ಸಿಪಿಎಂ ಮುಖಂಡನ ಅಟ್ಟಹಾಸಕ್ಕೆ ಮಗು ಕಳೆದುಕೊಂಡಿದ್ದಾಕೆ ಈಗ ಬಿಜೆಪಿ ಅಭ್ಯರ್ಥಿ; ಟಿಕೆಟ್​ ನೀಡಲು ಇದೆ ಒಂದು ಮುಖ್ಯ ಕಾರಣ​​

ಭೂವಿವಾದಕ್ಕೆ ಸಂಬಂಧಪಟ್ಟಂತೆ ಜ್ಯೋತ್ಸ್ನಾ ಮನೆಗೆ ಆಗಮಿಸಿದ್ದ 8 ಗೂಂಡಾಗಳು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದರು. 5ವರ್ಷದ ಮಗ ಸೇರಿ ಎಲ್ಲರನ್ನೂ ಮನೆಯೊಳಗೆ ಕೂಡಿ ಹಾಕಿ ಥಳಿಸಿದ್ದರು. ಆ ಸಮಯದಲ್ಲಿ ಗರ್ಭಿಣಿ ಜ್ಯೋತ್ಸ್ನಾ ಹೊಟ್ಟೆಗೆ ಥಾಂಬೆ ಎಂಬುವನು ಒದ್ದಿದ್ದ.

ಸಿಪಿಎಂ ಮುಖಂಡನ ಅಟ್ಟಹಾಸಕ್ಕೆ ಮಗು ಕಳೆದುಕೊಂಡಿದ್ದಾಕೆ ಈಗ ಬಿಜೆಪಿ ಅಭ್ಯರ್ಥಿ; ಟಿಕೆಟ್​ ನೀಡಲು ಇದೆ ಒಂದು ಮುಖ್ಯ ಕಾರಣ​​
ಬಿಜೆಪಿ ಅಭ್ಯರ್ಥಿ ಜ್ಯೋತ್ಸ್ನಾ ಜೋಸ್​(ಎಡ), ಬಿ.ಎಲ್​ ಸಂತೋಷ್​ (ಬಲ)
Follow us
Lakshmi Hegde
|

Updated on:Nov 30, 2020 | 2:56 PM

ತಿರುವನಂತಪುರ: ಸಿಪಿಎಂ ಮುಖಂಡನ ಅಟ್ಟಹಾಸಕ್ಕೆ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡಿದ್ದ ಜ್ಯೋತ್ಸ್ನಾ ಜೋಸ್​ ಕೆಲವರಿಗಾದರೂ ನೆನಪಿರಬಹುದು. 2018ರ ಫೆಬ್ರವರಿಯಲ್ಲಿ ಈ ದುರ್ಘಟನೆ ನಡೆದಿತ್ತು. ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದ ಜ್ಯೋತ್ಸ್ನಾರ ಹೊಟ್ಟೆಗೆ ಕಮ್ಯೂನಿಸ್ಟ್ ಪಕ್ಷದ ನಾಯಕ ಥಾಂಬೆ ಎಂಬಾತ ಒದ್ದ ಪರಿಣಾಮ ಆಕೆಗೆ ಗರ್ಭಪಾತವಾಗಿತ್ತು.

ಅದೇ ಜ್ಯೋತ್ಸ್ನಾ ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಾಲಸ್ಸೇರಿ ಪಂಚಾಯತ್​​ನಿಂದ ಇವರಿಗೆ ಟಿಕೆಟ್​ ನೀಡಲು ಪಕ್ಷ ನಿರ್ಧಾರ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ ಟ್ವೀಟ್​ ಮಾಡಿ ಈ ವಿಷಯ ಬಹಿರಂಗಪಡಿಸಿದ್ದಾರೆ. ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದ ಜ್ಯೋತ್ಸ್ನಾ ಜೋಸ್​ ಸಿಪಿಎಂ ಗೂಂಡಾನ ದೌರ್ಜನ್ಯದಿಂದ ಮಗುವನ್ನು ಕಳೆದುಕೊಂಡಿದ್ದರು. ಇವರೀಗ ಕೇರಳದಲ್ಲಿ ಕಮ್ಯುನಿಸ್ಟ್​ರ ಕ್ರೂರತನ, ಅಮಾನವೀಯತೆಯ ಯುಗಕ್ಕೆ ಅಂತ್ಯಹಾಡಲು ಬಾಲಸ್ಸೇರಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ? ಭೂವಿವಾದಕ್ಕೆ ಸಂಬಂಧಪಟ್ಟಂತೆ ರಾತ್ರಿ ಹೊತ್ತಲ್ಲಿ ಜ್ಯೋತ್ಸ್ನಾ ಮನೆಗೆ ಆಗಮಿಸಿದ್ದ 8 ಗೂಂಡಾಗಳು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದರು. 5 ವರ್ಷದ ಮಗ ಸೇರಿ ಎಲ್ಲರನ್ನೂ ಮನೆಯೊಳಗೆ ಕೂಡಿ ಹಾಕಿ ಥಳಿಸಿದ್ದರು. ಆ ಸಮಯದಲ್ಲಿ ಜ್ಯೋತ್ಸ್ನಾ ಗರ್ಭಿಣಿಯಾಗಿದ್ದರು. ಇಬ್ಬರು ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರೆ, ಥಾಂಬೆ ಎಂಬುವನು ಹೊಟ್ಟೆಗೆ ಒದ್ದಿದ್ದ. ಈತ ಸಿಪಿಎಂ ಮುಖಂಡ ಎಂದು ಬಳಿಕ ತಿಳಿದುಬಂದಿತ್ತು. ಕೂಡಲೇ ಜ್ಯೋತ್ಸ್ನಾರನ್ನು ಆಸ್ಪತ್ರೆಗೆ ದಾಖಲಿಸಿದರೂ ಮಗು ಉಳಿಯಲಿಲ್ಲ. ಹಲ್ಲೆ ಮಾಡಲು ಬಂದವರಲ್ಲಿ ಮಹಿಳೆಯೂ ಇದ್ದಳು ಎನ್ನಲಾಗಿತ್ತು.

ಇದಾದ ಬಳಿಕ ಜ್ಯೋತ್ಸ್ನಾ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದರು. ನಾನು ಕರೆ ಮಾಡಿದರೆ, ನಮಗೆ ಅಲ್ಲಿಗೆ ಬರಲು ವಾಹನವಿಲ್ಲ ಎಂದು ಸಬೂಬು ಹೇಳಿದ್ದರು. ಅಷ್ಟರಲ್ಲಿ ಅವಘಡ ಆಗಿ ಮುಗಿದಿತ್ತು ಎಂದು ತಿಳಿಸಿದ್ದರು. ಇನ್ನು ಜ್ಯೋತ್ಸ್ನಾ ಪತಿ ಕೂಡ ಎರಡು ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಅಷ್ಟಾದರೂ ಬೇಗ ಕ್ರಮ ಕೈಗೊಂಡಿರಲಿಲ್ಲ. ದೂರು ವಾಪಸ್ ತೆಗೆದುಕೊಳ್ಳದೆ ಹೋದರೆ ಕೊಲ್ಲುವುದಾಗಿ ಅವರಿಗೆ ಬೆದರಿಕೆಯೂ ಬರುತ್ತಿತ್ತು. ನಂತರ ಪ್ರಕರಣ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು 7 ಮಂದಿಯನ್ನು ಬಂಧಿಸಿದ್ದರು.

ಯಾವಾಗ ಚುನಾವಣೆ? ಕೇರಳದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು, ಮೂರು ಹಂತಗಳಲ್ಲಿ ನಡೆಯಲಿದೆ. ಡಿ.8ರಂದು ಮೊದಲ ಹಂತ, 10ರಂದು ಎರಡು ಹಾಗೂ 14ರಂದು ಮೂರನೇ ಹಂತದಲ್ಲಿ ಎಲೆಕ್ಷನ್ ನಡೆಯಲಿದ್ದು, ಡಿಸೆಂಬರ್​ 16ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು.. ಮಹಾಲಿಂಗಪುರ ಪುರಸಭೆ ನೂಕಾಟ ಪ್ರಕರಣ: BJP ಸದಸ್ಯೆ ಚಾಂದಿನಿ ನಾಯಕ್​ಗೆ ಗರ್ಭಪಾತ ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ

Published On - 2:52 pm, Mon, 30 November 20

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ