‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ‘ಚಾಯ್ ಪೆ ಚರ್ಚಾ’ ನಡೆಸಿದ್ದಾರೆ. ಈ ಬಗ್ಗೆ ಅವರೇ ಎಕ್ಸ್ ಪೋಸ್ಟ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚಹಾದ ಜೊತೆ ಚರ್ಚೆ ನಡೆಸಲಾಯಿತು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಲಂಡನ್‌ನಲ್ಲಿ 'ಬ್ಯುಸಿನೆಸ್ ಎಕ್ಸ್ಪೋ' ವೀಕ್ಷಿಸಿದರು.
ಲಂಡನ್, ಜುಲೈ 24: ಚೆಕರ್ಸ್‌ನಲ್ಲಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ‘ಚಾಯ್ ಪೆ ಚರ್ಚಾ’ (Chai pe Charcha) ನಡೆಸಿದ್ದಾರೆ. ಈ ಬಗ್ಗೆ ಅವರೇ ಎಕ್ಸ್ ಪೋಸ್ಟ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚಹಾದ ಜೊತೆ ಚರ್ಚೆ ನಡೆಸಲಾಯಿತು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Modi in UK) ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಲಂಡನ್‌ನಲ್ಲಿ ‘ಬ್ಯುಸಿನೆಸ್ ಎಕ್ಸ್ಪೋ’ ವೀಕ್ಷಿಸಿದರು. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪ್ರಧಾನಿ ಮೋದಿ, ಸ್ಟಾರ್ಮರ್ ಉದ್ಯಮಗಳ ನಾಯಕರನ್ನು ಭೇಟಿಯಾದರು. ಈ ವೇಳೆ ಅವರಿಬ್ಬರೂ ಅಲ್ಲಿದ್ದ ಸ್ಟಾಲ್ನಲ್ಲಿ ಚಹಾ ಸೇವಿಸಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

