ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಮಾನತು; ಪ್ರತಿಭಟನೆಯಲ್ಲಿ ನಿರತ ಪಂಜಾಬ್ ನಾಗರಿಕ ಸೇವಾ ಅಧಿಕಾರಿಗಳಿಗೆ ಭಗವಂತ್ ಮಾನ್ ಖಡಕ್ ಎಚ್ಚರಿಕೆ

‘ಕೆಲವು ಅಧಿಕಾರಿಗಳು ಮುಷ್ಕರದ ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು ನನ್ನ ಗಮನಕ್ಕೆ ಬಂದಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸರ್ಕಾರವು ಭ್ರಷ್ಟಾಚಾರವನ್ನು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ

ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಮಾನತು; ಪ್ರತಿಭಟನೆಯಲ್ಲಿ ನಿರತ ಪಂಜಾಬ್ ನಾಗರಿಕ ಸೇವಾ ಅಧಿಕಾರಿಗಳಿಗೆ ಭಗವಂತ್ ಮಾನ್ ಖಡಕ್ ಎಚ್ಚರಿಕೆ
ಭಗವಂತ್ ಮಾನ್
Updated By: ರಶ್ಮಿ ಕಲ್ಲಕಟ್ಟ

Updated on: Jan 11, 2023 | 4:39 PM

ಚಂಡೀಗಢ: ತಮ್ಮ ಸಹೋದ್ಯೋಗಿಯ “ಅಕ್ರಮ” ಬಂಧನವನ್ನು ಪ್ರತಿಭಟಿಸಿ ಸಾಮೂಹಿಕ ರಜೆಯಲ್ಲಿರುವ ಪಂಜಾಬ್ ನಾಗರಿಕ ಸೇವಾ ಅಧಿಕಾರಿಗಳಿಗೆ(Punjab civil service officers) ಮಧ್ಯಾಹ್ನ 2 ಗಂಟೆಯೊಳಗೆ ಕರ್ತವ್ಯಕ್ಕೆ ಸೇರುವಂತೆ ಮುಖ್ಯಮಂತ್ರಿ ಭಗವಂತ್ ಮಾನ್(Bhagwant Mann) ಎಚ್ಚರಿಕೆ ನೀಡಿದ್ದು, ಇದಕ್ಕೆ ತಪ್ಪಿದಲ್ಲಿ ಅವರನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ.”ಇಂತಹ ಮುಷ್ಕರವು ಬ್ಲ್ಯಾಕ್‌ಮೇಲಿಂಗ್ ಮತ್ತು ಮುಖಾಮುಖಿಗೆ ಸಮಾನವಾಗಿದೆ” ಎಂದು ಅವರು ಹೇಳಿದರು.ರಾಜ್ಯ ವಿಜಿಲೆನ್ಸ್ ಬ್ಯೂರೋದಿಂದ ಲೂಧಿಯಾನದಲ್ಲಿ ಪಿಸಿಎಸ್ ಅಧಿಕಾರಿ ನರೀಂದರ್ ಸಿಂಗ್ ಧಲಿವಾಲ್ ಅವರನ್ನು ಬಂಧಿಸಿರುವುದನ್ನು ಪ್ರತಿಭಟಿಸಲು ಸೋಮವಾರದಿಂದ ಅಧಿಕಾರಿಗಳು ಐದು ದಿನಗಳ ಸಾಮೂಹಿಕ ಸಾಂದರ್ಭಿಕ ರಜೆಗೆ ತೆರಳಿದ್ದರಿಂದ ರಾಜ್ಯದ ಆಡಳಿತ ಕಚೇರಿಗಳಲ್ಲಿನ ಸೇವೆಗಳನ್ನು ಇದು ಬಾಧಿಸಿದೆ. ಇದರ ಬೆನ್ನಲ್ಲೇ ಭಗವಂತ್ ಮಾನ್ ಈ ರೀತಿಯ ಎಚ್ಚರಿಕೆ ನೀಡಿದ್ದಾರೆ.

‘ಕೆಲವು ಅಧಿಕಾರಿಗಳು ಮುಷ್ಕರದ ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು ನನ್ನ ಗಮನಕ್ಕೆ ಬಂದಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮದ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸರ್ಕಾರವು ಭ್ರಷ್ಟಾಚಾರ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಲಿ. ಅಂತಹ ಮುಷ್ಕರವು ಬ್ಲ್ಯಾಕ್‌ಮೇಲಿಂಗ್ ಮತ್ತು ಮುಖಾಮುಖಿಗೆ ಸಮಾನವಾಗಿರುತ್ತದೆ. ಯಾವುದೇ ಜವಾಬ್ದಾರಿಯುತ ಸರ್ಕಾರದಿಂದ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.

ಆದ್ದರಿಂದ ಮುಷ್ಕರವನ್ನು ಕಾನೂನು ಬಾಹಿರವೆಂದು ಘೋಷಿಸಲು ಈ ಮೂಲಕ ನಿಮಗೆ ಸೂಚಿಸಲಾಗಿದೆ. ಇಂದು ಅಂದರೆ 11.01.2023 ರಂದು ಮಧ್ಯಾಹ್ನ 2 ಗಂಟೆಯೊಳಗೆ ಸೇರದ ಅಂತಹ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ. ಮಧ್ಯಾಹ್ನ 2 ಗಂಟೆಯೊಳಗೆ ಹಾಜರಾಗದೇ ಇರುವವರನ್ನು ಡೈಸ್ ನಾನ್ ಎಂದು ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.


ಲೂಧಿಯಾನದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಧಲಿವಾಲ್ ಅವರನ್ನು ಶುಕ್ರವಾರ ವಿಜಿಲೆನ್ಸ್ ಬ್ಯೂರೋ,ಸಾಗಣೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಬಂಧಿಸಿದ್ದಾರೆ.

ಇದನ್ನೂ ಓದಿ:Ganga Vilas: ಜಗತ್ತಿನ ಅತಿ ಉದ್ದದ ಐಷಾರಾಮಿ ಹಡಗಾದ ಗಂಗಾ ವಿಲಾಸ್​ಗೆ ಟಿಕೆಟ್ ಬುಕ್ ಮಾಡುವುದು ಹೇಗೆ?

“ಪಂಜಾಬ್ ನಾಗರಿಕ ಸೇವಾ ಅಧಿಕಾರಿಯನ್ನು ಕಾನೂನುಬಾಹಿರವಾಗಿ, ತಪ್ಪಾಗಿ ಮತ್ತು ನಿರಂಕುಶವಾಗಿ ಮತ್ತು ಸರಿಯಾದ ಕಾರ್ಯವಿಧಾನವಿಲ್ಲದೆ ಬಂಧಿಸಲಾಗಿದೆ” ಎಂದು ಪಂಜಾಬ್ ನಾಗರಿಕ ಸೇವಾ ಅಧಿಕಾರಿಗಳ ಸಂಘ ಹೇಳಿಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Wed, 11 January 23