ಗುಜರಾತ್​ನಲ್ಲಿ ಮೊದಲ ದೇಶೀಯ 700 ಮೆ.ವಾ ಪರಮಾಣು ಶಕ್ತಿ ರಿಯಾಕ್ಟರ್‌ ಕಾರ್ಯಾರಂಭ; ಮೈಲಿಗಲ್ಲು ಎಂದ ಪ್ರಧಾನಿ ಮೋದಿ

|

Updated on: Aug 31, 2023 | 10:27 PM

Kakrapar Atomic Power Project; ಪರಮಾಣು ಶಕ್ತಿ ಇಲಾಖೆ (ಡಿಎಇ) ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಪಿಸಿಐಎಲ್) ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪರಮಾಣು ಶಕ್ತಿ ರಿಯಾಕ್ಟರ್‌ಗಳ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.

ಗುಜರಾತ್​ನಲ್ಲಿ ಮೊದಲ ದೇಶೀಯ 700 ಮೆ.ವಾ ಪರಮಾಣು ಶಕ್ತಿ ರಿಯಾಕ್ಟರ್‌ ಕಾರ್ಯಾರಂಭ; ಮೈಲಿಗಲ್ಲು ಎಂದ ಪ್ರಧಾನಿ ಮೋದಿ
ಕಕ್ರಾಪರ್ ಅಣು ವಿದ್ಯುತ್ ಯೋಜನೆ
Image Credit source: L&T
Follow us on

ನವದೆಹಲಿ, ಆಗಸ್ಟ್ 31: ಗುಜರಾತಿನ ಕಕ್ರಾಪರ್ ಅಣು ವಿದ್ಯುತ್ ಯೋಜನೆಯಡಿ (KAPP) ದೇಶದ ಮೊದಲ ದೇಶೀಯ 700 ಮೆಗಾವ್ಯಾಟ್ ವಿದ್ಯುತ್ (MWe) ಪರಮಾಣು ಶಕ್ತಿ ರಿಯಾಕ್ಟರ್‌ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ತಾಣ ಎಕ್ಸ್‌ (ಟ್ವಿಟರ್) ನಲ್ಲಿ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ, ಭಾರತವು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಗುಜರಾತಿನಲ್ಲಿ 700 MWe ಸಾಮರ್ಥ್ಯದ ಅತಿ ದೊಡ್ಡ ಸ್ವದೇಶಿ ಕಕ್ರಪಾರ್ ಪರಮಾಣು ವಿದ್ಯುತ್ ಸ್ಥಾವರ ಘಟಕ-3 ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು ಎಂದು ಉಲ್ಲೇಖಿಸಿದ್ದಾರೆ.

ಪರಮಾಣು ಶಕ್ತಿ ಇಲಾಖೆ (ಡಿಎಇ) ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​ಪಿಸಿಐಎಲ್) ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪರಮಾಣು ಶಕ್ತಿ ರಿಯಾಕ್ಟರ್‌ಗಳ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತದೆ.


ಎನ್​ಪಿಸಿಐಎಲ್ ಪ್ರಸ್ತುತ 23 ವಾಣಿಜ್ಯ ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು 7480 MW ಸಂಯೋಜಿತ ಸಾಮರ್ಥ್ಯದೊಂದಿಗೆ ನಿರ್ವಹಿಸುತ್ತದೆ. ರಿಯಾಕ್ಟರ್ ಫ್ಲೀಟ್ ಎರಡು ಬಾಯ್ಲಿಂಗ್ ವಾಟರ್ ರಿಯಾಕ್ಟರ್‌ಗಳನ್ನು (BWRs), 19 ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು (PHWRs) ಒಳಗೊಂಡಿರುತ್ತದೆ. ಇದರಲ್ಲಿ ಒಂದು 100 MW ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ ರಾಜಸ್ಥಾನದಲ್ಲಿ ಡಿಎಇ, ಕೇಂದ್ರ ಸರ್ಕಾರದ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ಇನ್ನೆರಡು 1000 MW ಸಾಮರ್ಥ್ಯದ ವಿವಿಇಆರ್ ರಿಯಾಕ್ಟರ್‌ಗಳನ್ನು ಒಳಗೊಂಡಿದೆ. ಕಕ್ರಾಪರ್ ಅಣುಶಕ್ತಿ ಯೋಜನೆ (KAPP) ಯುನಿಟ್ 3 ಜೂನ್ 30, 2023 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಎನ್​ಪಿಸಿಐಎಲ್ ಒಟ್ಟು 7500 MW ಸಾಮರ್ಥ್ಯದೊಂದಿಗೆ ನಿರ್ಮಾಣ ಹಂತದ ಇನ್ನೂ 9 ರಿಯಾಕ್ಟರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ಪಿಐಬಿಯ ಪ್ರಧಾನ ನಿರ್ದೇಶಕರಾಗಿ ಸಿಬಿಸಿ ಮುಖ್ಯಸ್ಥ ಮನೀಶ್ ದೇಸಾಯಿ ನೇಮಕ

ಹರಿಯಾಣದ ಗೋರಖ್‌ಪುರ, ಮಧ್ಯಪ್ರದೇಶದ ಚುಟ್ಕಾ, ರಾಜಸ್ಥಾನದ ಮಾಹಿ ಬನ್ಸ್​ವಾರಾ ಮತ್ತು ಕರ್ನಾಟಕದ ಕೈಗಾ ಎಂಬ ನಾಲ್ಕು ಸ್ಥಳಗಳಲ್ಲಿ ಫ್ಲೀಟ್ ಮೋಡ್‌ನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ 10 ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್​​ಗಳನ್ನು ನಿರ್ಮಿಸಲು ಸರ್ಕಾರವು ಅನುಮತಿ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 9:52 pm, Thu, 31 August 23