ಜೋಶಿಮಠ(Joshimath) ಮಾತ್ರವಲ್ಲ ಸುತ್ತಮುತ್ತಲಿನ ಪ್ರದೇಶಗಳು ವರ್ಷಕ್ಕೆ 6.5 ಸೆಂ.ಮೀ ಅಥವಾ 2.5 ಇಂಚುಗಳಷ್ಟು ಮುಳುಗುತ್ತಿವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಹೇಳಿದೆ. ಜೋಶಿಮಠ ಮುಳುಗುವಿಕೆ ಮಾತ್ರವಲ್ಲ, ದೇಶದ ಬಹುತೇಕ ಗುಡ್ಡಗಾಡು ಪ್ರದೇಶಗಳು, ಅದರಲ್ಲೂ ವಿಶೇಷವಾಗಿ ಹಿಮನದಿ ಸಮೀಪದ ನಗರಗಳು ಅಪಾಯದಲ್ಲಿವೆ. ಸಮಯಕ್ಕೆ ಸರಿಯಾಗಿ ಪರಿಸ್ಥಿತಿ ನಿಭಾಯಿಸದಿದ್ದರೆ, ಜೋಶಿಮಠದಂತಹ ಪರಿಸ್ಥಿತಿಗಳು ದೇಶದ ಎಲ್ಲಾ ದೊಡ್ಡ ಬೆಟ್ಟಗಳಿಗೂ ಬರಬಹುದು.
ಏಕೆಂದರೆ ಪರ್ವತದ ಮೇಲಿನ ವಿವೇಚನಾರಹಿತ ಮತ್ತು ಅವ್ಯವಸ್ಥಿತ ಕಟ್ಟಡ ನಿರ್ಮಾಣವು ಪರ್ವತಗಳ ಗುರುತ್ವಾಕರ್ಷಣೆಯ ಕೇಂದ್ರದಲ್ಲಿ ಅಡಚಣೆಗಳನ್ನು ಉಂಟುಮಾಡಿದೆ, ಹಾಗೆಯೇ ಅನೇಕ ಬೆಟ್ಟದ ನಗರಗಳ ಅಡಿಯಲ್ಲಿ ನೀರಿನ ಸಂಗ್ರಹವನ್ನು ಸಹ ಅಂದಾಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪರ್ವತಗಳ ಮೇಲೆ ನೆಲೆಗೊಂಡಿರುವ ನಗರಗಳ ಭೂಗರ್ಭವು ದುರ್ಬಲವಾಗುವುದಲ್ಲದೆ, ದೊಡ್ಡ ದುರಂತದ ಕಡೆಗೆ ಸಾಗುತ್ತಿದೆ.
ಮತ್ತಷ್ಟು ಓದಿ:Joshimath Sinking: ಮುಳುಗುತ್ತಿದೆ ಜೋಶಿಮಠ; ಪ್ರತಿ ಗಂಟೆಗೂ ಹೆಚ್ಚುತ್ತಿದೆ ಆತಂಕ, ಎನ್ಡಿಆರ್ಎಫ್ ನಿಯೋಜನೆ
ಜೋಶಿಮಠದಲ್ಲಿರುವ 110ಕ್ಕೂ ಕುಟುಂಬಗಳು ಊರು ತೊರೆದಿವೆ. ಇಡೀ ಊರನ್ನೇ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ. ಹೋಟೆಲ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, 678 ಮನೆಗಳು ಸದ್ಯಕ್ಕೆ ಅಪಾಯದಲ್ಲಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ. ಎಲ್ಲರನ್ನೂ ಸುರಕ್ಷಿತವಾಗಿರಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಾನುವಾರುಗಳಿಗೂ ಆಶ್ರಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಜೋಶಿಮಠದಂತಹ ಇತರ ಅನೇಕ ನಗರಗಳು ಇದೇ ರೀತಿಯ ವಿನಾಶಕ್ಕೆ ಗುರಿಯಾಗಿವೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಾಜಿ ಹೆಚ್ಚುವರಿ ಮಹಾನಿರ್ದೇಶಕ ಮತ್ತು ಉತ್ತರ ಪ್ರದೇಶದ ವಿಭಾಗದ ಮುಖ್ಯಸ್ಥ ಡಾ. ಸೋಮನಾಥ್ ಚಾಂಡೆಲ್ ಹೇಳಿದ್ದಾರೆ.
ಜೋಶಿಮಠವು ಹಿಮಾಲಯ ಪ್ರದೇಶದ ಹಳೆಯ ನಗರವಾಗಿದೆ, ಅಲ್ಲಿ ಮಳೆಯ ಜೊತೆಗೆ ಹಿಮವೂ ಬೀಳುತ್ತದೆ. ಈ ದೃಷ್ಟಿಕೋನದಿಂದ, ಆ ಪ್ರದೇಶಗಳು ಹೆಚ್ಚು ಅಪಾಯಕಾರಿ.
ಅಲ್ಲಿ ನಿರ್ಮಾಣವು ಅನಿಯಂತ್ರಿತವಾಗಿ ಮತ್ತು ಅವ್ಯವಸ್ಥಿತವಾಗಿ ನಡೆಯುತ್ತಿದೆ, ಜೊತೆಗೆ ಹಿಮಪಾತ ಮತ್ತು ಮಳೆಯ ಮಟ್ಟವೂ ಸಮಾನವಾಗಿರುತ್ತದೆ. ಹಿಮದ ಬಹುಪಾಲು ಕರಗಿದಾಗ, ಅದು ಪರ್ವತಗಳ ಮೂಲಕ ಹಾದುಹೋಗುತ್ತದೆ ಮತ್ತು ಕೆಳಗಿನ ನದಿಯನ್ನು ಸೇರುತ್ತದೆ.
ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾದ ಪರಿಹಾರ ಶಿಬಿರಗಳಲ್ಲಿನ ಮೂಲ ಸೌಕರ್ಯಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಹೇಳಿದ್ದಾರೆ.
ಜೋಶಿಮಠವನ್ನು ವಿಪತ್ತು ಪೀಡಿತ ವಲಯವೆಂದು ಘೋಷಿಸಲಾಗಿದೆ ಮತ್ತು ಜೋಶಿಮಠ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಷೇಸಲಾಗಿದೆ. ಜೋಶಿಮಠದ ಶೇ. 30 ರಷ್ಟು ಹಾನಿಯಾಗಿದೆ ಎಂದು ತೋರುತ್ತದೆ. ತಜ್ಞರ ಸಮಿತಿಯಿಂದ ವರದಿಯನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಅದನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ಥರ ರಕ್ಷಣೆ ಹಾಗೂ ಜೋಶಿಮಠವನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ಸಿಂಗ್ ಧಾಮಿ ಮನವಿ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದ್ದಾರೆ.
ಇಂತಹ ಆತಂಕಕಾರಿ ಪರಿಸ್ಥಿತಿಗೆ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯೇ ಕಾರಣ ಎಂದು ತಜ್ಞರು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ