Joshimath Sinking: ಮುಳುಗುತ್ತಿದೆ ಜೋಶಿಮಠ; ಪ್ರತಿ ಗಂಟೆಗೂ ಹೆಚ್ಚುತ್ತಿದೆ ಆತಂಕ, ಎನ್ಡಿಆರ್ಎಫ್ ನಿಯೋಜನೆ
ಜೋಶಿಮಠದಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಉತ್ತರಾಖಂಡ: ಉತ್ತರಾಖಂಡದ ಜೋಶಿಮಠ (Joshimath) ನಗರದಲ್ಲಿ ಭೂಕುಸಿತದ ಅಪಾಯ ಹೆಚ್ಚುತ್ತಲೇ ಇದೆ. ಈ ಇಡೀ ಪ್ರದೇಶವನ್ನು ‘ಮುಳುಗುವ ವಲಯ’ ಎಂದು ಕರೆಯಲಾಗುತ್ತಿದ್ದು, ಸುತ್ತಮುತ್ತಲೂ ಹೈ ಅಲರ್ಟ್ ಘೋಷಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ಭೂಕುಸಿತದಿಂದ (Landslide) ಹಾನಿಗೊಳಗಾದ ಮನೆಗಳ ಸಂಖ್ಯೆ 561ರಿಂದ 603ಕ್ಕೆ ಏರಿಕೆಯಾಗಿದೆ. ಅಪಾಯದ ಪರಿಸ್ಥಿತಿಯಿಂದಾಗಿ ವಿಪತ್ತು ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಕುಟುಂಬಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ. ಚಮೋಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಅವರು ಪರಿಹಾರ ಶಿಬಿರಕ್ಕೆ ತೆರಳುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಜೋಶಿಮಠದಲ್ಲಿರುವ ಸರ್ಕಾರಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲಾಡಳಿತ ತೆರವು ಕಾರ್ಯ ಆರಂಭಿಸಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ ಜೋಶಿಮಠ ನಗರದಲ್ಲಿ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನ 1 ತಂಡ ಮತ್ತು ಎಸ್‌ಡಿಆರ್‌ಎಫ್‌ನ 4 ತಂಡಗಳನ್ನು ನಿಯೋಜಿಸಿದೆ.
ಇದನ್ನೂ ಓದಿ: Joshimath Sinking: ಉತ್ತರಾಖಂಡದ ಜೋಶಿಮಠ ಭೂಕುಸಿತಕ್ಕೆ ಕಾರಣವೇನು? ಇಲ್ಲಿದೆ ವಿವರ
ಜನವರಿ 2ರಿಂದ 3ರ ಮಧ್ಯರಾತ್ರಿಯಲ್ಲಿ ಈ ಪ್ರದೇಶದಲ್ಲಿ ಭೂಗತ ನೀರಿನ ಮೂಲಗಳು ಒಡೆದಿದ್ದರಿಂದ ಜೋಶಿಮಠದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡವು. ಈ ಭೂಗತ ಜಲಮೂಲದಿಂದ ನಿಮಿಷಕ್ಕೆ ನಾಲ್ಕೈದು ನೂರು ಲೀಟರ್ ನೀರು ಹೊರ ಬರುತ್ತಿದೆ, ಈ ಮಂಜುಗಡ್ಡೆಯ ನೀರಿನಿಂದಾಗಿ ಭೂಗರ್ಭದ ಬಂಡೆ ಸವೆತವಾಗುತ್ತಿದೆ.ಇಲ್ಲಿಯವರೆಗೆ ಇದರ ಗಾತ್ರ ಎಷ್ಟಿದೆ ಎಂಬುದು ಗೊತ್ತಿರಲಿಲ್ಲ ಎಂದರು. ಭೂಗತ ನೀರಿನ ಮೂಲ ಮತ್ತು ಅದರಲ್ಲಿ ಎಷ್ಟು ಮಂಜುಗಡ್ಡೆಯ ನೀರು ಇದೆ ಮತ್ತು ಅದು ಏಕೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.
#WATCH | Uttarakhand: Angry residents of Joshimath held a heated conversation with SDM Joshimath Kumkum Joshi last night & blocked DM’s vehicle going to inspect relief camps. People accused SDM of misbehaving. pic.twitter.com/3QwHljS00D
— ANI UP/Uttarakhand (@ANINewsUP) January 9, 2023
ಜನವರಿ ಮೊದಲ ವಾರದಲ್ಲಿ ಭೂಗತ ಜಲಮೂಲ ಒಡೆದಿದ್ದರಿಂದ ಜೋಶಿಮಠದ ಭೂಮಿ ಹಠಾತ್ ಕುಸಿತಕ್ಕೆ ಕಾರಣ ಎಂದು ಭೂವಿಜ್ಞಾನಿಗಳು ತಮ್ಮ ಪ್ರಾಥಮಿಕ ತನಿಖೆಯ ಬಳಿಕ ತಿಳಿಸಿದ್ದಾರೆ. ಜನವರಿ 4ರಂದು ಉತ್ತರಾಖಂಡದ ಜೋಶಿಮಠದಲ್ಲಿ ವಾಸಿಸುತ್ತಿದ್ದ ಸುಮಾರು 34 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದೀಗ ಕೇವಲ 3 ದಿನಗಳ ಅಂತರದಲ್ಲಿ ಈ ರೀತಿ ಬಿರುಕು ಬಿಟ್ಟ ಮನೆಗಳ ಸಂಖ್ಯೆ 600ಕ್ಕೂ ಹೆಚ್ಚಾಗಿದೆ.
ಇದನ್ನೂ ಓದಿ: Joshimath Sinking: ಉತ್ತರಾಖಂಡದ ಜೋಶಿಮಠದಲ್ಲಿ ಕುಸಿಯುತ್ತಿದೆ ಭೂಮಿ; ನೂರಾರು ಮನೆಗಳಲ್ಲಿ ಬಿರುಕು
ಜೋಶಿಮಠದಲ್ಲಿ ಸುಮಾರು 570ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಉಂಟಾಗಿರುವ ಕುರಿತು ವರದಿ ದಾಖಲಾಗಿವೆ. ಆದರೆ, ಸ್ಥಳೀಯರು ನೀಡುತ್ತಿರುವ ಮಾಹಿತಿಯಂತೆ ಈ ಸಂಖ್ಯೆ ಇನ್ನೂ 3 ಪಟ್ಟು ಹೆಚ್ಚಿದೆ ಎನ್ನಲಾಗಿದೆ. ಇಲ್ಲಿ ನಡೆಯುತ್ತಿರುವ ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದ್ದು, ಈ ಸುರಂಗದಲ್ಲಿ ನಡೆಯುತ್ತಿರುವ ಸ್ಫೋಟಗಳು ಇಡೀ ಜೋಶಿಮಠ ನಗರವನ್ನು ನಡುಗಿಸುತ್ತಿದೆ. ಇದರಿಂದ ಇಲ್ಲಿನ ಮನೆಗಳು, ಕಟ್ಟಡಗಳು, ಬಿರುಕು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಕುಸಿಯುವ ಭೀತಿ ಉಂಟಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕೂಡಲೇ ಅಭಿವೃದ್ಧಿ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಇತ್ತ NTPC ಕೂಡ ತನ್ನ ಹೈಡಲ್ ಪವರ್ ಯೋಜನೆಗೂ ಮತ್ತು ಜೋಶಿಮಠದಲ್ಲಿನ ಭೂಕುಸಿತ ದುರಂತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಸ್ಥಳೀಯರ ಆಕ್ರೋಶಕ್ಕೆ ಮಣಿದಿರುವ ಜೋಶಿಮಠ ಜಿಲ್ಲಾಡಳಿತ ಇಲ್ಲಿ ನಡೆಯುತ್ತಿದ್ದ ಹೈಡ್ರೋಪವರ್ ಯೋಜನೆ ಕಾಮಗಾರಿಯನ್ನು ನಿಲ್ಲಿಸಿದೆ. ಈಗಾಗಲೇ ಜೋಶಿಮಠದ ಪ್ರದೇಶದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.