ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದ ಮೋದಿ ಸರ್ಕಾರ ತಮಿಳುನಾಡನ್ನೇ ಬೆಂಬಲಿಸಲಿದೆ: ಅಣ್ಣಾಮಲೈ

| Updated By: guruganesh bhat

Updated on: Aug 05, 2021 | 2:52 PM

Mekedatu Project: ಕರ್ನಾಟಕದ ಮೂರು ಪಕ್ಷದ ವಿರುದ್ದವೂ ನಾವು ಹೋರಾಟ ಮಾಡುತ್ತೇವೆ ಎಂದ ಕೆ. ಅಣ್ಣಾಮಲೈ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರದ ಮೋದಿ ಸರ್ಕಾರ ತಮಿಳುನಾಡನ್ನೇ ಬೆಂಬಲಿಸಲಿದೆ: ಅಣ್ಣಾಮಲೈ
ಕೆ.ಅಣ್ಣಾಮಲೈ
Follow us on

ಚೆನ್ನೈ: ಯಾವುದೇ ಕಾರಣಕ್ಕೂ ಮೇಕೆದಾಟು ಆಣೇಕಟ್ಟು (Mekedatu Project) ಕಟ್ಟಲು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಹ ನಮ್ಮ ಹೋರಾಟ ಮುಂದುವರೆಯುತ್ತದೆ. ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸುತ್ತದೆ ಎಂದು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ (K.Annamalai) ಹರಿಹಾಯ್ದಿದ್ದಾರೆ. ಕರ್ನಾಟಕದ ಮೂರು ಪಕ್ಷದ ವಿರುದ್ದವೂ ನಾವು ಹೋರಾಟ ಮಾಡುತ್ತೇವೆ ಎಂದ ಕೆ. ಅಣ್ಣಾಮಲೈ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಮಕ್ಕಳು ಒಂದಾಗಿ ಹೋರಾಟ ಮಾಡೋಣ ಎಂದು ತಮಿಳುನಾಡಿನ ಜನರಿಗೆ ಕರೆ ನೀಡಿರುವ ಅವರು, ಇಂದು ಸಂಜೆ ಕೆಲವು ನಿರ್ಣಯಗಳನ್ನ ನಾವು ತೆಗದುಕೊಳ್ಳಲಿದ್ದೇವೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್‌ನವರು ಬೆಂಬಲ ಕೊಟ್ಟಿಲ್ಲ. ಜತೆಗೆ ಕಮಲ್ ಹಾಸನ್ ಸಹ ಬೆಂಬಲಿಸಿಲ್ಲ. ಎಸಿ ಕೊಠಡಿಗಳಲ್ಲಿ ಕುಳಿತವರು ಬೆಂಬಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 

ಹುಟ್ಟುಹಬ್ಬ ದಿನದಂದೇ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅಬ್ಬರ; ಮೇಕೆ ದಾಟು ಯೋಜನೆ ಬಗ್ಗೆ ಕೇಂದ್ರ ಕೊಟ್ಟ ಉತ್ತರ ಇಲ್ಲಿದೆ

Kamal Haasan: ಮೇಕೆದಾಟು ವಿಚಾರದಲ್ಲಿ ಬಿಜೆಪಿಯಿಂದ ಡಬಲ್ ಆ್ಯಕ್ಟಿಂಗ್; ವಿಪಕ್ಷಗಳ ಒಕ್ಕೂಟ ಸೇರಲು ಸಿದ್ಧ ಎಂದ ಕಮಲ್ ಹಾಸನ್

(K Annamalai on Mekedatu project says if BJP government in Karnataka Central Narendra Modi govt will support Tamil Nadu)

Published On - 2:18 pm, Thu, 5 August 21