Kallakurichi Hooch Tragedy: ಕಳ್ಳಭಟ್ಟಿ ದುರಂತ; ಸ್ಟಾಲಿನ್ ಸರ್ಕಾರದ ವಿರುದ್ಧ ದಳಪತಿ ವಿಜಯ್ ಟೀಕೆ

ಕಲ್ಲಕುರಿಚಿ ಕಳ್ಳಭಟ್ಟಿ ದುರಂತ ತಮಿಳುನಾಡಿನಲ್ಲಿ ಮಾತ್ರವಲ್ಲ ಭಾರತದಾದ್ಯಂತ ಆಘಾತವನ್ನು ಉಂಟುಮಾಡಿದೆ. ತಮಿಳುನಾಡು ವೆಟ್ರಿ ಕಳಗಂ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ನಿನ್ನೆ ಬೆಳಗ್ಗೆ ತಮಿಳುನಾಡು ಸರ್ಕಾರವನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಈ ದುರಂತಕ್ಕೆ ಸ್ಟಾಲಿನ್ ಸರ್ಕಾರವೇ ಹೊಣೆ ಎಂದಿದ್ದಾರೆ.

Kallakurichi Hooch Tragedy: ಕಳ್ಳಭಟ್ಟಿ ದುರಂತ; ಸ್ಟಾಲಿನ್ ಸರ್ಕಾರದ ವಿರುದ್ಧ ದಳಪತಿ ವಿಜಯ್ ಟೀಕೆ
ಕಲ್ಲಕುರಿಚಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರನ್ನು ದಳಪತಿ ವಿಜಯ್ ಭೇಟಿಯಾಗಿದ್ದಾರೆ.
Follow us
|

Updated on: Jun 21, 2024 | 9:46 PM

ಚೆನ್ನೈ: ಕಳ್ಳಭಟ್ಟಿ ಸೇವಿಸಿ ಆಸ್ಪತ್ರೆಯಲ್ಲಿ ಕಲ್ಲಕುರಿಚಿಯಲ್ಲಿ (Kallakurichi Hooch Tragedy) ಚಿಕಿತ್ಸೆ ಪಡೆಯುತ್ತಿರುವ ಹಲವು ಜನರನ್ನು ತಮಿಳುನಾಡು ವೆಟ್ರಿ ಕಳಗಂ (Tamilaga Vettri Kazhagam) ಅಧ್ಯಕ್ಷ ದಳಪತಿ ವಿಜಯ್ (Thalapathy Vijay) ಖುದ್ದು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಕಲ್ಲಕುರಿಚಿಯಲ್ಲಿ ಮದ್ಯ ಸೇವಿಸಿದ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 48 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಜನರಲ್ಲಿ ಮುಂದುವರಿದಿದೆ. ವಿಷ ಮಿಶ್ರಿತ ಮದ್ಯ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸರ್ಕಾರ (Tamil Nadu Government) 10 ಲಕ್ಷ ರೂ. ಪರಿಹಾರ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಖುದ್ದು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಕಲ್ಲಕುರಿಚಿ ಕರುಣಾಪುರಂ ಕೋಮುಕಿ ಬಡಾವಣೆಯ ನಿವಾಸಿ 49 ವರ್ಷದ ಗೋವಿಂದರಾಜ್, ಅವರ ಪತ್ನಿ ವಿಜಯ ಮತ್ತು ಪುತ್ರ ದಾಮೋದರನ್ ಎಂಬುವರು ನಕಲಿ ಮದ್ಯ ಮಾರಾಟ ಮಾಡುತ್ತಿದ್ದರು. ಜೂನ್ 18ರಂದು ನಕಲಿ ಮದ್ಯ ಸೇವಿಸಿ ಹಲವರಿಗೆ ಎದೆನೋವು ಕಾಣಿಸಿಕೊಂಡು ಬಾಯಲ್ಲಿ ನೊರೆ ಬಂದು ಮೂರ್ಛೆ ಹೋಗಿದ್ದರು. ಹಲವರು ಸಾವನ್ನಪ್ಪಿದ್ದರು. ಇಂದಿನವರೆಗೆ ಒಟ್ಟಾರೆ 48 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kallakurichi Hooch Tragedy: ಕಲ್ಲಕುರಿಚಿ ಕಳ್ಳಭಟ್ಟಿ ದುರಂತ; ಸಾವಿನ ಸಂಖ್ಯೆ 48ಕ್ಕೆ ಏರಿಕೆ; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ನಟ ದಳಪತಿ ವಿಜಯ್ ಫೆಬ್ರವರಿ 2ರಂದು ಅಧಿಕೃತವಾಗಿ ತಮ್ಮ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ಅವರು ತಮ್ಮ ಪಕ್ಷವನ್ನು ತಮಿಳುನಾಡು ವೆಟ್ರಿ ಕಳಗಂ ಎಂದು ಘೋಷಿಸಿದ್ದಾರೆ. ಪಕ್ಷದ ಹೆಸರಿನಲ್ಲಿ ಕಾಗುಣಿತ ದೋಷವಿದೆ ಎಂದು ಹಲವರು ಪ್ರತಿಕ್ರಿಯಿಸಿದಾಗ, ಪಕ್ಷದ ಹೆಸರನ್ನು ತಮಿಳುನಾಡು ವಿಕ್ಟರಿ ಕಳಗಂ ಎಂದು ಬದಲಾಯಿಸಿದ್ದರು. ಆ ನಂತರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತುತ್ತಿದ್ದ ಅವರು ಕೇವಲ ಅಭಿನಂದನಾ ಸಂದೇಶಗಳನ್ನು ಹಾಕುತ್ತಿದ್ದರು. ಇದೀಗ ಅವರು ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ.

ತಮಿಳುನಾಡಿನಲ್ಲಿ ಅಕ್ರಮ ಮದ್ಯ ಸೇವಿಸಿ 48 ಜನರು ಸಾವನ್ನಪ್ಪಿದ್ದಾರೆ. ದೂರದರ್ಶನ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದುಃಖಿತ ಕುಟುಂಬಗಳ ಹಲವಾರು ವೀಡಿಯೊಗಳು ಹರಿದಾಡುತ್ತಿವೆ. ನಟ ದಳಪತಿ ವಿಜಯ್ ಕೂಡ ಕಳ್ಳಭಟ್ಟಿ ದುರಂತದಿಂದ ಸಾವಿಗೀಡಾದವರ ಮನೆಯವರು ಮತ್ತು ಗಾಯಗೊಂಡವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸ್ಟಾಲಿನ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ಈ ಘಟನೆಯ ಹೊಣೆಯನ್ನು ಸರ್ಕಾರವೇ ಹೊರಬೇಕು. ಜನರ ಜೀವ ಮುಖ್ಯವಾಗಿದ್ದು, ಸರ್ಕಾರ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕಲ್ಲಕುರಿಚಿ ಕಳ್ಳಭಟ್ಟಿ ದುರಂತ; ಮೃತರ ಕುಟುಂಬಕ್ಕೆ ಸಿಎಂ ಸ್ಟಾಲಿನ್ 10 ಲಕ್ಷ ರೂ. ಪರಿಹಾರ ಘೋಷಣೆ

ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ ಹಲವಾರು ಜನ ಸಾವನ್ನಪ್ಪಿರುವ ಸುದ್ದಿ ಆಘಾತಕಾರಿ ಮತ್ತು ಹೃದಯವಿದ್ರಾವಕವಾಗಿದೆ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ಅರ್ಪಿಸುತ್ತೇನೆ ಮತ್ತು ಚಿಕಿತ್ಸೆಯಲ್ಲಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಮಿಳುನಾಡು ಸರ್ಕಾರ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಬಲವಾಗಿ ವಿನಂತಿಸುತ್ತೇನೆ.” ಎಂದು ನಟ ವಿಜಯ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ