Justice For Kamaraj: ‘ಕಾಮರಾಜು ಮತ್ತೆ ಕೆಲಸಕ್ಕೆ ನೇಮಕವಾಗುವವರೆಗೂ ಜೊಮ್ಯಾಟೊದಿಂದ ಆರ್ಡರ್ ಪಡೆಯುವುದಿಲ್ಲ’- ಶುರುವಾಗಿದೆ ಅಭಿಯಾನ
ಜೊಮ್ಯಾಟೊ ಕಂಪನಿ ಕಾಮರಾಜು ಅವರನ್ನು ವಾಪಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಈ ನಿಟ್ಟಿನಲ್ಲಿ ಜಾನಿ ವಾಕರ್ ದಿ ಕೆಫೆ (Johnny Walker The Café) ರೆಸ್ಟೋರೆಂಟ್ ಮೊದಲ ಹೆಜ್ಜೆ ಇಟ್ಟಿದೆ.
ಕಾಮರಾಜು.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೇಂದ್ರಬಿಂದುವಾಗಿದ್ದಾರೆ. ಬೆಂಗಳೂರಿನ ಮಹಿಳೆ ಹಿತೇಶಾ ಚಂದ್ರಾಣಿ ಇವರ ವಿರುದ್ಧ ಮಾಡಿದ ಆರೋಪದ ಪರಿಣಾಮ ಕಾಮರಾಜುವನ್ನು ಜೊಮ್ಯಾಟೊ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಇನ್ನು ಜೈಲಿಗೂ ಹೋಗಿಬಂದಿದ್ದಾರೆ. ಮಹಿಳೆಯೊಬ್ಬಳ ಕಣ್ಣೀರು..ಗಾಯ ಮತ್ತು ಆರೋಪದಿಂದ ಕಾಮರಾಜು ನಿಜಕ್ಕೂ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂಬ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಮೊದಲು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಹಿತೇಶಾ, ಕಾಮರಾಜು ಮೇಲೆ ಆರೋಪ ಮಾಡಿದ್ದರು. ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ಜೊಮ್ಯಾಟೊದಿಂದ ಫುಡ್ ಆರ್ಡರ್ ಮಾಡಿದ್ದೆ. ಈತ ತಡವಾಗಿ ಬಂದಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ ಎಂದು ಹೇಳಿದ್ದರು.
ಅದಾದ ಬಳಿಕ ಕಾಮರಾಜು ಅರೆಸ್ಟ್ ಆದರು. ಜಾಮೀನು ಪಡೆದು ಹೊರಬಂದ ಬಳಿಕ ವಿಡಿಯೋವೊಂದನ್ನು ಮಾಡಿ, ನನ್ನದೇನೂ ತಪ್ಪಿಲ್ಲ. ಟ್ರಾಫಿಕ್ ಇದ್ದರೂ ಸಾದ್ಯವಾದಷ್ಟು ಬೇಗ ಹೋಗಿ ಮಹಿಳೆಗೆ ಊಟ ತಲುಪಿಸಿದೆ. ಅವರು ನನ್ನ ಮೇಲೆ ರೇಗಿದರು. ಹೊಡೆಯಲು ಬಂದಾಗ ತಪ್ಪಿಸಿಕೊಂಡೆ.. ಈ ವೇಳೆ ಅವರ ಕೈಲಿದ್ದ ಉಂಗುರವೇ ತಾಗಿ ಮೂಗಿನ ಮೇಲೆ ಗಾಯವಾಗಿದೆ. ನನಗೆ ಈ ಕೇಸ್ನಿಂದ ಹೊರಬರಬೇಕು, ದಯವಿಟ್ಟು ಸಹಾಯ ಮಾಡಿ ಎಂದು ಕಣ್ಣೀರು ಹಾಕುತ್ತ ಹೇಳಿಕೊಂಡಿದ್ದರು. ಇನ್ನು ಕಾಮರಾಜು ಅವರನ್ನು ಅಮಾನತು ಮಾಡಿದ್ದರೂ ಅವರ ಕಾನೂನು ಹೋರಾಟದ ವೆಚ್ಚವನ್ನು ನೋಡಿಕೊಳ್ಳುತ್ತೇವೆ ಎಂದು ಜೊಮ್ಯಾಟೊ ಹೇಳಿಕೊಂಡಿದೆ.
ಇಷ್ಟೆಲ್ಲ ಆದಮೇಲೆ ನೆಟ್ಟಿಗರು ಕಾಮರಾಜುಗೆ ಬೆಂಬಲ ನೀಡುತ್ತಿದ್ದಾರೆ. ಮಹಿಳೆ ಎಂಬ ಕಾರಣಕ್ಕೆ ಅವರ ಕಣ್ಣೀರು ಮಾತ್ರ ನೋಡಬೇಡಿ. ಇಲ್ಲಿ ಸತ್ಯವೇನು ಎಂಬುದನ್ನು ತನಿಖೆ ಮಾಡಿ. ಫುಡ್ ಡೆಲಿವರಿ ಬಾಯ್ ಕಾಮರಾಜು ಮುಗ್ಧರಂತೆ ಕಾಣುತ್ತಾರೆ. ಅವರನ್ನು ಕೆಲಸದಿಂದ ತೆಗೆದು ಹೊಟ್ಟೆಮೇಲೆ ಹೊಡೆಯಬೇಡಿ ಎಂದು ಅನೇಕರು ತಮ್ಮ ಸೋಷಿಯಲ್ ಮಿಡಿಯಾಗಳಲ್ಲಿ ಪೋಸ್ಟ್ ಹಾಕುವ ಮೂಲಕ ಕಾಮರಾಜು ಪರ ನಿಂತಿದ್ದಾರೆ. ನಿನ್ನೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕೂಡ ಕಾಮರಾಜು ಪರ ವಹಿಸಿದ್ದರು. ಆದಷ್ಟು ಬೇಗ ಘಟನೆಯ ಸತ್ಯ ಹೊರಬರಲಿ. ಮಹಿಳೆ ಮಾಡಿದ ಆರೋಪ ಸುಳ್ಳು ಎಂದಾದರೆ ಆಕೆಯೂ ಶಿಕ್ಷೆಯನ್ನು ಅನುಭವಿಸಲೇಬೇಕು. ಈ ವಿಚಾರದಲ್ಲಿ ನಾನು ಏನೇ ಸಹಾಯ ಮಾಡಲೂ ಸಿದ್ಧ ಎಂದಿದ್ದರು.
ಜಾನಿ ವಾಕರ್ ದಿ ಕೆಫೆ ಮೊದಲ ಹೆಜ್ಜೆ ಜೊಮ್ಯಾಟೊ ಕಂಪನಿ ಕಾಮರಾಜು ಅವರನ್ನು ವಾಪಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ. ಈ ನಿಟ್ಟಿನಲ್ಲಿ ಜಾನಿ ವಾಕರ್ ದಿ ಕೆಫೆ (Johnny Walker The Café) ರೆಸ್ಟೋರೆಂಟ್ ಮೊದಲ ಹೆಜ್ಜೆ ಇಟ್ಟಿದೆ. ಇನ್ಸ್ಟಾದಲ್ಲಿ ಕಾಮರಾಜು ಅವರ ಫೋಟೋವನ್ನು ಪೋಸ್ಟ್ ಮಾಡಿಕೊಂಡಿರುವ ಜಾನಿ ವಾಕರ್ ರೆಸ್ಟೋರೆಂಟ್, ನಾವಂತೂ ಕಾಮರಾಜ್ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಮರಾಜು ಅವರನ್ನ ಜೊಮ್ಯಾಟೊ ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರೆಗೂ ಅದರಿಂದ ನಾವು ಯಾವುದೇ ಆರ್ಡರ್ನ್ನೂ ಪಡೆಯುವುದಿಲ್ಲ. ಕಾಮರಾಜು ಅವರಿಗೆ ಆದ ಅನ್ಯಾಯ ಒಂದು ಉದಾಹರಣೆಯಷ್ಟೇ.. ಇಂಥ ಸಾವಿರಾರು ಘಟನೆಗಳು ನಡೆಯುತ್ತಿರುತ್ತವೆ. ಫುಡ್ ಡೆಲಿವರಿ ಬಾಯ್ಗಳು ಅವರ ಜೀವನಕ್ಕಾಗಿಯೇ ದುಡಿಯುತ್ತಿರುತ್ತಾರೆ, ಕಷ್ಟಪಡುತ್ತಿರುತ್ತಾರೆ. ಅವರ ಬಗ್ಗೆಯೂ ಗೌರವ ಇರಬೇಕು. ಕಾಮರಾಜು ಅವರ ಊಟವನ್ನು ಯಾರೇ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ. ಸತ್ಯ ಆದಷ್ಟು ಬೇಗ ಹೊರಬರುತ್ತದೆ. ಕಾಮರಾಜುವಿಗೆ ಖಂಡಿತ ನ್ಯಾಯ ಸಿಗುತ್ತದೆ ಎಂದು Johnny Walker The Café ಬರೆದುಕೊಂಡಿದೆ.
View this post on Instagram
ಇನ್ನು ಟ್ವಿಟರ್ನಲ್ಲಿ Kamaraj, Support Kamaraj, Justice For Kamaraj ಹ್ಯಾಷ್ಟ್ಯಾಗ್ಗಳ ಟ್ರೆಂಡ್ ಆಗುತ್ತಿವೆ. ಅವರ ಫೋಟೋ ಕೂಡ ತುಂಬ ವೈರಲ್ ಆಗುತ್ತಿವೆ. ಆ ಮಹಿಳೆ ಮಾತನಾಡುವ ಶೈಲಿಯಲ್ಲೇ ಗೊತ್ತಾಗುತ್ತದೆ ಆಕೆ ಸುಳ್ಳು ಹೇಳುತ್ತಿದ್ದಾರೆಂದು, ಒಂದೊಮ್ಮೆ ಕಾಮರಾಜು ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಎಂದಾದರೆ ಖಂಡಿತ ಆಕೆ ಕಾಮರಾಜು ಅವರಿಗೆ ಪರಿಹಾರ ಕೊಡಬೇಕು, ದಯವಿಟ್ಟು ಕಾಮರಾಜು ಅವರಿಗೆ ನ್ಯಾಯ ಕೊಡಿ-ಕೆಲಸ ವಾಪಸ್ ಕೊಡಿ, ಪುರುಷನ ಹಕ್ಕುಗಳೂ ಸಹ ಮಾನವ ಹಕ್ಕುಗಳೇ ಆಗಿವೆ, ಸುಳ್ಳು ಹೇಳಿ ಒಬ್ಬ ವ್ಯಕ್ತಿಯ ಜೀವನದ ಜತೆ ಚೆಲ್ಲಾಟ ಆಡುತ್ತಿರುವ ಮಹಿಳೆಗೆ ಕಠಿಣ ಶಿಕ್ಷೆಯಾಗಬೇಕು ಎಂಬಿತ್ಯಾದಿ ಪೋಸ್ಟ್ಗಳು ಟ್ವಿಟರ್, ಇನ್ಸ್ಟಾ ಮತ್ತು ಫೇಸ್ಬುಕ್ನಲ್ಲಿ ಹರಿದಾಡುತ್ತಿವೆ.
So, food delivery is time-bound but justice is not? If the delivery man’s version is found to be true, strict action must be taken for mischaractarization.
I hope justice is delivered swiftly too. #ZomatoDeliveryGuy #JusticeForKamaraj #Zomato pic.twitter.com/IpqxiEOCFO
— Pranitha Subhash (@pranitasubhash) March 14, 2021
This picture broke my heart ?☹️??#JusticeForKamaraj pic.twitter.com/Dz5AAXJtvU
— प्रवीण चौहान ? 40k (@YamrajFromHell) March 14, 2021
We Stand with kamaraj ✊#JusticeForKamaraj #ZomatoDeliveryGuy pic.twitter.com/9KvyeBbv7j
— SSMB EMPIRE FC™ (@SSMBEMPIRE) March 14, 2021
Published On - 12:20 pm, Mon, 15 March 21