ನನಗಿಂತಲೂ ಹೆಚ್ಚು ವಿನಮ್ರ ಎಂದು ತೋರಿಸಲು ಮೋದಿ ಮಂಡಿಯೂರಿ ನಮಸ್ಕರಿಸಿದ್ದಾರೆ: ಅಶೋಕ್ ಗೆಹ್ಲೋಟ್
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ತುಂಬಾ ವಿನಮ್ರ, ಸಾಮಾನ್ಯ ಮನುಷ್ಯ ಎಂಬುದು ಅವರಿಗೆ ಗೊತ್ತು. ನಾನು ಬಾಲ್ಯದಿಂದಲೇ ಹೀಗೆ. ಮೋದಿಜೀಗೆ ಇದನ್ನು ಹೇಗೆ ಸಹಿಸುವುದಕ್ಕೆ ಆಗುತ್ತೆ
ಜೈಪುರ: ಶನಿವಾರ ಸಿರೋಹಿಯಲ್ಲಿ ನಡೆದ ಸಭೆಯ ಮುಂದೆ ನರೇಂದ್ರ ಮೋದಿ(Narendra Modi) ಮಂಡಿಯೂರಿದ್ದನ್ನು ಟೀಕಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನನಗಿಂತ ವಿನಮ್ರರಾಗಿ ಕಾಣಿಸಿಕೊಳ್ಳಲು ಪ್ರಧಾನಿ ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಹಳೇ ತಂತ್ರ ಪ್ರದರ್ಶಿಸುವ ಬದಲು ಮೋದಿಯವರು ದೇಶದ ಜನತೆಗೆ ಸಹೋದರತೆ ಮತ್ತು ಪ್ರೀತಿಯ ಸಂದೇಶವನ್ನು ನೀಡಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ. ಶುಕ್ರವಾರ ಸಂಜೆ ಸಿರೋಹಿ (Sirohi) ಜಿಲ್ಲೆಯ ಅಬು ರೋಡ್ ಗೆ ಬಂದು ತಲುಪಿದ ಮೋದಿ, ತಾನು ತಡವಾಗಿ ತಲುಪಿದ್ದಿಂದ ಲೌಡ್ ಸ್ಪೀಕರ್ ನಿಯಮವನ್ನು ಪಾಲಿಸುತ್ತೇನೆ. ಹಾಗಾಗಿ ತಾನು ರ್ಯಾಲಿಯನ್ನುದ್ದೇಶಿಸಿ ಮಾತನಾಡುವುದಿಲ್ಲ ಎಂದು ಹೇಳಿ ನೆರೆದಿದ್ದ ಸಭಿಕರ ಮುಂದೆ ಮೂರು ಬಾರಿ ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ಬಿಕಾನೇರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೆಹ್ಲೋಟ್, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ತುಂಬಾ ವಿನಮ್ರ, ಸಾಮಾನ್ಯ ಮನುಷ್ಯ ಎಂಬುದು ಅವರಿಗೆ ಗೊತ್ತು. ನಾನು ಬಾಲ್ಯದಿಂದಲೇ ಹೀಗೆ. ಮೋದಿಜೀಗೆ ಇದನ್ನು ಹೇಗೆ ಸಹಿಸುವುದಕ್ಕೆ ಆಗುತ್ತೆ? ಅವರು ನನಗಿಂತೆ ಹೆಚ್ಚು ವಿನಮ್ರತೆ ಹೊಂದಿದ್ದಾರೆ ಎಂದುತೋರಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.
नवरात्र के व्रत रहते हुए दिन भर के कई सार्वजनिक कार्यक्रमों के बाद राजस्थान के कार्यक्रम में देरी से पहुंचने पर पीएम मोदी ने क्षमा माँगते हुए जनता को झुककर प्रणाम किया। उन्होंने जनता से एक वादा भी किया… pic.twitter.com/ZLhHeCV28D
— BJP (@BJP4India) September 30, 2022
ಸೌಹಾರ್ದತೆ ಸಾರಲು ಮೋದಿ ಜನರಲ್ಲಿ ಮನವಿ ಮಾಡಿದ್ದರೆ ನಾನು ಪ್ರಧಾನಿಗೆ ಕರೆ ಮಾಡಿ ಅಭಿನಂದಿಸುತ್ತಿದ್ದೆ. ಕೇವಲ ಮಂಡಿಯೂರಿ ಏಕೆ? ನಾನು ಕೂಡ ಅಶೋಕ್ ಗೆಹ್ಲೋಟ್ ಅವರಂತೆ ವಿನಮ್ರ ಎಂದು ತಿಳಿಸಲು ಹಾಗೆ ಮಾಡಿದ್ದಾರೆಯೇ ಎಂದು ಅವರು ಕೇಳಿದ್ದಾರೆ.
ಮೋದಿ ವಿಡಿಯೊ ವೈರಲ್
ರಾಜಸ್ಥಾನದ ಸಿರೋಹಿಯ ಅಬು ರಾಡ್ ಪ್ರದೇಶದಲ್ಲಿ ನಿಗದಿತ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಕ್ ಬಳಸದೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ “ನಾನು ತಲುಪಲು ತಡವಾಯಿತು. ಆಗಲೇ ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ನಾನು ನಿಮ್ಮ ಮುಂದೆ ಕ್ಷಮೆಯಾಚಿಸುತ್ತೇನೆ. ಆದರೆ ನಾನು ಮತ್ತೆ ಇಲ್ಲಿಗೆ ಬಂದು ನಿಮ್ಮ ಪ್ರೀತಿಯನ್ನು ಬಡ್ಡಿಯೊಂದಿಗೆ ಮರುಪಾವತಿಸುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಪ್ರಧಾನಿ ಮೋದಿ ‘ಭಾರತ್ ಮಾತಾ ಕಿ ಜೈ’ ಘೋಷಣೆಯೊಂದಿಗೆ ತಮ್ಮ ಸಂಕ್ಷಿಪ್ತ ಭಾಷಣವನ್ನು ಮುಗಿಸಿದ್ದಾರೆ.
PM Modi decided against addressing the public meeting at Abu Road because it was well past stipulated time.
This was 7th program of the day. Earlier he flagged and took a ride on Vande Bharat and Ahemdabad Metro, prayed at Ambaji among others.
He is 72 and fasting for Navratri! pic.twitter.com/UWiotbehQm
— Amit Malviya (@amitmalviya) September 30, 2022
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ವಿಡಿಯೊವನ್ನು ಹಂಚಿಕೊಂಡಿದ್ದು ಪ್ರಧಾನಿ ಮೋದಿ ಅವರು ಶುಕ್ರವಾರ ನವರಾತ್ರಿ ಉಪವಾಸ ಮಾಡುತ್ತಿದ್ದಾರೆ ಎಂದಿದ್ದಾರೆ.ನಿಗದಿತ ಸಮಯ ಮೀರಿರುವುದರಿಂದ ಅಬು ರೋಡ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವುದು ಬೇಡ ಎಂದು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಇದು ದಿನದ 7 ನೇ ಕಾರ್ಯಕ್ರಮವಾಗಿತ್ತು. ಇದಕ್ಕೂ ಮೊದಲು ಅವರು ವಂದೇ ಭಾರತ್ ಮತ್ತು ಅಹಮದಾಬಾದ್ ಮೆಟ್ರೋದಲ್ಲಿ ಧ್ವಜಾರೋಹಣ ಮಾಡಿದರು.ಅಂಬಾಜಿಯಲ್ಲಿ ಪ್ರಾರ್ಥನೆ ಮಾಡಿದರು. ಅವರಿಗೆ 72 ವರ್ಷ, ಅವರು ನವರಾತ್ರಿ ಉಪವಾಸ ಮಾಡುತ್ತಿದ್ದಾರೆ ಎಂದು ಮಾಳವಿಯಾ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 10 ಗಂಟೆಯ ನಂತರ ಸೌಂಡ್ ಸಿಸ್ಟಮ್ ಬಳಕೆಯ ಮೇಲಿನ ನಿರ್ಬಂಧದ ಕಾರಣ ಸಭಿಕರನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗದ ಕಾರಣ ತಾಳ್ಮೆಯಿಂದ ಕಾಯುತ್ತಿರುವ ಪ್ರೇಕ್ಷಕರಿಗೆ ಮಂಡಿಯೂರಿ ಪ್ರಣಾಮ ಮಾಡಿದ್ದಾರೆ. ಇದು ನಮ್ಮನ್ನು ಮೂಕರನ್ನಾಗಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬರೆದಿದ್ದಾರೆ.
Published On - 12:49 pm, Sun, 2 October 22