ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಶುಲ್ಕ ಕಡಿತ ಆದೇಶ ಖಂಡಿಸಿ ಬೃಹತ್ ಸಮಾವೇಶ
ಶುಲ್ಕ ಕಡಿತ ಆದೇಶ ಖಂಡಿಸಿ ಇಂದು (ಫೆಬ್ರವರಿ 23) ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಬೃಹತ್ ಸಮಾವೇಶ ನಡೆಸಿದ್ದು. ಕೆಎಸ್ಆರ್ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೆ ಮೆರವಣಿಗೆ ನಡೆಸಿದರು.
Link: ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿ ಬೃಹತ್ ಸಮಾವೇಶ
2) ‘ಪೊಗರು’ ಸಿನಿಮಾ ವಿವಾದಕ್ಕೆ ಅಂತ್ಯ
ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿದ ದೃಶ್ಯವನ್ನು ತೆಗೆಯಲು ಎಡಿಟಿಂಗ್ ಶುರುವಾಗಿದೆ ಎಂದು ನಿರ್ದೇಶಕ ನಂದಕಿಶೋರ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Link: ನಾಳೆಯೊಳಗೆ ದೃಶ್ಯ ತೆಗೆಯುತ್ತೇವೆ: ಪೊಗರು ನಿರ್ದೇಶಕ ನಂದಕಿಶೋರ್
3) ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಐವರ ಸಾವು
ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿದೆ.
Link: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ
4) ಪರಿಸರ ಹೋರಾಟಗಾರ್ತಿ ದಿಶಾ ರವಿಗೆ ಜಾಮೀನು
‘ಭಾರತಕ್ಕೆ ಅಪಖ್ಯಾತಿ ತರಲು, ರೈತರ ಪ್ರತಿಭಟನೆಯ ನೆರಳಿನಲ್ಲಿ ಶಾಂತಿ ಕದಡುವ ಜಾಗತಿಕ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂಬ ಆರೋಪದ ದೆಹಲಿ ಪೊಲೀಸರು ದಿಶಾ ರವಿ ಅವರನ್ನು ಬಂಧಿಸಿದ್ದರು.
Link: ದಿಶಾ ರವಿಗೆ ಜಾಮೀನು ಮಂಜೂರು
5) India vs England: 3ನೇ ಟೆಸ್ಟ್ ಪಂದ್ಯದ ಸಮಗ್ರ ವಿವರ ಇಲ್ಲಿದೆ
ಮೂರನೇ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಪಿಂಕ್ ಬಾಲನ್ನು ಬಳಸಿ ಆಡಲಾಗುತ್ತದೆ. ಪಂದ್ಯ ನಡೆಯುವ ಸ್ಥಳ, ವೀಕ್ಷಣೆ ಯಾವ ಚಾನೆಲ್ನಲ್ಲಿ, ಆಡಬಹುದಾದ ಆಟಗಾರರ ವಿವರ ಇಲ್ಲಿದೆ.
Link: ಅಹಮದಾಬಾದ್ ಪಿಂಕ್ ಟೆಸ್ಟ್
6) ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳ ತೆರಿಗೆ ವಿವರ
ನಿಮ್ಮ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ? ಆ ಪೈಕಿ ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಎಷ್ಟು ತೆರಿಗೆ ಹೋಗುತ್ತದೆ, ದೇಶದ ರಾಜ್ಯಗಳ ಪೈಕಿ ಅತಿ ಹೆಚ್ಚಿನ ತೆರಿಗೆ ಹಾಕುತ್ತಿರುವುದು ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Link: ಪೆಟ್ರೋಲ್ ತೆರಿಗೆ ಲೆಕ್ಕ
7) TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನವರಸ ನಾಯಕ
ಸತ್ಯಕ್ಕೆ ಬೆಳಕು ಚೆಲ್ಲಿದ ಟಿವಿ9 ಕನ್ನಡಕ್ಕೆ ಧನ್ಯವಾದ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ನಿನ್ನೆ ರಾತ್ರಿ ಟಿವಿ9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನವರಸ ನಾಯಕ ಮುಂದುವರೆಯದಿರಲಿ ಈ ಅಪನಂಬಿಕೆ ಎಂದು ಹೇಳಿದ್ದಾರೆ.
Link: ಅಪನಂಬಿಕೆ ಮುಂದುವರಿಯದಿರಲಿ: ನಟ ಜಗ್ಗೇಶ್
8) ಐತಿಹಾಸಿಕ ಟೆಸ್ಟ್ಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ರೆಡಿ
ಮೊಟ್ಟೆರಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆಸುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣವು ಎಲ್ಲರನ್ನೂ ಆಕರ್ಷಿಸುತ್ತಿದೆ.
Link: ಮೊಟೆರಾ ಕ್ರೀಡಾಂಗಣದ 10 ವೈಶಿಷ್ಟ್ಯಗಳು
9) ಕಬ್ಬನ್ ಪಾರ್ಕ್ ಸುಧಾರಣೆಗೆ ಸಾರ್ವಜನಿಕರ ಸಲಹೆಗಳು
ಕಬ್ಬನ್ಪಾರ್ಕ್ ಹೇಗೆಲ್ಲ ಅಭಿವೃದ್ಧಿಗೊಳಿಸಬಹುದು ಎಂಬ ಬಗ್ಗೆ ಕಳೆದ ವಾರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
Link: ಇನ್ನಷ್ಟು ಸುಧಾರಣೆಯಾಗಲಿ ಕಬ್ಬನ್ ಪಾರ್ಕ್
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ https://tv9kannada.com ನೋಡುತ್ತಿರಿ.