್ಟು ಮತದಾನ ದಾಖಲಾಗಿದೆ. ಡಿಸೆಂಬರ್ 22ರಂದು ಫಲಿತಾಂಶ ಹೊರಬೀಳಲಿದೆ ಎಂದು  ರಾಜ್ಯ ಚುನಾವಣಾ ಆಯುಕ್ತ ಕೆ.ಕೆ ಶರ್ಮಾ ಹೇಳಿದ್ದಾರೆ.

ಎಲ್ಲ ಎಂಟೂ ಹಂತಗಳಲ್ಲಿ ಒಟ್ಟಾರೆ ಶೇ. 51.76 ಮತದಾನವಾಗಿದ್ದು, ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಗರಿಷ್ಠ ಶೇ 74.62 ಮತ್ತು ಕಾಶ್ಮೀರ ವಿಭಾಗ ಪುಲ್ವಾಮಾ ಜಿಲ್ಲೆಯಲ್ಲಿ ಕನಿಷ್ಠ ಶೇ 6.70 ಮತದಾನ ದಾಖಲಾಗಿದೆ. ರಾಜಧಾನಿ ಶ್ರೀನಗರದಲ್ಲಿ ಶೇ 33.76ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಡಿಡಿಸಿಯ ಸುದೀರ್ಘ ಚುನಾವಣಾ ಅವಧಿಯಲ್ಲಿ ಒಂದೆರಡು ಕಡೆ ಭದ್ರತಾಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆದಿದೆ. ದಕ್ಷಿಣ ಕಾಶ್ಮೀರದ ಅಪ್ನಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆದಿತ್ತು ಹಾಗೂ ಶ್ರೀನಗರದಲ್ಲಿ ಮಾಜಿ ಪಿಡಿಪಿ ಮುಖಂಡನ ವೈಯಕ್ತಿಕ ಭದ್ರತಾ ಅಧಿಕಾರಿಯೋರ್ವರ ಹತ್ಯೆಯೂ ನಡೆದಿದೆ. ಇಷ್ಟನ್ನು ಹೊರತು ಪಡಿಸಿದರೆ ಮತ್ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.

370ನೇ ವಿಧಿ ರದ್ದು ನಂತರ ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣೆ ಇಂದಿನಿಂದ ಆರಂಭ