PM Modi UK Visit: ಕಿಂಗ್ ಚಾರ್ಲ್ಸ್ರನ್ನು ಭೇಟಿಯಾಗಿ ವಿಶೇಷ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ(Narendra Modi) ಬ್ರಿಟನ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಯಾಂಡ್ರಿಂಗ್‌ಹ್ಯಾಮ್ ಹೌಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ ಅವರು ಚಾರ್ಲ್ಸ್‌ಗೆ ಗಿಡವೊಂದನ್ನು ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ರಾಜಮನೆತನವು ಈ ವಿಷಯವನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಏಕ್ ಪೇಡ್ ಮಾ ಕೆ ನಾಮ್(ತಾಯಿಯ ಹೆಸರಿನಲ್ಲಿ ಒಂದು ಮರ)ಅಭಿಯಾನವನ್ನು ಆರಂಭಿಸಿದ್ದಾರೆ.

ಲಂಡನ್, ಜುಲೈ 25: ಪ್ರಧಾನಿ ನರೇಂದ್ರ ಮೋದಿ(Narendra Modi) ಬ್ರಿಟನ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಯಾಂಡ್ರಿಂಗ್‌ಹ್ಯಾಮ್ ಹೌಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು. ಭೇಟಿಯ ಸಮಯದಲ್ಲಿ ಅವರು ಚಾರ್ಲ್ಸ್‌ಗೆ ಗಿಡವೊಂದನ್ನು ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ರಾಜಮನೆತನವು ಈ ವಿಷಯವನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಏಕ್ ಪೇಡ್ ಮಾ ಕೆ ನಾಮ್(ತಾಯಿಯ ಹೆಸರಿನಲ್ಲಿ ಒಂದು ಮರ)ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಭಾಗವಾಗಿ ಒಂದು ಗಿಡವನ್ನು ಕಿಂಗ್ ಚಾರ್ಲ್ಸ್‌ಗೆ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿ ಹಾಕಲಾಗಿದೆ. ಇದರ ನಂತರ, ಪ್ರಧಾನಿ ಮೋದಿ ಗುರುವಾರ ಪೂರ್ವ ಇಂಗ್ಲೆಂಡ್‌ನ ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು.
ರಾಯಲ್ ಫ್ಯಾಮಿಲಿ ಪೋಸ್ಟ್
This afternoon, The King received the Prime Minister of the Republic of India, @NarendraModi, at Sandringham House. 🇮🇳
During their time together, His Majesty was given a tree to be planted this Autumn, inspired by the environmental initiative launched by the Prime Minister, “Ek… pic.twitter.com/9nhigoCgkw
— The Royal Family (@RoyalFamily) July 24, 2025
ಆ ಸಸ್ಯ ಯಾವುದು? ಪ್ರಧಾನಿ ಮೋದಿ ಅವರು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿಯಲ್ಲಿ ಕಿಂಗ್ ಚಾರ್ಲ್ಸ್‌ಗೆ ಡೇವಿಡಿಯಾ ಇನ್ವೊಲುಕ್ರಾಟಾ ‘ಸೋನೋಮಾ’ ಜಾತಿಯ ಸಸ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಸ್ಯವನ್ನು ಸಾಮಾನ್ಯವಾಗಿ ‘ಸೋನೋಮಾ ಡವ್ ಟ್ರೀ’ ಎಂದೂ ಕರೆಯಲಾಗುತ್ತದೆ. ಸೋನೋಮಾ ಡವ್ ಟ್ರೀ ಅನ್ನು ಅಲಂಕಾರಿಕ ಗಿಡ. ಇದರಲ್ಲಿ ಕಡಿಮೆ ಸಮಯದಲ್ಲಿ ಅನೇಕ ಹೂವುಗಳು ಅರಳುತ್ತವೆ. ಡೇವಿಡಿಯಾ ಇನ್ವೊಲುಕ್ರಾಟಾ ಜಾತಿಯ ಸಸ್ಯಗಳು ಹೆಮ್ಮರವಾಗಿ ಬೆಳೆಯಲು 10 ರಿಂದ 20 ವರ್ಷಗಳನ್ನು ತೆಗೆದುಕೊಳ್ಳುತ್ತದೆ.
ಮತ್ತಷ್ಟು ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತೀಯ ಉದ್ಯಮ ವಲಯ ಹರ್ಷ
ಈ ಸಸ್ಯವನ್ನು ನೆಟ್ಟ 2 ರಿಂದ 3 ವರ್ಷಗಳಲ್ಲಿ ಹೂವುಗಳು ಅರಳಲು ಪ್ರಾರಂಭಿಸುತ್ತವೆ. ಇದಕ್ಕೂ ಮುನ್ನ ಜುಲೈ 24 ರಂದು ಭಾರತ ಮತ್ತು ಯುಕೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿದವು. ಈ ಒಪ್ಪಂದವು ಪ್ರತಿ ವರ್ಷ ದ್ವಿಪಕ್ಷೀಯ ವ್ಯಾಪಾರವನ್ನು ಸುಮಾರು 34 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಲಂಡನ್‌ನಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಭಾರತದ ಪರವಾಗಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆ ಪರವಾಗಿ ಜೋನಾಥನ್ ರೆನಾಲ್ಡ್ಸ್ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




