Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ ಪಡೆಗೆ ನೂತನ ಸಾರಥಿ, ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಆಯ್ಕೆ

ದೆಹಲಿ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ನೂತನ ಸಾರತಿ ನೇಮಕ ಮಾಡಲಾಗಿದೆ. ಜಗತ್ ಪ್ರಕಾಶ್ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಶಾ ಅವ್ರು ನಡ್ಡಾಗೆ ಅಧಿಕಾರ ಹಸ್ತಾಂತರಿಸಿದ್ದು, ಪಿಎಂ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರು ನಡ್ಡಾ ಅವರಿಗೆ ಶುಭಕೋರಿದ್ದಾರೆ. ಕಿರಿಯರಿಗೆ ಅವಕಾಶ ಕೊಡಬೇಕು: ಇನ್ನು ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಮಾತನಾಡಿದ ಪಿಎಂ ಮೋದಿ, ಬಿಜೆಪಿಯಲ್ಲಿ ಹಿರಿಯ ನಾಯಕರು ಕಿರಿಯರ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೇ ನಡ್ಡಾ […]

ಕಮಲ ಪಡೆಗೆ ನೂತನ ಸಾರಥಿ, ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಆಯ್ಕೆ
Follow us
ಸಾಧು ಶ್ರೀನಾಥ್​
|

Updated on: Jan 21, 2020 | 6:56 AM

ದೆಹಲಿ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ನೂತನ ಸಾರತಿ ನೇಮಕ ಮಾಡಲಾಗಿದೆ. ಜಗತ್ ಪ್ರಕಾಶ್ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಶಾ ಅವ್ರು ನಡ್ಡಾಗೆ ಅಧಿಕಾರ ಹಸ್ತಾಂತರಿಸಿದ್ದು, ಪಿಎಂ ಮೋದಿ ಸೇರಿದಂತೆ ಬಿಜೆಪಿ ವರಿಷ್ಠರು ನಡ್ಡಾ ಅವರಿಗೆ ಶುಭಕೋರಿದ್ದಾರೆ.

ಕಿರಿಯರಿಗೆ ಅವಕಾಶ ಕೊಡಬೇಕು: ಇನ್ನು ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಮಾತನಾಡಿದ ಪಿಎಂ ಮೋದಿ, ಬಿಜೆಪಿಯಲ್ಲಿ ಹಿರಿಯ ನಾಯಕರು ಕಿರಿಯರ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೇ ನಡ್ಡಾ ಹಾಗೂ ಅಮಿತ್ ಶಾ ಅವರನ್ನೂ ಪ್ರಧಾನಿ ಮೋದಿ ಹೊಳಿದ್ರು.

3 ರಾಜಧಾನಿ ನಿರ್ಮಾಣಕ್ಕೆ ವಿರೋಧ: ನೆರೆಯ ಆಂಧ್ರದಲ್ಲಿ 3 ರಾಜಧಾನಿಗಳ ನಿರ್ಮಾಣ ಸಂಬಂಧ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಅಮರಾವತಿ ಹಾಗೂ ವಿಶಾಖಪಟ್ಟಣಂ ಸುತ್ತಮುತ್ತಲೂ ಹೋರಾಟ ಶುರುವಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು ಸರ್ಕಾರದ ಈ ನಿರ್ಧಾರ ಬೆಂಬಲಿಸಿ ಕೆಲವು ಜಿಲ್ಲೆಗಳಲ್ಲಿ ಸಂಭ್ರಮಾಚರಣೆಯೂ ನಡೆದಿದೆ.

ಮೈತ್ರಿ ಮುರಿದುಕೊಂಡ ಅಕಾಲಿದಳ! ‘ಸಿಎಎ’ ಸಂಬಂಧ ಭುಗಿಲೆದ್ದಿರುವ ವಿವಾದ, ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅಕಾಲಿದಳದ ಮೈತ್ರಿ ಮುರಿದುಬಿದ್ದಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಅಕಾಲಿದಳದ ಮುಖಂಡರು, ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ಸಿಎಎ ಭಾರತದ ಆಂತರಿಕ ವಿಷಯ: ‘ಸಿಎಎ’ ಜಾರಿ ಸಂಬಂಧ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್​ಆರ್​ಸಿ ಜಾರಿಗೆ ತರುವ ಉದ್ದೇಶ ಏನಿತ್ತು ಅಂತಲೂ ಶೇಖ್ ಹಸೀನಾ ಪ್ರಶ್ನಿಸಿದ್ದಾರೆ. ಅಲ್ಲದೆ ಈ ನಿರ್ಧಾರ ಭಾರತದ ಆಂತರಿಕ ವಿಚಾರ ಅಂತಲೂ ಹಸೀನಾ ಹೇಳಿದ್ದಾರೆ.

ಸಾಮಾನ್ಯ ಜೀವನದತ್ತ ಹ್ಯಾರಿ ದಂಪತಿ: ಬ್ರಿಟನ್ ರಾಜಮನೆತನದ ಬಿಕ್ಕಟ್ಟು ದೊಡ್ಡ ರೂಪ ಪಡೆದಿದ್ದು, ಹ್ಯಾರಿ ಮತ್ತವರ ಪತ್ನಿ ಮೆಘನ್ ಮಾರ್ಕೆಲ್ ತಮಗೆ ನೀಡಿದ್ದ ರಾಜಮನೆತನದ ಬಿರುದುಗಳನ್ನ ತೊರೆದಿದ್ದಾರೆ. ಹಾಗೇ ಅರಮನೆಯಿಂದಲೂ ಹೊರನಡೆದಿರುವ ಈ ದಂಪತಿ ಸಾಮಾನ್ಯರಂತೆ ಜೀವನ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.

ಕಾಡ್ಗಿಚ್ಚು ಶಾಂತಗೊಳಿಸಿದ ವರುಣ! ಕಾಡ್ಗಿಚ್ಚಿನಿಂದ ತತ್ತರಿಸಿ ಹೋಗಿದ್ದ ಆಸ್ಟ್ರೇಲಿಯಾದಲ್ಲೀಗ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಸದ್ಯ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದ್ದಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆಲಿಕಲ್ಲು ಸಹಿತಿ ಮಳೆಯಾಗುತ್ತಿರುವ ಪರಿಣಾಮ ಮನೆ, ಕಾರುಗಳ ಗಾಜು ಕೂಡ ಪೀಸ್ ಪೀಸ್ ಆಗಿದೆ.